Krishi Pandita Award: ವಾಟ್ಸ್‌ಆ್ಯಪ್‌ನಲ್ಲೇ ‘ಕೃಷಿ ಪಂಡಿತ ಪ್ರಶಸ್ತಿ’ ಕೊಟ್ಟ ಸರ್ಕಾರ!

Kannadaprabha News   | Asianet News
Published : Mar 07, 2022, 05:59 AM IST
Krishi Pandita Award: ವಾಟ್ಸ್‌ಆ್ಯಪ್‌ನಲ್ಲೇ ‘ಕೃಷಿ ಪಂಡಿತ ಪ್ರಶಸ್ತಿ’ ಕೊಟ್ಟ ಸರ್ಕಾರ!

ಸಾರಾಂಶ

ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ ‘ಕೃಷಿ ಪಂಡಿತ ಪ್ರಶಸ್ತಿ’ಯನ್ನು ಪ್ರದಾನ ಮಾಡದೇ ಪ್ರಮಾಣಪತ್ರವನ್ನು ವಾಟ್ಸ್‌ಆ್ಯಪ್‌ನಲ್ಲೇ ಕಳುಹಿಸುವ ಮೂಲಕ ಸಾಧಕ ರೈತರಿಗೆ ಅಗೌರವ ತೋರಲಾಗಿದೆ.

ನಾರಾಯಣ ಹೆಗಡೆ

ಹಾವೇರಿ (ಮಾ.7): ಕೃಷಿಯಲ್ಲಿ (Agriculture) ಸಾಧನೆ ಮಾಡಿದ ರೈತರಿಗೆ (Farmers) ಸರ್ಕಾರದಿಂದ (State Government) ಕೊಡಮಾಡುವ ಪ್ರತಿಷ್ಠಿತ ‘ಕೃಷಿ ಪಂಡಿತ ಪ್ರಶಸ್ತಿ’ಯನ್ನು (Krishi Pandita Award) ಪ್ರದಾನ ಮಾಡದೇ ಪ್ರಮಾಣ ಪತ್ರವನ್ನು ವಾಟ್ಸ್‌ಆ್ಯಪ್‌ನಲ್ಲೇ (Whatsapp) ಕಳುಹಿಸುವ ಮೂಲಕ ಸಾಧಕ ರೈತರಿಗೆ ಅಗೌರವ ತೋರಲಾಗಿದೆ.

2020-21ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ (Agriculture Department) ರಾಜ್ಯ ಮಟ್ಟದ ‘ಕೃಷಿ ಪಂಡಿತ’, ‘ಉದಯೋನ್ಮುಖ ಕೃಷಿ ಪಂಡಿತ’ ಪ್ರಶಸ್ತಿಗೆ ರೈತರನ್ನು ಆಯ್ಕೆ ಮಾಡಿದ್ದ ಸರ್ಕಾರ, ಕೋವಿಡ್‌ (Covid19) ಕಾರಣಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಲ್ಲ. ಪ್ರಶಸ್ತಿ ಘೋಷಣೆಯಾಗಿ ಒಂದು ವರ್ಷ ಕಳೆದರೂ ಗೌರವಿಸದ ಇಲಾಖೆ ಬಗ್ಗೆಯೇ ಸಾಧಕ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಪ್ರಶಸ್ತಿ ಮೊತ್ತವನ್ನು ಸಾಧಕ ರೈತರ ಖಾತೆಗೆ ಹಾಕಿದ್ದ ಕೃಷಿ ಇಲಾಖೆ, ಕೊನೆಗೆ ಪ್ರಮಾಣಪತ್ರವನ್ನು ವಾಟ್ಸ್‌ಆ್ಯಪ್‌ನಲ್ಲೇ ಕಳುಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಶೀಘ್ರ ಪಹಣಿ ಪತ್ರದಲ್ಲೇ ಸಿಗಲಿದೆ ಜಮೀನಿನ ನಕ್ಷೆ!

ವರ್ಷದ ಹಿಂದೆಯೇ ಘೋಷಣೆ: ನೀರಿನ ಸಮರ್ಥ ಬಳಕೆ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ, ಸಮಗ್ರ ಕೃಷಿ ಪದ್ಧತಿ, ಬೆಳೆ ವೈವಿಧ್ಯ ಮುಂತಾದ ಅಂಶಗಳನ್ನು ಇಟ್ಟುಕೊಂಡು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕು ಬೈಚುವಳ್ಳಿ ಗ್ರಾಮದ ರಾಜೀವ ದಾನಪ್ಪನವರ ಅವರನ್ನು ‘ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಕಳೆದ ಮಾರ್ಚ್‌ನಲ್ಲೇ ಪ್ರಶಸ್ತಿ ಘೋಷಿಸಿ, ಕೆಲವೇ ದಿನಗಳಲ್ಲಿ ಅವರ ಖಾತೆಗೆ ಪ್ರಶಸ್ತಿಯ ಮೊತ್ತ .50 ಸಾವಿರ ಹಾಕಲಾಗಿದೆ. ಕೋವಿಡ್‌ ಕಾರಣ ನೀಡಿ ಸಮಾರಂಭ ಆನಂತರ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. 

ಬೇಸರಗೊಂಡ ರಾಜೀವ ದಾನಪ್ಪನವರ ಅವರು, ಪ್ರಶಸ್ತಿ ಪತ್ರವನ್ನಾದರೂ ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದರು. ಅಧಿಕಾರಿಗಳಿಂದ ಸಿಕ್ಕ ಸ್ಪಂದನೆ ನೋಡಿ ರಾಜೀವ ದಾನಪ್ಪನವರ ಮತ್ತಷ್ಟು ಗಾಬರಿಯಾಗಿದ್ದಾರೆ. ಅವರ ಪ್ರಮಾಣ ಪತ್ರವನ್ನು ವಾಟ್ಸ್‌ಆ್ಯಪ್‌ನಲ್ಲೇ ಕಳುಹಿಸಿದ್ದಾರೆ! ಆ ಪ್ರಮಾಣಪತ್ರಕ್ಕೆ ಅವರ ಫೋಟೋ, ದಿನಾಂಕವೂ ಇಲ್ಲ. ಅದನ್ನು ಆಕ್ಷೇಪಿಸಿದ್ದಕ್ಕೆ ಫೋಟೋ ಹಾಕಿ ಮತ್ತೊಂದು ಪ್ರಮಾಣ ಪತ್ರವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಾರೆ ಇದಕ್ಕೆ ಅಸಮಾದಾನಗೊಂಡಿರುವ ದಾನಪ್ಪನವರ, ಪ್ರಶಸ್ತಿ ಹಾಗೂ ಅದರ ಮೊತ್ತವನ್ನು ವಾಪಸ್‌ ಮಾಡುತ್ತೇನೆ ಎಂದಿದ್ದಾರೆ.

Gajendra Singh Shekhawat: ವೈರ್‌ಲೆಸ್‌ ಮೂಲಕ ಕಾಲುವೆ ನೀರು ನಿಯಂತ್ರಣ

ನಮ್ಮ ಹೊಲಕ್ಕೆ ಬಂದು ನಾನು ಮಾಡಿದ ಕೃಷಿಯನ್ನು ನೋಡಿ 2020-21ನೇ ಸಾಲಿಗೆ ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಯ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಿದ್ದಾರೆ. ಆದರೆ, ಒಂದು ಸಮಾರಂಭ ಮಾಡಿ ಪ್ರಶಸ್ತಿ ಪ್ರದಾನ ಮಾಡಿದ್ದರೆ ನಮಗೂ, ಇಲಾಖೆಗೂ ಗೌರವ ಬರುತ್ತಿತ್ತು. ಬಹಳ ಸಲ ಒತ್ತಾಯಿಸಿದ ಮೇಲೆ ವಾಟ್ಸ್‌ಆ್ಯಪ್‌ನಲ್ಲೇ ಪ್ರಮಾಣಪತ್ರ ಕಳುಹಿಸಿದ್ದಾರೆ.
-ರಾಜೀವ ದಾನಪ್ಪನವರ, ಕೃಷಿ ಪಂಡಿತ ಪ್ರಶಸ್ತಿಗೆ ಆಯ್ಕೆಯಾಗಿರುವ ರೈತ

ಸಾಧಕ ರೈತರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು, ರೈತರನ್ನು ಅವಮಾನಿಸಬೇಕು ಎಂಬುದು ಇಲಾಖೆಗಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಪ್ರಮಾಣ ಪತ್ರ ನೀಡಿರುವುದು ತಮಗೆ ಗೊತ್ತಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ.
-ಮಂಜುನಾಥ್‌, ಜಂಟಿ ಕೃಷಿ ನಿರ್ದೇಶಕ, ಹಾವೇರಿ

ರೈತರಿಗೆ ‘ಕೃಷಿ ಪಂಡಿತ’, ‘ಉದಯೋನ್ಮುಖ ಕೃಷಿ ಪಂಡಿತ’ ಪ್ರಶಸ್ತಿಯನ್ನು ಕಳೆದ ಸಾಲಿನಲ್ಲಿ ಕೊಟ್ಟಿಲ್ಲ. ವಾಟ್ಸಪ್‌ನಲ್ಲಿ ರೈತರಿಗೆ ಪ್ರಮಾಣ ಪತ್ರ ಕಳುಹಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ.
-ಬಿ.ಸಿ.ಪಾಟೀಲ್‌, ಕೃಷಿ ಸಚಿವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!