ಶೌರ್ಯ ಪ್ರಶಸ್ತಿ: 8 ಜನರ ಪ್ರಾಣ ಕಾಪಾಡಿದ 62ರ ಯುವಕ ಖಾದರ್

By Suvarna News  |  First Published Dec 21, 2019, 9:16 PM IST

ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/  ಬೆಳ್ತಂಗಡಿ ತಾಲೂಕು ಚಾರ್ಮಾಡಿಯ  ಅಬ್ದುಲ್ ಖಾದರ್ ಅವರಿಗೆ ನಮನ


ಬೆಂಗಳೂರು( ಡಿ. 21) ಪ್ರವಾಹದಲ್ಲಿ ಸಿಲುಕಿದ 8 ಮಂದಿಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಿಸಿದ ಮಹಾನ್ ಚೇತನ 62 ವರ್ಷದ ಅಬ್ದುಲ್ ಖಾದರ್ ಅವರಿಗೆ ಶೌರ್ಯ ಪ್ರಶಸ್ತಿ ಸಲ್ಲಲೇಬೇಕು. 

ಈ ವರ್ಷದ ಮಳೆಗಾಲದ ಅಬ್ಬರ ಕೇಳಬೇಕೆ? ರಾಜ್ಯದ ಯಾವ ಭಾಗವನ್ನು ಬಿಡದೇ ಅಬ್ಬರಿಸಿ ಬೊಬ್ಬಿರಿದಿದೆ. ಅದರಲ್ಲೂ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲೆಂತೂ ದಾಖಲೆ ಬರೆದಿದೆ. ನಿಸರ್ಗದ ಆರ್ಭಟದ ಎದುರು ಮಾನವ ತಾನೆ ಏನು ಮಾಡಲು ಸಾಧ್ಯ? ಆದರೆ ಮಳೆಯಾರ್ಭಟದ ನಡುವೆಯೂ ಈ ಹಿರಿಯ ಜೀವ ತೋರಿದ ಕೆಚ್ಚೆದೆಯ ಸಾಧನೆಗೆ ನಾವೆಲ್ಲರೂ ನಮನ ಸಲ್ಲಿಸಲೇಬೇಕು.

Tap to resize

Latest Videos

undefined

ಅಬ್ದುಲ್ ಖಾದರ್ ಹಿರಿಯ ನಾಗರಿಕ. ವಯಸ್ಸು 62. ಆದರೆ ಸ್ವತಃ ಸಾವಿನ ದವಡೆಗೆ ಸಿಲುಕಿದರೂ 8 ಜೀವಗಳನ್ನು ರಕ್ಷಣೆ ಮಾಡಿದ ಮಹಾತ್ಮ. ಅಂದು ಅ.9ರ ಶುಕ್ರವಾರ ನಮಾಜಿಗೆ ಮಸೀದಿಗೆ ಹೋಗಿದ್ದ ಖಾದರ್ ವಾಪಸ್ ಬರುವಾಗ ಮೃತ್ಯುಂಜಯ ಹೊಳೆ ದಿಢೀರನೆ ಉಕ್ಕತೊಡಗಿತ್ತು.

10 ಸಾಹಸಿಗಳನ್ನು ಆರಿಸಿದ ಮೂವರು ತೀರ್ಪುಗಾರರು

ಸುಮಾರು ಹತ್ತಿಪ್ಪತ್ತು ಮಂದಿ ಹೊಳೆಯಾಚೆ ಅಪಾಯದಲ್ಲಿ ಸಿಲುಕಿದ್ದರು. ಹಿಂದೆ ಮುಂದೆ ನೋಡದ ಖಾದರ್ ಆ ಜೀವಗಳನ್ನು ಉಳಿಸಲು ಸ್ವತಃ ಮುನ್ನುಗ್ಗಿದರು. ಉಳಿದವರು ಬೇಡ, ಅಪಾಯ ಎಂದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಅದೇ ಪ್ರವಾಹ ರೂಪಿ ನದಿಯನ್ನು ದಾಟಿ ರಕ್ಷಿಸಿದರು. ರಕ್ಷಣಾ ಪಡೆ ಬರುವವರೆಗೂ ಅಬ್ದುಲ್ ಖಾದರ್ ರಕ್ಷಣಾ ಕಾರ್ಯ ಮುಂದುವರಿದಿತ್ತು. 8 ಮಂದಿಯ ಜೀವ ಉಳಿದಿತ್ತು.

ಹೆಸರು:  ಅಬ್ದುಲ್ ಖಾದರ್.

ಊರು: ಚಾರ್ಮಾಡಿ, ಬೆಳ್ತಂಗಡಿ ತಾಲೂಕು

ಜಿಲ್ಲೆ: ದಕ್ಷಿಣ ಕನ್ನಡ

ಮೊಬೈಲ್ ಸಂಖ್ಯೆ: 9480732432

click me!