
ಬೆಂಗಳೂರು(ಸೆ.14): ನಾನು ಬ್ಯಾಂಕ್‌ನಲ್ಲಿ ಆಸ್ತಿಯನ್ನು ಅಡಮಾನವಿಟ್ಟು ಬೈಂದೂರು ಕ್ಷೇತ್ರದ ಟಿಕೆಟ್ ಪಡೆಯಲು ಚೈತ್ರಾ ಕುಂದಾಪುರಳಿಗೆ ಕೊಟ್ಟಿದ್ದೆ. ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಹೇಳಿದ್ದಾರೆ.
ಈ ವಂಚನೆ ಸಂಬಂಧ ಮಾಧ್ಯಮಗಳಿಗೆ ಮಾತನಾಡಿರುವ ಪೂಜಾರಿ ಅವರು, ನಾನು ಮೋಸ ಹೋದಂತೆ ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.
"ನನಗೆ ಎಂಟು ತಿಂಗಳ ಹಿಂದೆ ಚೈತ್ರಾ ಕುಂದಾಪುರಳ ಪರಿಚಯವಾಯಿತು. ನನ್ನ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಮಾಡಿ ದುಡ್ಡು ಕೊಟ್ಟಿದ್ದೇನೆ. ಯಾವುದೇ ಪಕ್ಷವಿರಲಿ. ಬಿಜೆಪಿ ಹಾಗೂ ಕಾಂಗ್ರೆಸ್ ಯಾವುದೇ ಇರಲಿ. ಯಾರಿಗೂ ಮೋಸವಾಗಬಾರದು" ಎಂದು ಮಾಧ್ಯಮಗಳಿಗೆ ಪೂಜಾರಿ ಹೇಳಿಕೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಆ ಮಾತು ಹೇಳಿದ್ಯಾಕೆ? ಆ ಯೋಜನೆಗೂ.. ಈ ಕೇಸ್‌ಗೂ ಏನು ಲಿಂಕ್?
"ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಾಗೂ ಆರ್‌ಎಸ್‌ಎಸ್ ನಾಯಕರ ಸಂಪರ್ಕದ ಹೇಳಿ ನನ್ನನ್ನು ನಂಬಿಸಿದರು. ನಾನು ಅವರ ಮಾತುಗಳನ್ನು ನಂಬುವಂತೆ ಸನ್ನಿವೇಶ ಸೃಷ್ಟಿಸಿದ್ದರು. ಈ ಬಗ್ಗೆ ಕೆಲವೇ ದಿನಗಳಲ್ಲಿ ವಿಸ್ತೃತವಾಗಿ ಹೇಳುತ್ತೇನೆ" ಎಂದು ಪೂಜಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ