ರಾಜ್ಯದಲ್ಲೂ ಸೂಪರ್ ಸ್ಟ್ರೆಡರ್ಸ್, ಇದು ಅಪಾಯಕಾರಿ..!

By Kannadaprabha NewsFirst Published Apr 24, 2020, 8:48 AM IST
Highlights

ದ.ಕೊರಿಯಾದಲ್ಲಿ ಸಾವಿರಾರು ಮಂದಿಗೆ ಕೊರೋನಾ ಸೋಂಕು ಹರಡಲು ಕಾರಣವಾದ ‘ಪೇಷಂಟ್‌-31’ ಮಾದರಿಯಲ್ಲಿ ಕರ್ನಾಟಕದಲ್ಲೂ ಒಬ್ಬೊಬ್ಬರೇ ತಮ್ಮ ಅಮಾಯಕತನ ಹಾಗೂ ಕೆಲ ಪ್ರಕರಣಗಳಲ್ಲಿ ಬೇಜವಾಬ್ದಾರಿತನದಿಂದಾಗಿ ಹತ್ತಾರು ಮಂದಿಗೆ ಸೋಂಕು ಹರಡಿಸಿದ್ದಾರೆ.

ಬೆಂಗಳೂರು(ಏ.24): ದ.ಕೊರಿಯಾದಲ್ಲಿ ಸಾವಿರಾರು ಮಂದಿಗೆ ಕೊರೋನಾ ಸೋಂಕು ಹರಡಲು ಕಾರಣವಾದ ‘ಪೇಷಂಟ್‌-31’ ಮಾದರಿಯಲ್ಲಿ ಕರ್ನಾಟಕದಲ್ಲೂ ಒಬ್ಬೊಬ್ಬರೇ ತಮ್ಮ ಅಮಾಯಕತನ ಹಾಗೂ ಕೆಲ ಪ್ರಕರಣಗಳಲ್ಲಿ ಬೇಜವಾಬ್ದಾರಿತನದಿಂದಾಗಿ ಹತ್ತಾರು ಮಂದಿಗೆ ಸೋಂಕು ಹರಡಿಸಿದ್ದಾರೆ. ಇಂಥವರಿಗೆ ‘ಸೂಪರ್‌ ಸ್ಟ್ರೇಡರ್ಸ್‌’ ಎಂದು ಆಂಗ್ಲಭಾಷೆಯಲ್ಲಿ ಕರೆಯಲಾಗಿದೆ.

ಬೆಂಗಳೂರಿನಲ್ಲಿ ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿರುವ ಒಬ್ಬ ವ್ಯಕ್ತಿಯಿಂದ ಒಂದೇ ದಿನಕ್ಕೆ 9 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಹೊಂಗಸಂದ್ರ ಪ್ರದೇಶದ ಜನತೆಯ ನಿದ್ದೆಗೆಡಿಸಿದೆ.

ನಿನ್ನೆ ಏಕ್‌ದಂ ರಸ್ತೆಗಿಳಿದವು 2 ಲಕ್ಷ ವಾಹನ! ಲಾಕ್‌ಡೌನ್ ಅಂದ್ರೆ ಇದೇನಾ..?

ಮೈಸೂರು ಜಿಲ್ಲೆ ನಂಜನಗೂಡು ಔಷಧ ಕಂಪೆನಿಯಲ್ಲಿ ಮೊದಲ ಸೋಂಕಿಗೆ ಗುರಿಯಾದ 35 ವರ್ಷದ ವ್ಯಕ್ತಿಯಿಂದ 71 ಮಂದಿಗೆ ನೇರವಾಗಿ ಅಥವಾ ದ್ವಿತೀಯ ಹಾಗೂ ತೃತೀಯ ಸಂಪರ್ಕದಿಂದ ಸೋಂಕು ಹರಡಿದೆ.

ವಿಜಯಪುರದಲ್ಲಿ 60 ವರ್ಷದ ಅಜ್ಜಿಗೆ (ರೋಗಿಸಂಖ್ಯೆ 221) ಮೊದಲು ಸೋಂಕು ದೃಢಪಟ್ಟಿತ್ತು. ಈಕೆಯಿಂದ 32 ಮಂದಿಗೆ ಸೋಂಕು ವ್ಯಾಪಿಸಿದೆ. ಬಾಗಲಕೋಟೆಯ ಮೊದಲ ಸೋಂಕಿತ ಮೃತ ವೃದ್ಧನಿಂದ ನೇರ ಹಾಗೂ ಪರೋಕ್ಷವಾಗಿ 12 ಮಂದಿಗೆ ಸೋಂಕು ಹರಡಿದೆ.

ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

ಲಂಡನ್‌ನಿಂದ ಬಂದ ಬೆಂಗಳೂರು ಮೂಲದ 52 ವರ್ಷದ ವ್ಯಕ್ತಿ-ಮನೆ ಕೆಲಸದ ಮಹಿಳೆ, ಆಕೆಯ ಗಂಡ,Ü 10 ವರ್ಷದ ಮಗನಿಗೂ ಸೋಂಕು ದೃಢವಾಗಿದೆ. 47 ವರ್ಷದ ಬಳ್ಳಾರಿ ಮಹಿಳೆಯಿಂದ 7 ಮಂದಿಗೆ ಸೋಂಕು ಹರಡಿದೆ.

click me!