KMF Ghee Price Hike: ರಾಜ್ಯದ ಜನರ ಪಾಲಿಗೆ ನಂದಿನಿ 'ಬಿಸಿ ತುಪ್ಪ' ಒಂದು ಲೀಟರ್‌ಗೆ ಬರೋಬ್ಬರಿ ₹90 ಏರಿಕೆ!

Published : Nov 05, 2025, 12:20 PM ISTUpdated : Nov 05, 2025, 12:32 PM IST
Sudden Hike in KMF Ghee Prices 90 Rupees Increase

ಸಾರಾಂಶ

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತನ್ನ ನಂದಿನಿ ತುಪ್ಪದ ದರವನ್ನು ಲೀಟರ್‌ಗೆ 90 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ದಿಢೀರ್ ದರ ಏರಿಕೆಯಿಂದಾಗಿ, ಒಂದು ಲೀಟರ್ ತುಪ್ಪದ ಹೊಸ ಬೆಲೆ 700 ರೂಪಾಯಿ ಆಗಿದ್ದು, ವಿಶ್ವ ಮಾರುಕಟ್ಟೆಯಲ್ಲಿನ ದರ ಏರಿಕೆಯೇ ಈ ಕ್ರಮಕ್ಕೆ ಕಾರಣವೆಂದು ಕೆಎಂಎಫ್ ತಿಳಿಸಿದೆ.

ಬೆಂಗಳೂರು, (ನ.5): ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ತನ್ನ ತುಪ್ಪದ ದರವನ್ನು ದಿಢೀರ್ ಏರಿಸಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಒಂದು ಲೀಟರ್ ಕೆಎಂಎಫ್ ತುಪ್ಪಕ್ಕೆ 90 ರೂಪಾಯಿ ಹೆಚ್ಚಳವಾಗಿ, ಈಗ ಇದು 700 ರೂಪಾಯಿಗಳ ದರಕ್ಕೆ ಬೆಲೆ ಬಾಳಿಸುತ್ತಿದೆ.

ತುಪ್ಪದ ಬೆಲೆ ದಿಡೀರ್ ಹೆಚ್ಚಳಕ್ಕೆ ಕಾರಣವೇನು?

ಕೆಎಂಎಫ್ ಅಧಿಕಾರಿಗಳ ಮಾಹಿತಿ ಪ್ರಕಾರ, ಈಗಿನವರೆಗೆ ಒಂದು ಲೀಟರ್ ತುಪ್ಪವನ್ನು 610 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೂ ಮುಂಚೆ ಈ ದರ 650 ರೂಪಾಯಿಗಳಿತ್ತು, ಸುಧಾರಣೆಯಲ್ಲಿ 40 ರೂಪಾಯಿಗಳ ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲು ಜಿಎಸ್‌ಟಿ ಕಾರಣ, ಈಗ ವಿಶ್ವ ಮಾರುಕಟ್ಟೆ!

ಕೆಎಂಎಫ್ ತುಪ್ಪದ ದರವನ್ನು ದೀಡೀರ್ ಲಿಟರ್‌ಗೆ 90 ರೂಪಾಯಿ ಹೆಚ್ಚಳ ಮಾಡಿರುವ ಸರ್ಕಾರದ ಇಬ್ಬಂದಿತನ ತೋರಿಸಿದೆ. ಈ ಮೊದಲು ಬೆಲೆ ಹೆ್ಚ್ಚಳಕ್ಕೆ ಜಿಎಸ್‌ಟಿ ಮೇಲೆ ಗೂಬೆ ಕೂರಿಸಲಾಗುತ್ತಿತ್ತು. ಆದರೆ ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಯಿಂದಾಗಿದೆ. ತುಪ್ಪದ ಬೆಲೆ ಇಳಿಸಿ ನಂತರ ಇದೀಗ ವಿಶ್ವ ಮಾರುಕಟ್ಟೆಯ ನೆಪದಲ್ಲಿ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಹೊರೆಯನ್ನು ಹೇರಿದೆ.

ಹಿಂದೆ ಬೆಲೆ ಏರಿಕೆಗೆ ಜಿಎಸ್‌ಟಿ ಅನ್ನೇ ಕಾರಣ ಎಂದು ಆರೋಪಿಸುತ್ತಿದ್ದ ಸರ್ಕಾರ, ಈಗ ಅದೇ ಸುಧಾರಣೆಯ ನಂತರ ವಿಶ್ವ ಮಾರುಕಟ್ಟೆಯ ದರ ಹೆಚ್ಚಳವನ್ನು ಮುಂದಿಟ್ಟುಕೊಂಡು ತುಪ್ಪದ ಬೆಲೆಯನ್ನು ಹೆಚ್ಚಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!