₹20 ಕೋಟಿ ಗೂ ಅಧಿಕ ತೆರಿಗೆ ಮೊತ್ತ ಬಾಕಿ; ಕಣ್ಣು ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು!

By Ravi Janekal  |  First Published Aug 26, 2023, 8:35 PM IST

ಬಡವರು, ಮಧ್ಯಮ ವರ್ಗದವರು ತೆರಿಗೆ ಕಟ್ಟದಿದ್ರೆ ಮನೆಗೆ ಬೀಗ ಹಾಕಿ ನೀರ್ ನಿಲ್ಲುಸ್ತೀವಿ, ಕರೆಂಟ್ ಕಟ್ ಮಾಡುಸ್ತೀವಿ ಅಂತೆಲ್ಲಾ ಧಮ್ಕಿ ಹಾಕಿ ವೀರಾವೇಷದಿಂದ ಕರ ವಸೂಲಿ ಮಾಡೋ ಚಿಕ್ಕಮಗಳೂರಿನ ನಗರಸಭೆ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳು , ಸರ್ಕಾರಿ ಕ್ವಾಟ್ರಸ್ , ಶಾಲಾ ಕಾಲೇಜ್ , ಖಾಸಗಿ ಆಸ್ಪತ್ರೆ ಗಳಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ಕಂದಾಯವನ್ನೇ ವಸೂಲಿ ಮಾಡಿಲ್ಲ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.26): ತೆರಿಗೆಯಿಂದ ಬರೋ ಆದಾಯವೇ ನಗರಸಭೆಯ ಅಭಿವೃದ್ಧಿಗೆ ಮೂಲ ಬಂಡವಾಳ. ಆದ್ರೆ, ತೆರಿಗೆಯನ್ನೇ ವಸೂಲಿ ಮಾಡದಿದ್ರೆ ಅಭಿವೃದ್ಧಿ ಹರೋಹರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಡವರು ಟ್ಯಾಕ್ಸ್ ಕಟ್ಟದಿದ್ರೆ ವೀರಾವೇಶದಿಂದ ವಸೂಲಿ ಮಾಡೋ ನಗರಸಭೆ ಅಧಿಕಾರಿಗಳು 20 ಕೋಟಿಗೂ ಅಧಿಕ ಹಣವನ್ನ ಸುಮ್ಮನೆ ಕೈಚೆಲ್ಲಿ ಕೂತಿದ್ದಾರೆ ಅಂದ್ರೆ ಚಿಕ್ಕಮಗಳೂರು  ನಗರಸಭೆ ಅದೆಷ್ಟು ಶ್ರೀಮಂತವಿರಬಹುದು. ಅವರಿಂದ ಇಷ್ಟು, ಇವರಿಂದ ಅಷ್ಟು ಅಂತ ಪಟ್ಟಿ ಏನೋ ಇದೆ. ಆದ್ರೆ, ಕಳೆದ ಮೂರು ನಾಲ್ಕು ವರ್ಷಗಳಿಂದ ವಸೂಲಿ ಮಾಡೋಕೆ ಮಾತ್ರ ಮುಂದಾಗಿಲ್ಲ.

Tap to resize

Latest Videos

undefined

20 ಕೋಟಿ ಗೂ ಅಧಿಕ ತೆರಿಗೆ ಮೊತ್ತ ಬಾಕಿ : 

ಬಡವರು, ಮಧ್ಯಮ ವರ್ಗದವರು ತೆರಿಗೆ ಕಟ್ಟದಿದ್ರೆ ಮನೆಗೆ ಬೀಗ ಹಾಕಿ ನೀರ್ ನಿಲ್ಲುಸ್ತೀವಿ, ಕರೆಂಟ್ ಕಟ್ ಮಾಡುಸ್ತೀವಿ ಅಂತೆಲ್ಲಾ ಧಮ್ಕಿ ಹಾಕಿ ವೀರಾವೇಷದಿಂದ ಕರ ವಸೂಲಿ ಮಾಡೋ ಚಿಕ್ಕಮಗಳೂರಿನ ನಗರಸಭೆ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳು , ಸರ್ಕಾರಿ ಕ್ವಾಟ್ರಸ್ , ಶಾಲಾ ಕಾಲೇಜ್ , ಖಾಸಗಿ ಆಸ್ಪತ್ರೆ ಗಳಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ಕಂದಾಯವನ್ನೇ ವಸೂಲಿ ಮಾಡಿಲ್ಲ. ಆ ಹಣ ಬರೋಬ್ಬರಿ 20 ಕೋಟಿ 50 ಲಕ್ಷ  ಸಮೀಪವಿದೆ. ಜನಸಾಮಾನ್ಯರಿಂದ ಬಲವಂತವಾಗಿ ಕರವಸೂಲಿ ಮಾಡೋ ನಗರಸಭೆ ಅಧಿಕಾರಿಗಳಿಗೆ ದೊಡ್ಡವರ ಬಳಿ ಹಣ ಕೇಳೋಕೆ ಧೈರ್ಯವಿಲ್ಲ. ಸಣ್ಣವರ ಹತ್ತಿರವಾದ್ರೆ ಪೌರುಷದಿಂದ ಹಣ ವಸೂಲಿ ಮಾಡ್ತಾರೆ, ಇದಕ್ಕೆ ಆಯುಕ್ತರ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ..

 

Kodagu: 9.91 ಲಕ್ಷ ವಿದ್ಯುತ್ ತೆರಿಗೆ ಬಾಕಿ ಉಳಿಸಿಕೊಂಡ ಪಂಚಾಯಿತಿ: ವಿದ್ಯುತ್ ಸಂಪರ್ಕ ಕಡಿತ

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಅಧಿಕ ತೆರಿಗೆ ಬಾಕಿ : 

35 ವಾರ್ಡ್ ಗಳಿರೋ ಚಿಕ್ಕಮಗಳೂರು ನಗರದಲ್ಲಿ  35 ಸಾವಿರ ಮನೆ, ಮೂರು ಸಾವಿರ ಅಂಗಡಿ ಮುಗ್ಗಟ್ಟುಗಳಿದ್ದು ಅವುಗಳಿಂದ ತೆರಿಗೆ ವಸೂಲಿ ಮಾಡ್ತಿರೋ ಅಧಿಕಾರಿಗಳು,  ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಕ್ವಾಟ್ರಸ್ ಗಳಿಂದ ಯಾಕೆ ತೆರಿಗೆ ವಸೂಲಿ ಮಾಡ್ತಿಲ್ಲ ಅನ್ನೋದು ಸಾರ್ವಜನಿಕ ಪ್ರಶ್ನೆ. ಇನ್ನು ನಗರದ ಎಐಟಿ ಕಾಲೇಜು 65 ಲಕ್ಷ, ಎಂಇಎಸ್ ಕಾಲೇಜು 47 ಲಕ್ಷ, ಬಿ.ಡಿ.ಆರ್. ಕಾಲೇಜು 30 ಲಕ್ಷ, ವಾಸವಿ ವಿದ್ಯಾ ಸಂಸ್ಥೆ 15 ಲಕ್ಷ ಹಾಗೂ ಅರಣ್ಯ, ಪೊಲೀಸ್, ಆಸ್ಪತ್ರೆ, ಲೋಕೋಪಯೋಗಿ ಇಲಾಖೆಯ ಕ್ವಾಟ್ರಸ್ ಗಳಿಂದ ಸುಮಾರು 2 ಕೋಟಿ 89 ಲಕ್ಷ ಸೇರಿದಂತೆ ಒಟ್ಟು ಸುಮಾರು 20 ಕೋಟಿ 50 ಲಕ್ಷ ಕಂದಾಯ ನಗರಸಭೆಗೆ ಬರಬೇಕಿದೆ. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರು ಕೋರ್ಟ್ ಗೆ ಹೋಗಿದ್ದಾರೆ.

 

Kodagu: 9.91 ಲಕ್ಷ ವಿದ್ಯುತ್ ತೆರಿಗೆ ಬಾಕಿ ಉಳಿಸಿಕೊಂಡ ಪಂಚಾಯಿತಿ: ವಿದ್ಯುತ್ ಸಂಪರ್ಕ ಕಡಿತ

ಖಾಸಗಿ ಸಂಸ್ಥೆಗಳ ಜೊತೆಗೆ ನಗರಸಭೆಗೆ ಬರಬೇಕಾಗಿರುವ ಕಂದಾಯ ವಸೂಲಿಯನ್ನು ಶೀಘ್ರವೇ ವಸೂಲಿ ಮಾಡಲಾಗುವುದು, ತೆರಿಗೆ ಕಟ್ಟಿದೆ ಇದ್ದರೆ ನಗರಸಭೆಯ ಸೌಲಭ್ಯ ಕಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ, ಆದಾಯದ ಮೂಲವಾಗಿರೋ ತೆರಿಗೆಯನ್ನೇ ವಸೂಲಿ ಮಾಡದಿದ್ರೆ ಅಧಿಕಾರಿ ಹಾಗೂ ಜನನಾಯಕ್ರು ಅದ್ಹೇಗ್ ಆಡಳಿತ ನಡೆಸ್ತಾರೋ ದೇವರ ಬಲ್ಲ. ಬಡವರ ಮೇಲೆ ಸವಾರಿ ಮಾಡೋ ಅಧಿಕಾರಿಗಳು ದೊಡ್ಡವರ ಬಳಿ ಹೋಗದಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗೋದ್ರ ಜೊತೆ ಹಲವು ಅನುಮಾನಗಳನ್ನೂ ಹುಟ್ಟಾಕಿದೆ. ಇನ್ನಾದ್ರು ನಗರಸಭೆ ಅಧಿಕಾರಿಗಳು ತೆರಿಗೆಯಲ್ಲಿ ದೊಡ್ಡವರು-ಸಣ್ಣವರು ಎಲ್ಲರೂ ಒಂದೇ ಎಂದು ಭಾವಿಸಿ ಕೂಡಲೇ ತೆರಿಗೆ ವಸೂಲಿ ಮಾಡಿ, ಬಡವರ ಅಭಿವೃದ್ಧಿಗೆ ವಿನಿಯೋಗಿಸಲಿ ಅನ್ನೋದು ಕಾಫಿನಾಡಿಗರ ಆಗ್ರಹವಾಗಿದೆ.

click me!