Hubli: ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿಡುವ ತಂತ್ರ ಸಿದ್ಧವಾಗಿದೆ: ಸಿಎಂ ಬೊಮ್ಮಾಯಿ

By Sathish Kumar KH  |  First Published Dec 18, 2022, 1:36 PM IST

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮಹಾ ಮೇಳವನ್ನು ನಡೆಸಲು ಮುಂದಾಗಿದೆ. ರಾಜ್ಯದಲ್ಲಿ ಎಂಇಎಸ್‌ ಪುಂಡಾಟ ಕಳೆದ 50 ವರ್ಷದಿಂದ ನಡೆಯುತ್ತಲೇ ಬಂದಿದೆ. ಅವರನ್ನು ಯಾವ ರೀತಿ ಹದ್ದು ಬಸ್ತಿನಲ್ಲಿ ಇಡಬೇಕು ನಮಗೆ ಗೊತ್ತಿದೆ.


ಹುಬ್ಬಳ್ಳಿ (ಡಿ.18): ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮಹಾ ಮೇಳವನ್ನು ನಡೆಸಲು ಮುಂದಾಗಿದೆ. ರಾಜ್ಯದಲ್ಲಿ ಎಂಇಎಸ್‌ ಪುಂಡಾಟ ಇದೇ ಮೊದಲೇನಲ್ಲ. ಕಳೆದ 50 ವರ್ಷದಿಂದ ಎಂಇಎಸ್ ಪುಂಡಾಟ ಮಾಡುತ್ತಲೇ ಬಂದಿದೆ. ಅವರನ್ನು ಯಾವ ರೀತಿ ಹದ್ದು ಬಸ್ತಿನಲ್ಲಿ ಇಡಬೇಕು ನಮಗೆ ಗೊತ್ತಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಎಂಇಎಸ್ ಮುಖಂಡರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕುಕ್ಕರ್ ಬಾಂಬ್ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಮೊದಲು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನ ಗಮನಿಸಿ‌ ಪ್ರತಿಕ್ರಿಯೆ ನೀಡಬೇಕು. ಅದೊಂದು ಆಕಸ್ಮಿಕ ಘಟನೆ, ಪ್ರೆಶರ್ ಕುಕ್ಕರ್ ನಿಂದ ಆಗಿದ್ದು ಅಂತ ಹೇಳಿದ್ದಾರೆ. ಶಿವಕುಮಾರ ಹೇಳಿದ ಮಾತು  ಕೇಳಿಸಿಕೊಂಡು ಮಾತನಾಡಲಿ ಎಂದು ಹೇಳಿದರು. 

Tap to resize

Latest Videos

ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ಜಾರಿಗೆ (ಬಿಲ್) ತರುತ್ತಿದ್ದೇವೆ. ಎಸ್ಸಿ ಎಸ್ಟಿ ಮೀಸಲಾತಿ ಜಾರಿ ಬಿಲ್  ಪ್ರಮುಖವಾಗಿ ಚರ್ಚೆಗೆ ಬರಲಿದೆ. ಬೆಳಗಾವಿ ಅಧಿವೇಶನದಲ್ಲಿ ಆರ್ಡಿನೆನ್ಸ್ ರೀಪ್ರೇಮೆಂಟ್ ಬಿಲ್ ಬರುತ್ತೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಚಾರಗಳು ಚೆರ್ಚೆಗೆ ಬರಲಿದ್ದು, ಅದಕ್ಕೆ‌ ಸರ್ಕಾರ ಉತ್ತರ ನೀಡಲಿದೆ. ಈ ಬಾರಿ ಅಧಿವೇಶನ ತೀವ್ರ ಪ್ರಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎಂಇಎಸ್‌ ಕಾರ್ಯಕರ್ತರೇ ಪುಂಡಾಡಿಕೆ ನಿಲ್ಲಿಸಿ: ಲಕ್ಷ್ಮಣ ಸವದಿ

ಎಚ್. ವಿಶ್ವನಾಥ್‌ ವಿರುದ್ಧ ಕೆ.ಜಿ. ಬೋಪಯ್ಯ ಆಕ್ರೋಶ: ಇನ್ನು ಡಿಕೆ. ಶಿವಕುಮಾರ್‌ ಅವರು ವೋಟರ್‌ ಐಡಿ ಪ್ರಕರಣವನ್ನು ಮುಚ್ಚಿಹಾಕಲು ಶಾರೀಕ್‌ ಕುಕ್ಕರ್‌ ಬಾಂಬ್‌ ಪ್ರಕರಣವನ್ನು ಮುನ್ನೆಲೆಗೆ ತಂದಿದೆ ಎಂದು ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಯನ್ನು ಎಚ್. ವಿಶ್ವನಾಥ್‌ ಅವರು ಸಮರ್ಥಿಸಿಕೊಂಡಿದ್ದರು. ಈ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ  ಅವರು ಮಾತನಾಡಿ, ಯಾವುದೋ ಕಾರಣಕ್ಕೆ ತಲೆಕೆಟ್ಟವರನ್ನು ಸರಿಮಾಡಬಹುದು. ಪೂರ್ತಿ ತಲೆಕೆಟ್ಟಿರದಿದ್ದರೂ ತಲೆಕೆಟ್ಟವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತ ವ್ಯಕ್ತಿತ್ವ ಹೊಂದಿರುವವರು ವಿಶ್ವನಾಥ್ ಅವರಾಗಿದ್ದಾರೆ. ಈ ತಲೆಕೆಟ್ಟವರ ಬಗ್ಗೆ ಏನು ಮಾತನಾಡುವುದು ಎಂದು ನೆಗ್ಲೆಟ್‌ ಮಾಡಬೇಕು ಎಂದು ಹೇಳಿದರು.

ಬೆಳಗಾವಿ ಗಡಿ ವಿವಾದ ಹಳೇ ವಿವಾದಕ್ಕೆ ಮರುಜೀವ, ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹ

ವಿಶ್ವನಾಥ್ ಒಬ್ಬ ಕೃತಘ್ನ: ಇನ್ನು ಪಾರ್ಲಿಮೆಂಟ್‌ ಸದಸ್ಯರಾಗಿದ್ದವರು ಬಿಜೆಪಿಯಿಂದ ಎಲ್ಲವನ್ನು ಅನುಭವಿಸಿ ಕೆಟ್ಟದ್ದಾಗಿ ಮಾತನಾಡುತ್ತಾರೆ. ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ. ವಿಶ್ವನಾಥ್ ಅವರ ಮೆದುಳು ಮತ್ತು ನಾಲಿಗೆಗೆ ಕಂಟ್ರೋಲ್ ತಪ್ಪಿದೆ. ಚುನಾವಣೆ ಎದುರಿಸಲು ಬಿಜೆಪಿಯಿಂದ 15 ಕೋಟಿ ರೂ. ವಿಶ್ವನಾಥ್ ಅವರಿಗೆ ನೀಡಲಾಗಿತ್ತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಶ್ರೀನಿವಾಸ್ ಪ್ರಸಾದ್ ತುಂಬ ಹಿರಿಯರಿದ್ದಾರೆ. ಏಕಾಏಕಿ ಆ ರೀತಿಯ ಹೇಳಿಕೆ ಕೊಡುವವರಲ್ಲ ಇದರ ಹಿಂದೆ ಏನಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.

click me!