
ಬೆಂಗಳೂರು(ಅ.15): ನಗರದ(Bengaluru) ಪರಪ್ಪನ ಅಗ್ರಹಾರದಲ್ಲಿರುವ(Parappana Agrahara) ತಮಿಳುನಾಡು(Tamil Nadu) ಮಾಜಿ ಸಿಎಂ ದಿ. ಜಯಲಲಿತಾ(J Jayalalithaa) ಅವರ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ ದೊರೆತಿದೆ. ಹೌದು, 10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆಯಲ್ಲಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಸುಧಕಾರನ್(Sudhakaran) ಬಿಡುಗಡೆ ಬಗ್ಗೆ ಪರಪ್ಪನ ಅಗ್ರಹಾರ(Jail) ಜೈಲಾಧಿಕಾರಿಗಳು ದಿನಾಂಕ ನಿಗದಿ ಮಾಡಿದ್ದಾರೆ. ಶಶಿಕಲಾ(V. K. Sasikala) ಜೈಲಿನಿಂದ ಬಿಡುಗಡೆ ಬಳಿಕ ಸುಧಾಕರನ್ ಭೇಟಿಗೆ ಯಾರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ. 10 ಕೋಟಿ ದಂಡ ಕಟ್ಟದೆ ಮತ್ತೊಂದು ವರ್ಷ ಹೆಚ್ಚುವರಿ ಜೈಲುವಾಸ ಮುಕ್ತಾಯವಾಗಲಿದೆ.
ಪರಪ್ಪನ ಅಗ್ರಹಾರದಲ್ಲಿ ಜಯಾ ದತ್ತು ಪುತ್ರ ಕೂಗಾಡಿ, ರಂಪಾಟ ನಡೆಸಿದ್ದು ಏಕೆ ಗೊತ್ತಾ?
ಇನ್ನೆರಡು ದಿನಗಳಲ್ಲಿ ಸುಧಾಕರನ್‌ಗೆ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಭಾಗ್ಯ ದೊರಕಲಿದೆ. ಕಳೆದ 5 ವರ್ಷಗಳಿಂದ ಸೆರೆವಾಸ ಅನುಭವಿಸ್ತಿದ್ದ ಸುಧಾಕರನ್‌ಗೆ ಕೊನೆಗೂ ಜೈಲಿನಿಂದ ಮುಕ್ತಿ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಧಾಕರನ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. 2017 ರಲ್ಲಿ ಶಶಿಕಲಾ, ಇಳವರಸಿ(Ilavarasi), ಸುಧಾಕರನ್‌ಗೆ 10 ಕೋಟಿ ದಂಡ(Fine) ವಿಧಿಸಲಾಗಿತ್ತು. ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ 10 ಕೋಟಿಯಂತೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದರು. ಸುಧಾಕರನ್ ದಂಡ ಕಟ್ಟದ ಹಿನ್ನಲೆ 1 ವರ್ಷ ಹೆಚ್ಚು ಜೈಲುವಾಸ ಮುಂದುವರಿಸಲಾಗಿತ್ತು. ಹೀಗಾಗಿ ಹೆಚ್ಚುವರಿ ಜೈಲು ಶಿಕ್ಷೆ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದು ಇದೇ ತಿಂಗಳು 16 ರಂದು ಬಿಡುಗಡೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ