ಗುಜರಾತ್‌ ಕಂಪನಿಯಿಂದ ತೆರಿಗೆ ವಂಚನೆ: ಬೆಂಗಳೂರು ಸೇರಿ 25 ಕಡೆ ಇ.ಡಿ ದಾಳಿ

Published : Jun 06, 2023, 04:45 AM IST
 ಗುಜರಾತ್‌ ಕಂಪನಿಯಿಂದ ತೆರಿಗೆ ವಂಚನೆ: ಬೆಂಗಳೂರು ಸೇರಿ 25 ಕಡೆ ಇ.ಡಿ ದಾಳಿ

ಸಾರಾಂಶ

ಗುಜರಾತ್‌ನ ಕಂಪನಿಯೊಂದು ಜಿಎಸ್‌ಟಿ ವಂಚನೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದು, 29 ಲಕ್ಷ ರು. ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ. 

ನವದೆಹಲಿ (ಜೂ.06): ಗುಜರಾತ್‌ನ ಕಂಪನಿಯೊಂದು ಜಿಎಸ್‌ಟಿ ವಂಚನೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದು, 29 ಲಕ್ಷ ರು. ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಮೊಹಮ್ಮದ್‌ ಏಜಾಜ್‌ ಬೊಮರ್‌ ಮತ್ತು ಇತರರ ಮೇಲೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.2ರಂದು ಬೆಂಗಳೂರು, ಮುಂಬೈ, ಅಹಮದಾಬಾದ್‌, ಭಾವನಗರ, ಬೋಟಾಡ್‌ ಮತ್ತು ಗಾಂಧಿನಗರಗಳಲ್ಲಿ 25ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ನಕಲಿ ಜಿಎಸ್‌ಟಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಕಂಪನಿ ಸುಮಾರು 122 ಕೋಟಿ ರು. ವಂಚನೆ ಎಸಗಿದೆ ಎಂದು ಇ.ಡಿ. ಆರೋಪಿಸಿದೆ. 

ಇದಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಭಾವನಗರ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಕಂಪನಿ ಸುಮಾರು 1,102 ಕೋಟಿ ರು.ಗೂ ಹೆಚ್ಚಿನ ಮೊತ್ತಕ್ಕೆ ನಕಲಿ ಬೆಲೆಪಟ್ಟಿಯನ್ನು ತಯಾರು ಮಾಡಿದ್ದು, 122 ಕೋಟಿ ರು.ಗೂ ಹೆಚ್ಚು ಹಣ ವಂಚಿಸಿದೆ ಮತ್ತು 461 ಬೋಗಸ್‌ ವ್ಯಾಪಾರ ಸಂಸ್ಥೆಗಳನ್ನು ವಿತರಣೆ ಮಾಡಿದೆ. ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗಳನ್ನು ಬದಲಾವಣೆ ಮಾಡುವ ಮೂಲಕ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯಾಪಾರ ಸಂಸ್ಥೆಗಳನ್ನು ಸೃಷ್ಟಿಮಾಡಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಆಯ​ನೂರು ಬಾರಲ್ಲಿ ಕ್ಯಾಶಿ​ಯರ್‌ ಹತ್ಯೆ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಪನಾಮಾ ಪೇಪ​ರ್ಸ್‌, ಬೆಂಗ​ಳೂ​ರು ಉದ್ಯಮಿ ಮೇಲೆ ಇ.ಡಿ. ದಾಳಿ: ಅಕ್ರಮ ಸ್ವಿಸ್‌ ಬ್ಯಾಂಕ್‌ ಹಣ ಹಾಗೂ ವಿದೇ​ಶ​ದ​ಲ್ಲಿನ ಅಕ್ರಮ ಸಂಪತ್ತು ಪತ್ತೆ ಮಾಡಿ​ದ್ದ ಪನಾಮಾ ಪೇಪರ್ಸ್‌ ಸೋರಿಕೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಬೆಂಗ​ಳೂರಿನ ಉದ್ಯಮಿ ರಾಜೇಂದ್ರ ಪಾಟೀಲ್‌ ಅವರ ನಿವಾಸ ಹಾಗೂ ಕಚೇ​ರಿ​ಗಳ ಮೇಲೆ ಇ.ಡಿ. (ಜಾರಿ ನಿರ್ದೇ​ಶ​ನಾ​ಲ​ಯ) ದಾಳಿ ನಡೆ​ಸಿ​ದೆ. ‘ರಾಜೇಂದ್ರ ಪಾಟೀಲ್‌ ಮೇಲೆ ನಿದೇಶಿ ವಿನಿ​ಮಯ ಕಾಯ್ದೆ ಉಲ್ಲಂಘನೆ ಆರೋ​ಪ​ವಿದ್ದು, ಜೂ.2ರಂದು ಅವರ ಮನೆ, ಅವರು ನಿರ್ದೇ​ಶಕ ಆಗಿ​ರುವ ಶ್ರೀ ಪಾರ್ವತಿ ಟೆಕ್ಸ್‌ ಕಂಪನಿಯಲ್ಲಿ ತಪಾ​ಸಣೆ ನಡೆ​ಸಿದೆ. 

ಗ್ಯಾರಂಟಿ ಜಾರಿಗೆ ಕಾಂಗ್ರೆಸ್‌ನವರು ತೆರಿಗೆ ಹೆಚ್ಚಿಸ್ತಾರೆ: ಶಾಸಕ ಬಿ.ವೈ.ವಿಜಯೇಂದ್ರ

ಇವರು 66 ಕೋಟಿ ರು.ನಷ್ಟು ‘ಅ​ಘೋ​ಷಿ​ತ’ ಹಣ​ವನ್ನು ದುಬೈ, ತಾಂಜೇ​ನಿಯಾ ಹಾಗೂ ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನ ವಿವಿಧ ಕಂಪ​ನಿ​ಗ​ಳಲ್ಲಿ ಹೂಡಿ​ದ್ದರು ಎಂದು ಪನಾಮಾ ಪೇಪರ್ಸ್‌ ಸೋರಿಕೆ ವೇಳೆ ಬಯ​ಲಿಗೆ ಬಂದಿತ್ತು. ಈ ಸಂಬಂಧ ವಿದೇಶಿ ಹೂಡಿ​ಕೆಯ ದಾಖಲೆ ವಶ​ಪ​ಡಿ​ಸಿ​ಕೊ​ಳ್ಳ​ಲಾ​ಗಿ​ದೆ’ ಎಂದು ಇ.ಡಿ. ಹೇಳಿ​ದೆ. ಇದೇ ವೇಳೆ, ಪನಾಮಾ ಪೇಪರ್ಸ್‌ ಪ್ರಕ​ರ​ಣ​ದ​ಲ್ಲಿ ಕೋಲ್ಕತಾ ಉದ್ಯ​ಮಿ​ಯೊಬ್ಬರ ಮೇಲೆ ದಾಳಿ ನಡೆಸಿ 2.74 ಕೋಟಿ ರು. ವಶ​ಪ​ಡಿ​ಸಿ​ಕೊ​ಳ್ಳ​ಲಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?