
ಬೆಂಗಳೂರು (ನ.3) : ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ‘ವಿವೇಕಾನಂದ ಪುರುಷ ಸ್ವಸಹಾಯ ಸಂಘ’ ಸ್ಥಾಪನೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಹೇಳಿದರು.
ಚಿತ್ರದುರ್ಗಕ್ಕೆ ADGP ಅಲೋಕ್ ಕುಮಾರ್ ಭೇಟಿ; ಹೊಟ್ಟೆಬಾಕ ಪೊಲೀಸರಿಗೆ ಕ್ಲಾಸ್!
ಬುಧವಾರ ಗುರುನಾನಕ್ ಭವನದಲ್ಲಿ ‘ಕರ್ನಾಟಕ ರಾಜ್ಯ ನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರೀಯ ನಿರ್ದೇಶಕರ ಕಾರ್ಯಾಲಯ’ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸ್ವಸಹಾಯ ಸಂಘಗಳ ಮಾದರಿಯಲ್ಲಿ ರಾಜ್ಯದ 29 ಸಾವಿರ ಹಳ್ಳಿಯಲ್ಲಿಯೂ ಪುರುಷ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ಈಗಾಗಲೇ 500 ಕೋಟಿ ರು.ಗಳನ್ನು ಮೀಸಲಿರಿಸಲಾಗಿದೆ. ಈ ಹಣವನ್ನು ಬಳಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಲು ಮುಂದೆ ಬರುವ ಯುವಕರಿಗೆ ಆಯಾ ಪ್ರಾದೇಶಿಕ ವೃತ್ತಿಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಹಲವಾರು ಕಾರಣಗಳಿಂದ ಯುವಕರು ಮಾನಸಿಕವಾಗಿ ಕುಗ್ಗಿರುತ್ತಾರೆ. ಅಂತವರಿಗೆ ಜೀವನೋತ್ಸಾಹ ತುಂಬಲು ಮತ್ತು ಅವರ ಮಾನಸಿಕ ಕಾಯಿಲೆಯಿಂದ ಹೊರತರಲು ಪ್ರತಿ ತಾಲೂಕಿನಲ್ಲೂ ‘ಆಪ್ತ ಸಮಾಲೋಚಕರ’ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 204 ತಾಲೂಕುಗಳ ಪೈಕಿ 174 ತಾಲೂಕುಗಳಲ್ಲಿ ಆಪ್ತ ಸಮಾಲೋಚಕರ ನೇಮಕವಾಗಿತ್ತು. ಹಲವಾರು ಕಾರಣಗಳಿಂದ ಕೆಲವರು ಕೆಲಸ ಬಿಟ್ಟಿದ್ದಾರೆ. ಹಾಗಾಗಿ, ಖಾಲಿ ಇರುವ ಸ್ಥಳಗಳು ಮತ್ತು ಹೊಸ ತಾಲೂಕುಗಳಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಮಾಹಿತಿ ನೀಡಿದರು.
ನೆಹರು ಯುವಕೇಂದ್ರದ ದಕ್ಷಿಣ ರಾಜ್ಯಗಳ ಕ್ಷೇತ್ರೀಯ ನಿರ್ದೇಶಕ ಎಂ.ಎನ್. ನಟರಾಜ್ ಮಾತನಾಡಿ, ಇಡೀ ದೇಶದಲ್ಲಿ 744 ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಎನ್‌ವೈಕೆಎಸ್, ಎನ್‌ಎಸ್‌ಎಸ್ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಒಟ್ಟಿಗೆ ಸ್ವಚ್ಛಭಾರತ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 22 ದಿನದಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 1.27 ಕೋಟಿ ಕೆಜಿ ಪ್ಲ್ಯಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಪರಿಸರ ಶುಚಿಗೊಳಿಸಲಾಗಿದೆ ಎಂದರು.
ಹೂಡಿಕೆ ಸಮಾವೇಶಕ್ಕೆ ನಾಳೆ ಮೋದಿ ಚಾಲನೆ: ಬೆಂಗಳೂರಲ್ಲಿ 3 ದಿನ ಮೇಳ
ಜಿಎಸ್‌ಟಿ ಕರ್ನಾಟಕ ಆಯುಕ್ತ ಹರ್ಷವರ್ಧನ್ ಉಮ್ರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂ.ಪಿ. ಮುಲಾಯ್ ಮುಹಿಲನ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ