ವಾಟ್ಸಪ್‌ನಿಂದ ಇಂಥಾ ಕೆಲ್ಸಾನೂ ಮಾಡ್ಬಹುದಾ, ನಮ್ಮುಡುಗ್ರಿಗೊಂದು ಸಲಾಂ!

By Suvarna News  |  First Published Dec 21, 2019, 10:55 PM IST

ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/  ಮಳೆಯಿಂದ ಸಂಪರ್ಕ ಕಳೆದುಕೊಂಡ ಗ್ರಾಮಸ್ಥರ ನೆರವಿಗೆ ಬಂದ ನಮ್ಮುಡುಗ್ರು ವಾಟ್ಸಪ್ ಗ್ರೂಪ್


ಬೆಂಗಳೂರು(ಡಿ. 21) ನಾಲ್ಕು ಜನರಿಂದ ಆರಂಭವಾದ ವಾಟ್ಸಪ್ ಗ್ರೂಪ್ ರಾಜ್ಯದ ಎಲ್ಲಾ ಭಾಗದ ಜನರೂ ಸೇರಿದಂತೆ 250ರ ಗಡಿ ದಾಟಿದೆ.  ಈ ಸಲ ಮೂಡಿಗೆರೆಯಲ್ಲಿ ಸುರಿದ ಮಳೆಗೆ ಜನ ಸಂಕಷ್ಟದಲ್ಲಿ ಇದ್ದರು.  ಗುಡ್ಡ ಕುಸಿತ ಪ್ರಕರಣದ ಬಗ್ಗೆ ಸದಸ್ಯರೊಬ್ಬರು ವಾಯ್ಸ್ ಮೇಸಜ್ ನ್ನು ಗ್ರೂಪ್ ನಲ್ಲಿ ಹಾಕಿದ್ರು. ಕೂಡಲೇ ಕಾರ್ಯನಿರತರಾದ ಸದಸ್ಯರು ವಾಯ್ಸ್ ಮೇಸಜ್ ಗಳ ಮೂಲಕ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಜನರನ್ನು ರಕ್ಷಣೆ ಮಾಡಿದ್ದರು.

ನೂರಾರು ಮಂದಿ ಸಂಕಷ್ಟದಲ್ಲಿದ್ದರು. ಆಗ ಮೊದಲಿಗೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು ‘ನಮ್ಮುಡುಗ್ರು ವಾಟ್ಸಪ್ ಗ್ರೂಪ್’. ಗ್ರೂಪ್‌ನ ಯುವಕರು ವಾಟ್ಸಪ್ ಅನ್ನು ವಾಕಿಟಾಕಿ(ಬ್ಯಾಟರಿ ಉಳಿಸಲು ಧ್ವನಿ ಸಂದೇಶ ಅಷ್ಟೇ ಕಳುಹಿಸುತ್ತಿದ್ದರು) ರೀತಿ ಬಳಸಿಕೊಂಡರು. ಅಗತ್ಯವಿದ್ದವರಿಗೆ ತುರ್ತು ನೆರವು ಸಿಗುವಂತೆ ನೋಡಿಕೊಂಡರು. ಮೊಬೈಲ್ ಸಂಪರ್ಕ ಜೀವಂತವಾಗಿಡಲು ಮೊಬೈಲ್ ಟವರ್‌ಗಳಿಗೆ ಇಂಧನ ಪೂರೈಸಿದರು. ಸಂಕಷ್ಟದ ಸಮಯದಲ್ಲಿ ಸಾಹಸ ಮೆರೆದು ನೂರಾರು ಮಂದಿ ಜೀವ ಉಳಿಸಿದರು.

Latest Videos

undefined

ಹಸುವಿನ ಕೊಂಬಿಗೆ ಬೆನ್ನು ಕೊಟ್ಟು ತಮ್ಮನ ಕಾಪಾಡಿದ ಗಟ್ಟಿಗಿತ್ತಿ

ಭಾರೀ ಮಳೆಗೆ ಗುಡ್ಡಕುಸಿದಿದ್ದರಿಂದ ದುರ್ಗಮ ಪ್ರದೇಶಗಳ ಹಲವು ಹಳ್ಳಿಗಳ ಸ್ಥಿತಿ ಏನಾಗಿದೆ ಎಂದು ಅಧಿಕಾರಿಗಳೂ ಮಾಹಿತಿ ಇರಲಿಲ್ಲ. ಅಂಥ ಸ್ಥಿತಿಯಲ್ಲಿ ಸ್ವಯಂಪ್ರೇರಣೆಯಿಂದ ಸಂತ್ರಸ್ತರ ನೆರವಿಗೆ ಧಾವಿಸಿದ್ದು ನಮ್ಮುಡುಗ್ರು ಗ್ರೂಪ್. ಈ ಗ್ರೂಪ್‌ನಿಂದಾಗಿ ರಕ್ಷಣಾ ಕಾರ್ಯಕರ್ತರು ಸಂಕಷ್ಟದಲ್ಲಿದ್ದವರನ್ನು ಸಕಾಲದಲ್ಲಿ ತಲುಪೋದು, ಹಲವರಿಗೆ ತುರ್ತು ವೈದ್ಯಕೀಯ ನೆರವು ಸಿಗೋದು ಸಾಧ್ಯವಾಯಿತು. ಗ್ರೂಪ್‌ನ ಎಲ್ಲರೂ ನೇರವಾಗಿ ರಕ್ಷಣಾ ಕಾರ್ಯಾಚರಣೆಗೆ ಇಳಿಯದೇ ಇರಬಹುದು, ಆದರೆ ಸಂಕಷ್ಟದಲ್ಲಿದ್ದವರಿಗೆ ಸಂವಹನದ ಕೊಂಡಿಯಾಗಿದ್ದು ನಿಜ. ಗ್ರೂಪ್‌ನ ಸಮಯಪ್ರಜ್ಞೆ, ಸಾಹಸ ಹಲವರ ಜೀವ ಉಳಿತು.


ಹೆಸರು:      ನಮ್ಮುಡುಗ್ರು ವಾಟ್ಸಪ್ ಗ್ರೂಪ್

ಊರು:        ಮೂಡಿಗೆರೆ, ಚಿಕ್ಕಮಗಳೂರು

ಸಂಪರ್ಕ:   9900555080

ವೃತ್ತಿ: ಸಮಾಜ ಸೇವೆ

click me!