
ಬೆಂಗಳೂರು(ಡಿ. 21): ಚಾಲಕರು ಪ್ರತಿ ಕ್ಷಣವೂ ಎಚ್ಚರದಿಂದ ಇರಬೇಕು. ಹೀಗೆ ಎಚ್ಚರದಿಂದ ಇದ್ದರೂ ತಾಂತ್ರಿಕ ಸಮಸ್ಯೆ, ಇತರರ ಅಜಾಗರೂಕತೆ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಗಳಿವೆ. ಹೀಗೆ ಸ್ಟೇರಿಂಗ್ ಮುರಿದು ಅಪಾಯದ ಸೂಚನೆ ನೀಡಿದ ಬಸ್‌ನ್ನು ಚಾಣಾಕ್ಷ್ಯತೆಯಿಂದ ನಿಯಂತ್ರಣಕ್ಕೆ ತೆಗೆದುಕೊಂಡು 40 ಪ್ರಯಾಣಿಕರ ಜೀವ ಉಳಿಸಿದ ಇಂಡಿಯ ಬಸ್ ಚಾಲಕ ತುಕರಾಮ್‌ಗೆ ಸುವರ್ಣನ್ಯೂಸ್-ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ತುಕರಾಮ್ ಸಾಧನೆ:
ಈಶಾನ್ಯ ಸಾರಿಗೆ ಬಸ್ ಸಾರಿಗೆ ಚಾಲಕನಾಗಿರುವ ತುಕರಾಮ್ ಎಂದಿನಂತ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ಬಸ್ ವಿಜಯಪುರದ ಇಂಡಿ ಕಡೆ ಸಾಗುತ್ತಿತ್ತು. ಇಂಚೇರಿ ಗ್ರಾಮದ ಮಠದ ಸಮೀಪ ಬಸ್‌ನ ಸ್ಟೇರಿಂಗ್ ತುಂಡಾಗಿದೆ. ಸ್ಟೇರಿಂಗ್ ತುಂಡಾಗಿರುವುದು ಗಮನಕ್ಕೆ ಬಂದ ತಕ್ಷಣವೇ ಚಾಲಕ ತುಕರಾಮ್ ಬಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಿದರು.
ಶೌರ್ಯ ಪ್ರಶಸ್ತಿ: ಬ್ರೇಕ್ ಫೇಲ್ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಸೂರ್ಯವಂಶಿ
ವೇಗವಾಗಿ ಚಲಿಸುತ್ತಿದ್ದ ಬಸನ್ನು ನಿಯಂತ್ರಿಸಿದ ತುಕಾರಾಮ್ ಅಪಘಾತಕ್ಕೀಡಾಗುವುದನ್ನು ತಪ್ಪಿಸಿದರು. ಇಷ್ಟೇ ಅಲ್ಲ, ಕಂದಕದತ್ತ ಬಸ್ ಅನ್ನು ಇಳಿಸಿದರು. ಈ ಮೂಲಕ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದರು.
ಸಾಕಷ್ಟು ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಬಸ್‌ನ ಸ್ಟೇರಿಂಗ್ ತುಂಡಾಗಿದೆ. ಇಂಥ ಪರಿಸ್ಥಿತಿಯಲ್ಲೂ ಚಾಲಕ ತುಕಾರಾಮ್ ‘ ಧೈರ್ಯ ಪ್ರದರ್ಶಿಸಿದ್ದಾರೆ. ಪ್ರಯಾಣಿಕರ ಜೀವ ಉಳಿಸಿದ್ದಾರೆ. ಒಂದು ವೇಳೆ ಬಸ್ ಬಲಗಡೆಗೆ ತಿರುಗಿದ್ದರೆ ‘ಭಾರೀ ಅಪಘಾತಕ್ಕೀಡಾಗಿ ಹತ್ತಾರು ಮಂದಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಬಸ್ ರಸ್ತೆಯ ಎಡಭಾಗದ ಕಂದಕಕ್ಕೆ ಇಳಿಸೋ ಮೂಲಕ ಪ್ರಾಣ ಹಾನಿ ತಪ್ಪಿಸಿದರು. 30 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ತುಕರಾಮ್ ಸಾಹಸದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾದರು.
ಹೆಸರು: ತುಕಾರಾಮ
ಊರು: ಇಂಡಿ, ವಿಜಯಪುರ
ವೃತ್ತಿ: ಬಸ್ ಚಾಲಕ
ಸಾಧನೆ: ಸ್ಟೇರಿಂಗ್ ತುಂಡಾದ ಬಸ್ ನಿಯಂತ್ರಣಕ್ಕೆ ತೆಗೆದು 40 ಪ್ರಯಾಣಿಕರು ಪ್ರಾಣ ಉಳಿಸಿದ ಸಾಧಕ
ಸಂಪರ್ಕ: 7026054883
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ