ಕನ್ನಡ ಚಳವಳಿಗಾರರು, ರೈತರ ಕೇಸ್‌ ವಾಪಸ್‌ ಪಡೆಯಲು ಕ್ರಮ: ಪರಂ

Published : Jan 03, 2024, 04:28 AM IST
ಕನ್ನಡ ಚಳವಳಿಗಾರರು, ರೈತರ ಕೇಸ್‌ ವಾಪಸ್‌ ಪಡೆಯಲು ಕ್ರಮ: ಪರಂ

ಸಾರಾಂಶ

ಸಾರ್ವಜನಿಕವಾಗಿ ಯಾವುದೇ ತೊಂದರೆಯಾಗಿಲ್ಲದ ಪ್ರತಿಭಟನೆ, ಹೋರಾಟ ಇನ್ನಿತರೆ ಘಟನೆಗಳಲ್ಲಿ ರೈತರು, ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುತ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

ಬೆಂಗಳೂರು(ಜ.03):  ರೈತರು ಹಾಗೂ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯದ ಬಗ್ಗೆ ಸರ್ಕಾರಗಳ ಧೋರಣೆ ಬಗ್ಗೆ ‘ಕನ್ನಡಪ್ರಭ’ದ ಸರಣಿ ವರದಿಗೆ ಎಚ್ಚೆತ್ತ ಸರ್ಕಾರ ಈ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದೆ.
ಸಾರ್ವಜನಿಕವಾಗಿ ಯಾವುದೇ ತೊಂದರೆಯಾಗಿಲ್ಲದ ಪ್ರತಿಭಟನೆ, ಹೋರಾಟ ಇನ್ನಿತರೆ ಘಟನೆಗಳಲ್ಲಿ ರೈತರು, ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುತ್ತೇವೆ ಎಂದು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಬಹಳಷ್ಟು ಅರ್ಜಿಗಳು ಬಂದಿವೆ. ಈ ಬಗ್ಗೆ ನನ್ನ ಅಧ್ಯಕ್ಷತೆಯಲ್ಲೇ ಸರ್ಕಾರ ಸಂಪುಟದ ಉಪ ಸಮಿತಿ ರಚಿಸಿದೆ. ಸಚಿವರಾದ ಎಚ್‌.ಕೆ.ಪಾಟೀಲ್, ಮಹಾದೇವಪ್ಪ, ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ ಅವರು ಸಮಿತಿಯ ಸದಸ್ಯರಿದ್ದಾರೆ. ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಅಧಿಕಾರಿಗಳು ಸಮಿತಿಯ ಮುಂದೆ ಇಡುತ್ತಾರೆ. ಯಾರು ತಪ್ಪಿತಸ್ಥರಿರುವುದಿಲ್ಲ, ಮುಗ್ಧರಿರುತ್ತಾರೆ. ಯಾವ್ಯಾವ ಪ್ರತಿಭಟನೆ ಸೇರಿದಂತೆ ಇತರೆ ಹೋರಾಟಗಳ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ ಅಂತಹ ಘಟನೆಗಳಲ್ಲಿ ಭಾಗಿಯಾದವರ ಮೇಲೆ ದಾಖಲಾಗಿರುವ ಕೇಸುಗಳನ್ನು ವಾಪಸ್‌ ಪಡೆಯುತ್ತೇವೆ. ಉಳಿದವು ಮುಂದುವರೆಯುತ್ತವೆ ಎಂದರು.

ತುಮಕೂರು: ಪೊಲೀಸ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ , ಕಡತಗಳ ಪರಿಶೀಲನೆ

ಸುಮೋಟೊ ಕೇಸ್ ಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ. ಕೆಲವು ಕೇಸುಗಳನ್ನು ವಾಪಸ್ ಪಡೆಯಬಾರದು ಅಂತನೂ ಕಮಿಟಿ ತೀರ್ಮಾನ ಮಾಡುತ್ತದೆ. ಅಂತಹ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ. ಉಳಿದವನ್ನು ಹಿಂಪಡೆಯಲಾಗುವುದು ಎಂದರು.

ಶಾಸಕರ ಮೇಲಿನ‌ ಕೇಸೂ ವಾಪಸ್‌

ಶಾಸಕರ ಮೇಲಿನ ಪ್ರಕರಣಗಳನ್ನೂ ವಾಪಸ್‌ ಪಡೆಯುವಂತೆ ಸಂಪುಟ ಉಪ ಸಮಿತಿಯ ಮುಂದೆ ಶಿಫಾರಸುಗಳು ಬರುತ್ತವೆ. ಅವುಗಳನ್ನೂ ಯಾವುದನ್ನು ಹಿಂಪಡೆಯಬಹುದು, ಯಾವುದನ್ನು ಪಡೆಯಲಾಗುವುದಿಲ್ಲ ಎಂಬ ಬಗ್ಗೆ ನಿಯಮಾವಳಿ ಅನುಸಾರ ಪರಿಶೀಲಿಸಿ ನಿರ್ಧರಿಸಲಾಗುವುದು ಎಂದರು.

PSI Scam: ಎಚ್ಡಿಕೆ, ಇತರರಿಗೆ ಯಾಕೆ ನೋಟಿಸ್‌ ನೀಡಿದ್ದಾರೆಂದು ಗೊತ್ತಿಲ್ಲ: ಸಚಿವ ಪರಮೇಶ್ವರ್‌

ಕನ್ನಡಪ್ರಭ ಪರಿಣಾಮ

ರಾಜಕಾರಣಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರ ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌ಗೆ ಹಿಂದೇಟು ಹಾಕುತ್ತಿದೆ, ಹೋರಾಟಗಾರರನ್ನು ಹೆದರಿಸಲು ಕೇಸ್‌ ಅಸ್ತ್ರ ಬಳಸುತ್ತಿದೆ, ಪ್ರಕರಣಗಳ ಬಗ್ಗೆ ತಪ್ಪು ಲೆಕ್ಕ ನೀಡುತ್ತಿದೆ ಎಂದು ‘ಕನ್ನಡಪ್ರಭ’ ಡಿ.30ರ ಶನಿವಾರದಿಂದ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ.

ಬಹಳ ಅರ್ಜಿ ಬಂದಿವೆ

ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಬಹಳಷ್ಟು ಅರ್ಜಿಗಳು ಬಂದಿವೆ. ಯಾರು ತಪ್ಪಿತಸ್ಥರಿರುವುದಿಲ್ಲ, ಮುಗ್ಧರಿರುತ್ತಾರೆ. ಯಾವ್ಯಾವ ಪ್ರತಿಭಟನೆ ಸೇರಿದಂತೆ ಇತರೆ ಹೋರಾಟಗಳ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ ಅಂತಹ ಘಟನೆಗಳಲ್ಲಿ ಭಾಗಿಯಾದವರ ಮೇಲೆ ದಾಖಲಾಗಿರುವ ಕೇಸುಗಳನ್ನು ವಾಪಸ್‌ ಪಡೆಯುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!