Bengaluru terrorist: ಶಂಕಿತ ಉಗ್ರ ಜುನೈದ್ ಸಹಚರ ಬಂಧನ - ಕೊಲೆ ಕೇಸ್ ಶಂಕಿತರ ಸಂಪರ್ಕ ಶಂಕೆ

By Ravi Janekal  |  First Published Aug 29, 2023, 5:20 PM IST

ಶಂಕಿತ ಉಗ್ರ ಜುನೈದ್ ಸಹಚರ‌. ಒಂದಲ್ಲ ಎರಡಲ್ಲ ಈತನ ಮೇಲೆ 17 ಪ್ರಕರಣಗಳಿವೆ. ನಾಲ್ಕು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆಸಾಮಿ ಖಾಕಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದ. ಆದ್ರೆ ಎಷ್ಟು ದಿನ ಅಂತಾ ಕಣ್ಣಾಮುಚ್ಚಾಲೆ ಆಡಕ್ಕಾಗುತ್ತೆ ಹೇಳಿ.ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಂಧನಕ್ಕೆ ಖಾಕಿ ನಡೆಸಿದ ಮುಂಜಾನೆ ಕಾರ್ಯಾಚರಣೆಯೇ ರೋಚಕ.


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್. ಬೆಂಗಳೂರು

ಬೆಂಗಳೂರು (ಆ.29) :  ಆತ ನಟೋರಿಯಸ್ ರೌಡಿ ಶೀಟರ್. ಶಂಕಿತ ಉಗ್ರ ಜುನೈದ್ ಸಹಚರ‌. ಒಂದಲ್ಲ ಎರಡಲ್ಲ ಈತನ ಮೇಲೆ 17 ಪ್ರಕರಣಗಳಿವೆ. ನಾಲ್ಕು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆಸಾಮಿ ಖಾಕಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದ. ಆದ್ರೆ ಎಷ್ಟು ದಿನ ಅಂತಾ ಕಣ್ಣಾಮುಚ್ಚಾಲೆ ಆಡಕ್ಕಾಗುತ್ತೆ ಹೇಳಿ.ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಂಧನಕ್ಕೆ ಖಾಕಿ ನಡೆಸಿದ ಮುಂಜಾನೆ ಕಾರ್ಯಾಚರಣೆಯೇ ರೋಚಕ.

Latest Videos

undefined

ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು(CCB police operation) ಐವರು ಶಂಕಿತ ಉಗ್ರರನ್ನ ಅರೆಸ್ಟ್ ಮಾಡಿದ್ರು. ತನಿಖೆ ವೇಳೆ ಅವರ ಬಳಿ ಗ್ರೆನೇಡ್ ಇರೋದು ಕೂಡ ಪತ್ತೆಯಾಗಿತ್ತು.ಅದರ ಮೂಲಕ ಹುಡುಕುತ್ತಾ ಹೊರಟ ಪೊಲೀಸರಿಗೆ ಗ್ರೆನೇಡ್ ತಂದುಕೊಟ್ಟಿದ್ದು ಶಂಕಿತ ಉಗ್ರ ಜುನೈದ್ ಅನ್ನೋದು ಗೊತ್ತಾಗಿತ್ತು. ಸದ್ಯ ಜುನೈದ್ ತಲೆ ಮರೆಸಿಕೊಂಡಿದ್ದು. 2017 ರಲ್ಲಿ ಆತನ ಜೊತೆಗಿದ್ದ ಸಹಚರ ಈಗ ಅರೆಸ್ಟ್ ಆಗಿದ್ದಾನೆ..

ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಸಂಪರ್ಕ

ಮೊಹಮ್ಮದ್ ಹರ್ಷದ್ ಖಾನ್. ಆರ್.ಟಿ.ನಗರ ಪೊಲೀಸ್ ಠಾಣೆ(RT Nagar police station)ಯ ರೌಡಿ ಶೀಟರ್.ಕೊಲೆ ,ಕೊಲೆ ಯತ್ನ,ರಾಬರಿ,ಕಳ್ಳತನ ಸೇರಿದಂತೆ 17 ಕೇಸ್ ಗಳು ಈತನ ಮೇಲಿದೆ. ಅಷ್ಟೇ ಅಲ್ಲಾ ದುಬೈಗೆ ಪರಾರಿ ಆಗಿರೊ ಶಂಕಿತ ಉಗ್ರ ಜುನೈದ್ ಸಹಚರ. 2017 ರಲ್ಲಿ ನಡೆದ ನೂರ್ ಅಹಮ್ಮದ್ ಎಂಬಾತನ ಕಿಡ್ನಾಪ್ ಮತ್ತು ಕೊಲೆ ಕೇಸ್ ನಲ್ಲಿ ಜುನೈದ್ ಸೇರಿದಂತೆ 21 ಜನ ಆರೋಪಿಗಳ ಪೈಕಿ ಈತನು ಒಬ್ಬ.ಅಂದು ಜೈಲಿಗೆ ಹೋಗಿ ಬಂದವನು ಕ್ರಿಮಿನಲ್ ಆಗಿ ಬೆಳೆದುಬಿಟ್ಟಿದ್ದ.ಅಟ್ಟಹಾಸ ಮೆರೆಯುತ್ತಾತಲೆ ಮರೆಸಿಕೊಂಡಿದ್ದ.

 ಹೀಗೆ ತಲೆ ಮರೆಸಿಕೊಂಡಿದ್ದ ಆಸಾಮಿಗಾಗಿ ವಿವಿಧ ಠಾಣೆಯ ಪೊಲೀಸರು ಹುಡುಕಾಟ ನಡೆಸ್ತಿದ್ರು. ಆದ್ರೆ ಇದೇ ತಿಂಗಳ 26 ರ ರಾತ್ರಿ ಹರ್ಷದ್ ಆರ್.ಟಿ.ನಗರ ಫ್ಲವರ್ ಮಾರ್ಕೆಟ್ ಹತ್ತಿರ ಇರುವ ಬಗ್ಗೆ ಮಾಹಿತಿ ಆರ್‌.ಟಿ.ನಗರ ಪೊಲೀಸರಿಗೆ ಸಿಕ್ಕಿತ್ತು.ಹಾಗಾಗಿ ರಾತ್ರೋ ರಾತ್ರಿ ತಂಡ ಮಾಡಿಕೊಂಡ ಖಾಕಿ ಪಡೆ 27 ಮುಂಜಾನೆ ಐದು ಗಂಟೆ ಸುಮಾರಿಗೆ ಬೇಟೆಗೆ ಇಳಿದಿತ್ತು. ಮನೆಯಲ್ಲಿರೋದನ್ನ ಸಿಸಿಟಿವಿ ಪರಿಶೀಲನೆ ಮೂಲಕ ಖಾತ್ರಿ ಪಡೆಸಿಕೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶ ಮಾಡಿದ್ರು.ಮನೆಯಲ್ಲಿದ್ದ ಆಸಾಮಿಯನ್ನ ಲಾಕ್ ಮಾಡಿ ಕರೆತಂದಿದ್ದಾರೆ

ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಹೈಡ್ರಾಮಾ!

ಮೊಹಮ್ಮದ್ ಹರ್ಷದ್. ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಅಷ್ಟೇ ಅಲ್ಲ ಸ್ವತಃ ತಾನೆ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗಿದ್ದ. ಅಲ್ಲದೇ ಎರಡನೇ ಮಹಡಿಯಿಂದ ಜಿಗಿಯಲು ರೆಡಿಯಾಗಿದ್ದ. ಅಷ್ಟರಲ್ಲೇ ಲಾಕ್ ಮಾಡಿ ಎತ್ತಾಕ್ಕೊಂಡು ಬಂದಿದ್ದಾರೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿರೊ ಪೊಲೀಸರಿಗೆ ಉಗ್ರ ಚಟುವಟಿಕೆಯ ಯಾವುದೇ ಹಿಂಟ್ ಕೂಡ ಸಿಕ್ಕಿಲ್ಲ ಅದಾಗಿಯೂ ಜುನೈದ್ ಜೊತೆಗೆ ಆರೋಪಿಯಾಗಿದ್ದರಿಂದ. ಜುನೈದ್ ಜೊತೆಗೆ ಈಗಲು ಸಂಪರ್ಕದಲ್ಲಿದ್ದಾನಾ? ಉಗ್ರ ಚಟುವಟಿಕೆಯಲ್ಲಿ ಏನಾದ್ರು ಭಾಗಿಯಾಗಿದ್ದಾನಾ ಎನ್ನೋದರ ಬಗ್ಗೆ  ಸಮಗ್ರ ಮಾಹಿತಿ ಕಲೆ ಹಾಕ್ತಿದ್ದಾರೆ.

ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

ಸದ್ಯ ಆರೋಪಿ ಬಗ್ಗೆ ಸಿಸಿಬಿ ಪೊಲೀಸರು ಕೂಡ ಮಾಹಿತಿ ಪಡೆದುಕೊಂಡಿದ್ದು,ವಿಚಾರಣೆ ನಡೆಸ್ತಿದೆ.ವಿಚಾರಣೆ ಬಳಿಕ ಅಷ್ಟೇ ಆತನ ಇಡೀ ಹಿಸ್ಟರಿ ಗೊತ್ತಾಗಲಿದೆ.

click me!