ಮಲೇಷ್ಯಾದಿಂದಲೇ ಹುತಾತ್ಮ ಗುರು ಕುಟುಂಬಕ್ಕೆ ಜಮೀನು ನೆರವು ಘೋಷಿಸಿದ ಸುಮಲತಾ ಅಂಬರೀಶ್

By Web DeskFirst Published Feb 16, 2019, 4:19 PM IST
Highlights

ಹುತಾತ್ಮ ಯೋಧನ ಕುಟುಂಬಕ್ಕೆ ನೆರವು ಘೋಷಿಸಿದ  ದಿ.ಅಂಬರೀಶ್​ ಪತ್ನಿ ಸುಮಲತಾ ಅಂಬರೀಶ್! ಜಮೀನು ನೀಡುವುದಾಗಿ ಸುಮಲತಾ ಅಂಬರೀಶ್ ಘೋಷಣೆ​! ಮಲೇಷಿಯಾದಿಂದಲೇ ಘೋಷಿಸಿದ ಸುಮಲತಾ ಅಂಬರೀಶ್​.

ಬೆಂಗಳೂರು, (16): ಮಂಡ್ಯ ಸಿಡಿಲಮರಿ, ಹುತಾತ್ಮ ಯೋಧ ಎಚ್. ಗುರು ಅವರ ಕುಟುಂಬಕ್ಕೆ ಸುಮಲತಾ ಅಂಬರೀಶ್ ನೆರವು ಘೋಷಿಸಿದ್ದಾರೆ.

ಶೂಟಿಂಗ್ ನಿಮಿತ್ತ ಮಲೇಷ್ಯಾ ಪ್ರವಾಸದಲ್ಲಿರುವ ಸುಮಲತಾ ಅಂಬರೀಶ್ ಅವರು ಹುತಾತ್ಮ ಗುರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಘೋಷಿಸಿದ್ದಾರೆ.

ಅಂಬರೀಶ್​ ಹುಟ್ಟೂರು ದೊಡ್ಡರಸಿನಕೆರೆಯಲ್ಲಿರುವ ಅರ್ಧ ಎಕರೆ ಜಮೀನು ನೀಡುವುದಾಗಿ  ಮಲೇಷ್ಯಾದಿಂದಲೇ ವಿಡಿಯೋ ಮೂಲಕ ತಿಳಿಸಿದ್ದಾರೆ.

ಮಂಡ್ಯದ ಗಂಡು ವೀರಯೋಧ ಗುರು ಕುಟುಂಬಕ್ಕೆ 25 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ಹುದ್ದೆ

ಹುತಾತ್ಮ ಯೋಧ ಗುರು ಕುಟುಂಬಕ್ಕೆ ನನ್ನದೊಂದು ಪುಟ್ಟ ಸೇವೆ ಅಷ್ಟೇ. ನಾನು ಮಲೇಷಿಯಾದಲ್ಲಿ ಶೂಟಿಂಗ್​ನಲ್ಲಿ ಇದ್ದೇನೆ. ಮಲೇಷಿಯಾದಿಂದ ಬಂದ ಬಳಿಕ ಗುರು ಮನೆಗೆ ಭೇಟಿ ನೀಡುವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನಿಜಕ್ಕೂ ಸುಮಲತಾ ಅಂಬರೀಶ್ ಅವರ ಈ ಕಾರ್ಯಕ್ಕೆ ದೊಡ್ಡ ಸೆಲ್ಯೂಟ್.

"

ಇನ್ನು ರಾಜ್ಯ ಸರ್ಕಾರ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಇದರ ಜೊತೆಗೆ ಗುರು ಅವರ ಹೆಂಡತಿಗೆ ಸರ್ಕಾರಿ ನೌಕರಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಸ್ಫೋಟಕ ತುಂಬಿದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿ ಭೀಕರ ಸ್ಫೋಟ ಸಂಭವಿಸಿತ್ತು. ಇದರಿಂದ 44  ಯೊಧರು ಹುತಾತ್ಮರಾಗಿದ್ದರು. 

click me!