ಪಿಎಸ್‌ಐ ಅಕ್ರಮ: ಕಲ್ಯಾಣ ಕರ್ನಾಟಕದ ಮೊದಲ ರ‍್ಯಾಂಕ್‌ ವಿಜೇತೆ ಸೆರೆ

By Kannadaprabha News  |  First Published Nov 3, 2022, 8:00 AM IST

ಪತ್ರಿಕೆ-1 ರಲ್ಲಿ 50ಕ್ಕೆ 24 ಅಂಕಗಳು ಹಾಗೂ ಪತ್ರಿಕೆ-2 ರಲ್ಲಿ 150ಕ್ಕೆ 131.25 ಅಂಕಗಳನ್ನು ಪಡೆದು, ಒಟ್ಟು 155.25 ಅಂಕಗಳ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಸುಪ್ರಿಯಾ


ಯಾದಗಿರಿ(ನ.03):  ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಮಹಿಳಾ ಅಭ್ಯರ್ಥಿಯನ್ನು ಕಲಬುರಗಿಯ ಸಿಐಡಿ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಸುಪ್ರಿಯಾ ವಶಕ್ಕೆ ಪಡೆದಿರುವ ಆರೋಪಿ ಅಭ್ಯರ್ಥಿ. ಬ್ಲೂಟೂತ್‌ ಮೂಲಕ ಉತ್ತರಗಳನ್ನು ಬರೆದಿದ್ದ ಆರೋಪ ಇವರ ಮೇಲಿದೆ. ಪತ್ರಿಕೆ-1 ರಲ್ಲಿ 50ಕ್ಕೆ 24 ಅಂಕಗಳು ಹಾಗೂ ಪತ್ರಿಕೆ-2 ರಲ್ಲಿ 150ಕ್ಕೆ 131.25 ಅಂಕಗಳನ್ನು ಪಡೆದಿದ್ದ ಸುಪ್ರಿಯಾ, ಒಟ್ಟು 155.25 ಅಂಕಗಳ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದರು.

ಜೇವರ್ಗಿ ತಾಲೂಕಿನ ಸುಪ್ರಿಯಾ, ಕಲಬುರಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅ.3, 2021 ರಂದು ಪಿಎಸ್‌ಐ (ಸಿವಿಲ್‌) ಲಿಖಿತ ಪರೀಕ್ಷೆ ಬರೆದಿದ್ದರು. ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ್‌ ಹಾಗೂ ತಂಡ ಸುಪ್ರಿಯಾರನ್ನು ಬುಧವಾರ ವಶಕ್ಕೆ ಪಡೆದಿದೆ.

Tap to resize

Latest Videos

undefined

PSI Recruitment Scam: ಪ್ರಿಯಾಂಕ್‌ ಖರ್ಗೆ ಕೊಟ್ಟ ಆಡಿಯೋದಿಂದ ಒಬ್ಬ ಬಲೆಗೆ..!

ಮೊನ್ನೆಯಷ್ಟೇ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದ ಪ್ರಕರಣ (0182/2022) ಸೇರಿದಂತೆ ಕಲಬುರಗಿಯಲ್ಲಿ ಈವರೆಗೆ ದಾಖಲಾದ ಎಲ್ಲ 8 ಪ್ರಕರಣಗಳ ಕುರಿತು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ, ಬೆಂಗಳೂರು ಹಾಗೂ ರಾಜ್ಯದ ಉಳಿದೆಡೆ ಈವರೆಗೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಈ ಪೈಕಿ, 52ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದ ಆರೋಪ ಎದುರಿಸುತ್ತಿದ್ದಾರೆ.
 

click me!