
ಬೆಂಗಳೂರು(ಡಿ.21) ಹೊನ್ನಾವರ ತಾಲೂಕಿನ ನವಿಲಗೋಣದ 8ರ ಹರೆಯದ ಬಾಲಕಿ ಆರತಿ ಶೇಟ್ ಕಳೆದ ಫೆಬ್ರವರಿ 2018ರಂದು ತಮ್ಮ ಮನೆಯ ಅಂಗಳದ ಮುಂದೆ ತಮ್ಮ ಕಾರ್ತೀಕ ಜತೆ ಆಟ ಆಡುತ್ತಿದ್ದಾಗ ಮಗು ಕಾರ್ತೀಕ್ ಮೇಲೆ ಹಸುವೊಂದು ದಾಳಿ ನಡೆಸಿತು. ಹಸು ಕೊಂಬಿನಿಂದ ತಿವಿಯುತ್ತಿದ್ದಾಗ ಮಗುವನ್ನು ಎತ್ತಿಕೊಂಡು ತನ್ನ ಬೆನ್ನನ್ನು ಒಡ್ಡಿ ರಕ್ಷಿಸಿ ಕೂಗುತ್ತಿದ್ದಾಗ ಮನೆಯವರು ಬಂದು ಆಕಳನ್ನು ಓಡಿಸಿದರು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ವೈರಲ್ ಆಗಿತ್ತು. ಸರ್ಕಾರ ಶೌರ್ಯ ಪ್ರಶಸ್ತಿಗೆ ಈ ಬಾಲಕಿಯನ್ನು ಆಯ್ಕೆ ಮಾಡಿದೆ.
ನ್ನವರಿಗೆ ತೊಂದರೆ ಆದ್ರೆ ಹೆಣ್ಣು ಯಮನ ವಿರುದ್ಧವೇ ಸೆಣಸಾಡೋಕೆ ರೆಡಿ ಆಗಿರ್ತಾಳೆ. ತಮ್ಮನ ಪ್ರಾಣಕ್ಕೆ ಕುತ್ತಾ ಗಲಿದೆ ಅನ್ನೋದು ಗೊತ್ತಾಗ್ತಿದ್ದಂತೆ ತನ್ನ ಪ್ರಾಣ ಹೋದ್ರು ಪರವಾಗಿಲ್ಲ ತಮ್ಮನ ಪ್ರಾಣ ಉಳಿಸಿದ್ದಾಳೆ..ಆ ಬಾಲೆಗೆ ಸುವರ್ಣ ನ್ಯೂ ಸ್ ಹಾಗೂ ಕನ್ನಡಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಎಂಟು ಜನರ ಪ್ರಾಣ ಕಾಪಾಡಿದ 62ರ ಯುವಕ ಖಾದರ್
ಕಾರವಾರದ ನವಿಲುಗೋಣ ನಿವಾಸಿ ಆಗಿರೋ ಪಾಂಡುರಂಗ ಹಾಗೂ ಆಶಾ ದಂಪತಿಯ ಮೂರು ಮಕ್ಕಳ ಪೈಕಿ ಆರತಿ ಎರಡನೇಯವಳು. ಒಂದು ವರ್ಷದ ಹಿಂದೆ ಆರತಿ ತ ಮ್ಮ ಕಾರ್ತಿಕ್ ಜೊತೆ ಮನೆಯ ಹೊರಗೆ ಆಟ ಆಡುತ್ತಾ ಇರುತ್ತಾಳೆ.ಆಗ ಆಕಳು ಕಾರ್ತಿಕ್ ಮೇಲೆ ಅಟ್ಯಾಕ್ಗೆ ಮುಂದಾಗುತ್ತೆ. ಯಾವಾಗ ತಮ್ಮನಿಗೆ ಆಕಳು ಕೊಡಿಂದ ತಿವಿಯುತ್ತೆ ಅನ್ನೋದು ಗೊತ್ತಾಗುತ್ತೋ ಆಗ ಆರತಿ ತಮ್ಮನನ್ನ ಮೇಲೆತ್ತಿ ಕೊಂಬಿಗೆ ತನ್ನ ಬೆನ್ನು ನೀಡಿ ತಮ್ಮನ ಜೀವ ಉಳಿಸಿದ ಗಟ್ಟಿಗಿತ್ತಿ ಈಕೆ.
2017ರಲ್ಲಿ ಆರತಿ ಹಾಗೂ ಕಾರ್ತಿಕ್ ಕೊಟ್ಟಿಗೆಯಲ್ಲಿದ್ದಾಗ ಆಕಳು ಬಂದು ತಮ್ಮನನ್ನು ತಿವಿಯಲು ಯತ್ನಿಸಿತ್ತು. ಆಗಲೂ ಇದೇ ಆರತಿ ತಮ್ಮನನ್ನು ಮೇಲಕ್ಕೆತ್ತಿ ಆಕಳಿನ ಕೊಂಬಿಗೆ ತನ್ನ ಬೆನ್ನು ನೀಡಿದ್ದಳು. ಆಕಳಿನ ಕೊಂಬು ಸುಮಾರು ಎರಡೂ ವರೆ ಇಂಚಿನಷ್ಟು ಆಕೆಯ ಬೆನ್ನೊಳಗೆ ಪ್ರವೇಶ ಮಾಡಿತ್ತು.ಬಳಿಕ ಆಪರೇಷನ್ ಮಾಡುವ ಮೂಲಕ ಆಕೆಗೆ ಚಿಕಿತ್ಸೆ ನೀಡಲಾಗಿತ್ತು. ಎರಡೆರಡು ಬಾರಿ ತಮ್ಮನಿಗೆ ಪುನರ್ಜನ್ಮ ನೀಡಿದ ಗಟ್ಟಿಗಿತ್ತಿ. ಈಕೆಯ ಈ ಸಾಹಸಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿವೆ
ಹೆಸರು: ಆರತಿ ಶೇಟ್ ಕಿರಣ ಪಿ.ಶೇಟ್
ಊರು: ನವಿಲಗೋಣ, ಹೊನ್ನಾವರ, ಉತ್ತರ ಕನ್ನಡ
ಸಾಧನೆ: ಹಸುವಿನಿಂದ ತಮ್ಮನ ಪ್ರಾಣ ಕಾಪಾಡಿದ ಗಟ್ಟಿಗಿತ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ