ಹಂಪಿ ಉತ್ಸವದಲ್ಲಿ ಕಿಡಿಗೇಡಿಗಳ ಕೀಟಲೆ: ಪ್ರದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಕೇರ್ ಮೇಲೆ ಬಾಟಲಿ ಎಸೆತ

Published : Jan 30, 2023, 11:07 AM IST
ಹಂಪಿ ಉತ್ಸವದಲ್ಲಿ ಕಿಡಿಗೇಡಿಗಳ ಕೀಟಲೆ: ಪ್ರದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಕೇರ್ ಮೇಲೆ ಬಾಟಲಿ ಎಸೆತ

ಸಾರಾಂಶ

ನಿನ್ನೆ ತಡರಾತ್ರಿಯವರೆಗೆ ವಿಜಯನಗರ ಜಿಲ್ಲೆಯ ಹಂಪಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಕನ್ನಡದ ಹಾಡನ್ನು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಕೇರ್ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿ ಕೀಟಲೆ ಪ್ರದರ್ಶನ ಮಾಡಿದ್ದಾರೆ.

ವಿಜಯನಗರ (ಜ.30): ನಿನ್ನೆ ತಡರಾತ್ರಿಯವರೆಗೆ ವಿಜಯನಗರ ಜಿಲ್ಲೆಯ ಹಂಪಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಕನ್ನಡದ ಹಾಡನ್ನು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಕೇರ್ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿ ಕೀಟಲೆ ಪ್ರದರ್ಶನ ಮಾಡಿದ್ದಾರೆ. ಜೊತಗೆ,ಮೂರು ದಿನಗಳ ಕಾಲ ಶಾಮತಿಯುತವಾಗಿ ನಡೆದಿದ್ದ ಹಂಪಿ ಉತ್ಸವದಲ್ಲಿ ಕೊನೆಯ ದಿನ ಗಾಯಕನ ಮೇಲೆ ಬಾಟಲಿ ಎಸೆದು ಅವಮಾನ ಎಸಗುವ ಮೂಲಕ ಕಪ್ಪು ಚುಕ್ಕೆ ಉಳಿದುಕೊಳ್ಳುವಂತೆ ಮಾಡಿದ್ದಾರೆ.

ಮೂರು ದಿನಗಳ ಕಾಲ ನಡೆಯುತ್ತಿದ್ದ ಹಂಪಿ ಉತ್ಸವದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕೊನೆಯ ದಿನವಾದ ನಿನ್ನೆ ರಾತ್ರಿ ವೇಳೆ ಗಾಯತ್ರಿ ಪೀಠದ ವೇದಿಕೆಯಲ್ಲಿ ತಡರಾತ್ರಿವರೆಗೂ ನಡೆದ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪ್ರದ್ಮಶ್ರೀ ಪುರಸ್ಕೃತ ಕೈಲಾಸ್ ಕೇರ್ ಅವರು ಹಿಂದಿ ಚಲನಚಿತ್ರದ ಹಾಡುಗಳನ್ನು ಹಾಡುತ್ತಿದ್ದರು. ಆದರೆ, ಅವರು ಕನ್ನಡದ ಹಾಡುಗಳನ್ನು ಹಾಡುತ್ತಿಲ್ಲವೆಂದು ಪ್ರೇಕ್ಷಕರ ಗ್ಯಾಲರಿಯಿಂದ ಕೈಲಾಸ್‌ ಕೇರ್‌ ಅವರ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ. ಬಾಟಲಿ ಎಸೆದ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Hampi Utsav 2023: ಹಂಪಿ ಉತ್ಸವದಲ್ಲಿ ಸಾಹಸ ಕ್ರೀಡೆಗಳ ಕಲರವ, ಕೆರೆಯಲ್ಲಿ ಪ್ರವಾಸಿಗರ ಜಾಲಿರೈಡ್‍

ಕೈಲಾಸ್‌ಗೆ ತಗುಲದ ಬಾಟಲ್‌: ಪ್ರೇಕ್ಷಕರ ಗ್ಯಾಲರಿಯಿಂದ ಕಿಡಿಗೇಡಿಗಳು ಗಾಯಕನ ಮೇಲೆ ಎಸೆದ ಬಾಟಲಿ ಸ್ವಲ್ಪದರಲ್ಲಿಯೇ ಗುರಿ ತಪ್ಪಿ ಬೇರೆಡೆಗೆ ಬಿದ್ದಿತು. ಒಂದು ಲೀಟರ್‌ ಕುಡಿಯುವ ನೀರಿನ ಬಾಟಲಿ ಆಗಿದ್ದು, ಅವರ ಮೇಲೆ ಬಿದ್ದಿದ್ದರೆ ಗಾಯ ಉಂಟಾಗುತ್ತಿತ್ತು. ಆದರೆ, ನೀರಿನ ಬಾಟಲಿ ಎಸೆದರೂ ಗಾಯಕ ಕೈಲಾಸ್‌ ಕೇರ್‌ ಅವರು ಸ್ವಲ್ಪವೂ ವಿಚಲಿತರಾಗದೇ ಗಾಯನ ಮುಂದುವರೆಸಿದರು. ಆಗ ಸಂಗೀತ ವಾದ್ಯ ನುಡಿಸುವವರು ಸ್ವಲ್ಪ ವಿಚಲಿತರಾಗಿದ್ದರು. ನಂತರ ಕಾರ್ಯಕ್ರಮ ಆಯೋಜಕರು ವಾಟರ್‌ ಬಾಟಲಿಯನ್ನು ಎತ್ತಿಕೊಂಡು ಹೋಗಿದ್ದಾರೆ. ನಂತರ ಪೊಲೀಸರು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕಿಡಿಗೇಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಂಪಿ ಉತ್ಸವ ರಾಜ್ಯದ ಇತರೆ ಪ್ರದೇಶಕ್ಕೆ ಮಾದರಿ: ಇನ್ನು ಕೊನೆಯ ದಿನ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ ವಿಜೃಂಭಣೆಯಿಂದ ಹಂಪಿ ಉತ್ಸವ ನಡೆದಿದೆ. ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ದಿ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರು ಚಿಕ್ಕದಾಗಿ ಆರಂಭಿಸಿದ್ದರು. ಈಗ ಅದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು, ಹಂಪಿ ಉತಸವದ ಮಾದರಿಯಲ್ಲಿ ರಾಜ್ಯದ ವಿವಿಧ ಐತಿಹಾಸಿಕ ಪ್ರದೇಶಗಳು ಮತ್ತು ಜಿಲ್ಲೆಗಳಲ್ಲಿ ಉತ್ಸವ ನಡೆಸಲಾಗುತ್ತಿದೆ. ತಡರಾತ್ರಿವರೆಗೂ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿನ ಜನರು ಸೇರಬೇಕು ಎಂದು ತಿಳಿಸಿದ್ದರು.

Hampi Utsav: ಗತವೈಭವ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ಜನರು

ಮುಂದಿನ ಬಾರಿಯೂ ನಮ್ಮಿಂದಲೇ ಉತ್ಸವ: ಇನ್ನು ಸಚಿವ ಆನಂದ್‌ ಸಿಂಗ್‌ ಮಾತನಾಡಿ, ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಮುಂದಿನ ವರ್ಷವೂ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಮದು ಭವಿಷ್ಯ ನುಡಿದರು. ಜೊತೆಗೆ, ನವೆಂಬರ್‌ ತಿಂಗಳಲ್ಲಿಯೇ ಹಂಪಿ ಉತ್ಸವ ಆಯೋಜನೆ ಮಾಡುವ ಬಗ್ಗೆ ಚಿಂತನೆ ಮಾಡಲಾಗಿದ್ದು, ನವರಾತ್ರಿ ಉತ್ಸವ ಹಾಗೂ ದಸರಾ ಮುಕ್ತಾಯಗೊಂಡ ನಂತರವೇ ಹಂಪಿ ಉತ್ಸವ ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, ಎಣ್ಣೆ ಏಟಲ್ಲಿ ರಸ್ತೆಗಿಳಿದ್ರೆ ಶಾಕ್!