ರಕ್ಷಿಸುವ ವೇಳೆ ಕೈಗೆ ಕಚ್ಚಿದ ನಾಗರಹಾವು; ಉರಗ ತಜ್ಞನ ಸ್ಥಿತಿ ಗಂಭೀರ

By Ravi JanekalFirst Published Oct 14, 2023, 4:21 PM IST
Highlights

ಹಾವು ಹಿಡಿಯುವಾಗ ಉರಗ ತಜ್ಞನಿಗೆ ಹಾವು ಕಚ್ಚಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಗ್ರಾಮದಲ್ಲಿ ನಡೆದಿದೆ. ಉರಗ ತಜ್ಞ ಅಬು ತಲಾ ಎಂಬುವವರಿಗೆ ಕಚ್ಚಿದ ಹಾವು. ಉರಗ ತಜ್ಞನ ಸ್ಥಿತಿ ಗಂಭೀರ

ಕಾರವಾರ, ಉತ್ತರಕನ್ನಡ (ಅ.14):ಹಾವು ಹಿಡಿಯುವಾಗ ಉರಗ ತಜ್ಞನಿಗೆ ಹಾವು ಕಚ್ಚಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಗ್ರಾಮದಲ್ಲಿ ನಡೆದಿದೆ.

ಉರಗ ತಜ್ಞ ಅಬು ತಲಾ ಎಂಬುವವರಿಗೆ ಕಚ್ಚಿದ ಹಾವು.ಗುಂಡಬಾಳ ಸಮೀಪ  ಮನೆಯೊಂದರಲ್ಲಿ ರಾತ್ರಿವೇಳೆ ಕಾಣಿಸಿಕೊಂಡಿದ್ದ ನಾಗರಹಾವು. ಹಾವನ್ನು ಕಂಡು ಭಯಭೀತರಾಗಿದ್ದ ಮನೆಯವರು. ಸುತ್ತಮುತ್ತಲು ಎಲ್ಲೆ ಹಾವುಗಳನ್ನು ಕಂಡರು ರಕ್ಷಣೆ ಮಾಡುವ ಉರಗ ತಜ್ಞ ಅಬು ತಲಾ. ಮನೆಯವರು ಅಬು ತಲಾಗೆ ಕರೆ ಮಾಡಿ ಮಾಹಿತಿ ನೀಡಿದ್ದರು. 

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ತಕ್ಷಣ ಸ್ಥಳಕ್ಕೆ ಬಂದಿರುವ ಉರಗ ತಜ್ಞ. ಹಾವನ್ನು ಹಿಡಿಯುವಾಗ ದಿಢೀರ್ ಕೈ ಭಾಗಕ್ಕೆ ಕಚ್ಚಿದ ನಾಗರಹಾವು. ಕಚ್ಚಿದರೂ ಲೆಕ್ಕಿಸದೇ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊನ್ನಾವರದ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಉರಗ ತಜ್ಞ. ವಿಷಪೂರಿತ ನಾಗರಹಾವು ಕಚ್ಚಿರುವುದರಿಂದ ಸ್ಥಿತಿ ಗಂಭೀರವಾಗಿದೆ. ಅಲ್ಲಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಉರಗ ತಜ್ಞ ಬೇಗ ಗುಣಮುಖ ಆಗಲಿ ಎಂದು ಹೊನ್ನಾವರದ ಜನರು ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಗುಣಮುಖವಾಗಲಿ.

click me!