ರಾಜ್ಯದ ವಿವಿಧೆಡೆ ಇನ್ನೂ 2 ದಿನ ಮಳೆ ಸಿಡಿಲು ಎಚ್ಚರಿಕೆ

By Web DeskFirst Published Nov 19, 2018, 9:44 AM IST
Highlights

ಗಜ ಚಂಡ ಮಾರುತ ತಮಿಳುನಾಡಿಗೆ ಅಪ್ಪಳಿಸಿ ಈಗಾಗಲೇ ಭಾರೀ ಅವಾಂತರವನ್ನು ಸೃಷ್ಟಿ  ಮಾಡಿದೆ. ಇದೇ ವೇಳೆ ರಾಜ್ಯದಲ್ಲಿ ಇನ್ನೂ ಕೂಡ 2 ದಿನ ಮಳೆಯಾಗಲಿದೆ ಎಂದು ನೈಸರ್ಗಿಕ ವಿಕೋಪ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ‘ಗಜ’ ಚಂಡಮಾರುತದ ಪ್ರಭಾವದಿಂದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಮತ್ತೆ ವಾಯುಭಾರ ಕುಸಿತ:  ಗಜ ಚಂಡಮಾರುತ ಪ್ರಭಾವ ತಗ್ಗುತ್ತಿದ್ದಂತೆ ಬಂಗಾಳಕೊಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದೆ.

ನ.19 ಮತ್ತು 20 ರ ನಂತರ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿ ಮೂಲಕ ಭೂ ಭಾಗವನ್ನು ಪ್ರವೇಶಿಸಲಿದೆ ಎಂದು ಕೆಎಸ್ ಎನ್‌ಡಿಎಂಸಿ ತಿಳಿಸಿದೆ. 

click me!