ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ದೇಶದ ಚಾಯ್ ವಾಲಾನ ಭೇಟಿಗೆ ಚಾಮರಾಜನಗರದ ಚಾಯ್ ವಾಲಾ ಕಾತುರನಾಗಿದ್ದು, ಮೋದಿಗೂ ಕೂಡ ಚಾನ್ಸ್ ಸಿಕ್ಕಿದ್ರೆ ಟೀ ಕುಡಿಸ್ತೀನಿ ಅಂತಿದ್ದಾರೆ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಅ.20): ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ದೇಶದ ಚಾಯ್ ವಾಲಾನ ಭೇಟಿಗೆ ಚಾಮರಾಜನಗರದ ಚಾಯ್ ವಾಲಾ ಕಾತುರನಾಗಿದ್ದು, ಮೋದಿಗೂ ಕೂಡ ಚಾನ್ಸ್ ಸಿಕ್ಕಿದ್ರೆ ಟೀ ಕುಡಿಸ್ತೀನಿ ಅಂತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಮುಂದಿನ ವರ್ಷ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದ ಬೀದಿ ಬದಿ ಟೀ ಅಂಗಡಿ ವ್ಯಾಪಾರಿಯೊಬ್ಬರು ಆಯ್ಕೆಯಾಗಿದ್ದಾರೆ.
undefined
ಅವ್ರೇ ಚಾಮರಾಜನಗರದ ಚಾಯ್ ವಾಲಾ ಸಮೀವುಲ್ಲಾ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಯೋಜನೆಯಲ್ಲಿ ಕಿರುಸಾಲ ಪಡೆದು ಮರುಪಾವತಿ ಮಾಡಿರುವವರ ಫಲಾನುಭವಿಯನ್ನು ಪರಿಗಣಿಸಲಾಗಿದೆ. ಅಲ್ಲದೇ ಡೇ ನಲ್ಮ್ ಆರ್ಹರ ಹೆಸರು ಆಯ್ಕೆ ಮಾಡಿದ್ದಾರೆ. ಕೋವಿಡ್ ವೇಳೆ ಬೀದಿ ಬದಿ ವ್ಯಾಪಾರಿಗಳು ಅಕ್ಷರಶಃ ನಲುಗಿ ಹೋಗಿದ್ದರು. ಇನ್ನೂ ಲೇವಾದೇವಿಗಾರರು ಬಡ್ಡಿ ಹೆಚ್ಚಿಸಿ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡ್ತಿದ್ದರು. ಇದನ್ನೆಲ್ಲ ತಪ್ಪಿಸಲು ಸ್ಥಳೀಯ ಸಂಸ್ಥೆ ಹಾಗೂ ಡೇ ನಲ್ಮ್ ಮೂಲಕ ಸಾಲ ಕೊಡಲಾಗಿದೆ.
ಎರಡು ಕಾಲಿಲ್ಲವಾದ್ರೂ ಈಜು ವಿಭಾಗದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ!
ಆದ್ರಂತೆ ಮೊದಲಿಗೆ 10 ಸಾವಿರ ನಂತರ 20 ಸಾವಿರ ನಂತರ 50 ಸಾವಿರ ಸಾಲದ ಸೌಲಭ್ಯ ಕೊಡಲಾಗುತ್ತೆ. ಸಾಲ ಪಡೆದವರು ಮರುಪಾವತಿ ಮಾಡಿದ್ರಷ್ಟೆ ಸಾಲ ಕೊಡೋದು. ಆದರೆ ಸಾಲ ಪಡೆದ ಬಹುತೇಕ ಜನರು ಸಾಲ ಮರುಪಾವತಿಸುವ ಗೋಜಿಗೆ ಹೋಗುವುದೇ ಇಲ್ಲ. ಈ ಹಿನ್ನಲೆ ಈ ಸ್ಕೀಂ ನಲ್ಲಿ ಸಾಲ ಪಡೆದ ಸಮೀವುಲ್ಲಾ ಟೀ ಅಂಗಡಿ ಮಾಡಿ ಸಾಲ ಮರುಪಾವತಿಸಿದ್ದಾರೆ. ಯೋಜನೆಯಿಂದ ಆರ್ಥಿಕ ಸಬಲರಾಗಿದ್ದಾರೆ. ಚಾಮರಾಜನಗರದ ಚಾಯ್ ವಾಲಾನೊಬ್ಬ ದೇಶದ ಚಾಯ್ ವಾಲಾನ ಭೇಟಿ ಮಾಡಲೂ ಹೋಗ್ತಿನಿ ಅಂತಾ ಸಂತಸ ಪಟ್ಟಿದ್ದಾರೆ.
ಇನ್ನೂ ಚಾಮರಾಜನಗರದ ಒಬ್ಬ ಮುಸ್ಲಿಂ ಟೀ ವ್ಯಾಪಾರಿ ದೇಶದ ಪ್ರಧಾನಿ ಭಾಗವಹಿಸುವ ದೆಹಲಿ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದಿಂದ ಆಯ್ಕೆಯಾಗಿರುವುದು ಎಲ್ಲರೂ ಹೆಮ್ಮೆ ಪಡುವ ವಿಚಾರ. ಹಾಗು ಚಾಮರಾಜನಗರಕ್ಕೆ ಸಿಕ್ಕ ಗೌರವ ಸಮೀವುಲ್ಲಾ ಒಬ್ಬರ ಬಳಿಯೂ ಕೂಡ ಸಾಲ ಪಡೆಯಲ್ಲ. ಸಾಲ ಮಾಡಿದ್ರೂ ಕೂಡ ಅದನ್ನು ತೀರಿಸುವ ಇಚ್ಚೆ ಹೊಂದಿದ್ದಾನೆ. ಅವನ ಹಾಗೆ ಪ್ರತಿಯೊಬ್ಬರು ಯಾವುದೇ ಬ್ಯಾಂಕ್ ಹಾಗು ಕೆಂದ್ರ ಹಾಗು ರಾಜ್ಯ ಸರ್ಕಾರಗಳ ಹಣಕಾಸು ನಗಮಗಳಿಂದ ಪಡೆದ ಸಾಲ ಮರುಪಾವತಿ ಮಾಡಿ ಬೇರೆಯವರಿಗೆ ಮಾದರಿಯಾಗಬೇಕು ನಮ್ಮಂತೆ ಬೇರೆಯವರು ಸಾಲ ಪಡೆಯಲು ನಾವು ಮೊದಲು ನಮ್ಮ ಸಾಲ ಮರು ಪಾವತಿಸಬೇಕು.
ಹಾಸನ ಲೋಕಸಭಾ ಅಭ್ಯರ್ಥಿಯಾಗಿ ದೇವೇಗೌಡರು ನಿಲ್ಲಲಿ: ಶಾಸಕ ಎ.ಮಂಜು
ಇದೀಗ ದೇಶದ ಪ್ರಧಾನಿ ಭೇಟಿಗೆ ಹೋಗ್ತಿರೊದು ನಮಗು ಸಂತಸ ಅಂತಾರೆ ಸ್ಥಳೀಯರು. ಒಟ್ಟಿನಲ್ಲಿ ಪಿಎಂ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸದೃಢತೆ ಹೊಂದಲೂ ನೆರವಾಗಿದೆ. ಈ ಹಿನ್ನಲೆ ಪ್ರತಿ ಜಿಲ್ಲೆಯಿಂದಲೂ ಕೂಡ ಬೀದಿ ಬದಿ ವ್ಯಾಪಾರಿಗಳನ್ನು ದೆಹಲಿಯ ಗಣರಾಜ್ಯೋತ್ಸವಕ್ಕೆ ಆಯ್ಕೆ ಮಾಡಿದ್ದು, ಚಾಮರಾಜನಗರದ ಚಾಯ್ ವಾಲಾ ಆಯ್ಕೆ ದೇಶದ ಚೌಕಿದಾರನಿಗೆ ಟೀ ಕುಡಿಸುವ ಆಸೆ ಹೊಂದಿದ್ದಾರೆ.