ಕಾವೇರಿ ನದಿ ನೀರು ವಿವಾದ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ!

Published : Aug 29, 2023, 05:14 PM ISTUpdated : Aug 29, 2023, 05:18 PM IST
ಕಾವೇರಿ ನದಿ ನೀರು ವಿವಾದ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ!

ಸಾರಾಂಶ

ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWRC ನೀಡಿದ್ದ ಶಿಫಾರಸನ್ನು cwma ಎತ್ತಿ ಹಿಡಿದಿದೆ. ಹೀಗಾಗಿ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ. 

ನವದೆಹಲಿ(ಆ.29) ಕರ್ನಾಟಕದೆಲ್ಲೆಡೆ ಮಳೆ ಕೊರತೆ ಕಾಡುತ್ತಿದೆ. ಈಗಾಗಲೇ ನದಿಗಳು ಬತ್ತುತ್ತಿದೆ. ನೀರು ಬರಿದಾಗುತ್ತಿದೆ. ಇದರ ನಡುವೆ ಹೆಚ್ಚಿನ ನೀರು ಹರಿಸುವಂತೆ ತಮಿಳುನಾಡು ವಾದಕ್ಕೆ ಕರ್ನಾಟಕ ತಲೆಬಾಗಿದೆ. ನಿನ್ನೆ ಕಾವೇರಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ(CWRC)ಸಭೆಯಲ್ಲಿ ಕರ್ನಾಟಕ ವಾದ ತಿರಸ್ಕರಿಸಿ ತಮಿಳುನಾಡಿಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಈ ಆದೇಶವನ್ನು ಕರ್ನಾಟಕ ಕಾವೇರಿ ನದಿ ಪ್ರಾಧಿಕಾರ(cwma ) ಸಭೆಯಲ್ಲಿ ಪ್ರಶ್ನಿಸಿತ್ತು. ಆದರೆ ಕರ್ನಾಟಕ ವಾದಕ್ಕೆ ಮನ್ನಣೆ ಸಿಕ್ಕಿಲ್ಲ. CWRC ನೀಡಿದ್ದ ಶಿಫಾರಸನ್ನು cwma ಎತ್ತಿ ಹಿಡಿದಿದೆ. ಇಂದಿನಿಂದ ಮುಂದಿನ 15 ದಿನ ಪ್ರತಿ ನಿತ್ಯ 5,000 ಕ್ಯೂಸಕ್ ನೀರು ತಮಿಳುನಾಡಿಗೆ ಹರಿಸಲು ಆದೇಶ ನೀಡಲಾಗಿದೆ.

ದೆಹಲಿಯಲ್ಲಿ ಸೋಮವಾರ ನಡೆದ ಸಮಿತಿ ಸಭೆಯ ಆರಂಭದಲ್ಲೇ ತಮಿಳುನಾಡು 10 ದಿನ 25 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಆಗ್ರಹಿಸಿತು. ಆಗ ಸಮಿತಿ ಮುಖ್ಯಸ್ಥರು ನಿತ್ಯ 7,500 ಕ್ಯುಸೆಕ್‌ ನೀರು ಬಿಡುವಂತೆ ಸೂಚಿಸಿದರು. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಇದಕ್ಕೆ ಒಪ್ಪದಿದ್ದಾಗ 15 ದಿನ ಕಾಲ ನಿತ್ಯ 5 ಸಾವಿರ ಕ್ಯುಸೆಕ್‌ ನೀರು ಬಿಡಲು ನಿರ್ದೇಶನ ನೀಡಲಾಯಿತು. ಅಂತಿಮವಾಗಿ 3 ಸಾವಿರ ಕ್ಯುಸೆಕ್‌ ನೀರು ಬಿಡುವುದಾಗಿ ಕರ್ನಾಟಕವು ಸಮಿತಿ ಮುಂದೆ ಹೇಳಿತ್ತು.ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಇಂದು ದೆಹಲಿಯಲ್ಲಿ ನಡೆದ ಕಾವೇರಿ ನದಿ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಪ್ರಶ್ನಿಸಿತ್ತು.

ಕರ್ನಾಟಕಕ್ಕೆ ಹಿನ್ನಡೆ , ತಮಿಳುನಾಡಿಗೆ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಮುಂದಿನ 15 ದಿನ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ಬಿಡಲೇಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ. ಕೆಆರ್‌ಎಸ್ ಜಲಾಶಯ ನೀರಿಲ್ಲದೆ ಸೊರಗುತ್ತಿದೆ. ಕೆಆರ್‌ಎಸ್ ನೀರು ಬೆಂಗಳೂರಿ ಕುಡಿಯುವ ನೀರು ಪೂರೈಕೆ ಮಾಡಲು ಸಾಲುತ್ತಿಲ್ಲ. ಇನ್ನು ಮಂಡ್ಯ ಸೇರಿದಂತೆ ವಿವಿಧ ಭಾಗಗಳ ರೈತರಿಗೂ ನೀರಿನ ಕೊರತೆ ಎದುರಾಗಿದೆ. ಇದರ ನಡುವೆ ತಮಿಳುನಾಡು ಮೊಂಡು ವಾದ ಮುಂದಿಟ್ಟು ಕರ್ನಾಟಕವನ್ನು ಮತ್ತಷ್ಟು ಬರಗಾಲಕ್ಕೆ ತಳ್ಳಿದೆ.

ಈ ಬಾರಿ ತಮಿಳುನಾಡಿಗೆ ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗಿದೆ. ಸದ್ಯ ತಮಿಳುನಾಡಿನಲ್ಲಿ ನೀರಿ ಕೊರೆತೆ ಅಷ್ಟರಮಟ್ಟಿಗಿಲ್ಲ. ಆದರೆ ಕರ್ನಾಟಕ ತೀವ್ರ ಸಮಸ್ಯೆ ಎದುರಿಸುತ್ತಿದೆ. ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಇವೆಲ್ಲವನ್ನೂ ಅರಿತಿರುವ ತಮಿಳುನಾಡು ಇದೀಗ ಕರ್ನಾಟಕವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಖಂಡನೆ; ಕನ್ನಡಪರ ಸಂಘಟನೆಗಳಿಂದ ಕೆಆರ್‌ಎಸ್‌ ಮುತ್ತಿಗೆ ಯತ್ನ

ಈಗಾಗಲೇ ನಿತ್ಯ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸುಪ್ರೀಂ ಕೋರ್ಚ್‌ನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ನ್ಯಾಯಾಲಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯು ಎಂಎ)ದಿಂದ ವಾಸ್ತವ ಸ್ಥಿತಿ ವರದಿ ಕೇಳಿದೆ. ಸದ್ಯ ಕಾವೇರಿ ನದಿ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಹರಿಸಲೂ ಸೂಚಿಸಿದೆ. ಇದೇ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ