ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (ಸ್ಕಾಡಾ) ರಿಮೋಟ್ ತಂತ್ರಜ್ಞಾನದ ಮುಖಾಂತರ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್)ದ ಕಾಲುವೆಗಳ ಗೇಟ್ ನಿಯಂತ್ರಿಸಲಾಗುತ್ತಿದೆ.
ಯಾದಗಿರಿ (ಮಾ.7): ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (ಸ್ಕಾಡಾ) ರಿಮೋಟ್ ತಂತ್ರಜ್ಞಾನದ ಮುಖಾಂತರ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್)ದ ಕಾಲುವೆಗಳ ಗೇಟ್ ನಿಯಂತ್ರಿಸಲಾಗುತ್ತಿದೆ. ಈ ತಂತ್ರಜ್ಞಾನ ಸಫಲವಾದರೆ, ದೇಶದ ಇತರೆ ಭಾಗಗಳಲ್ಲೂ ಅಳವಡಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ (Gajendra Singh Shekhawat) ಹೇಳಿದರು. ಭಾನುವಾರ, ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರದ ಬಸವ ಸಾಗರ ಜಲಾಶಯ ಹಾಗೂ ಸನಿಹದ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯ ಕಂಟ್ರೋಲ್ ರೂಂನಲ್ಲಿ ಅಳವಡಿಸಿರುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (ಸ್ಕಾಡಾ) ತಂತ್ರಜ್ಞಾನ ವೀಕ್ಷಿಸಿ ಅವರು ಮಾತನಾಡಿದರು.
ಕಂಟ್ರೋಲ್ ರೂಂನಿಂದ ವೈರ್‌ಲೆಸ್ ತಂತ್ರಜ್ಞಾನದ ಮೂಲಕ ಕಾಲುವೆಗಳಿಗೆ ನೀರು ಹರಿಸುವುದರಿಂದ ನೀರು ಪೋಲಾಗುವುದನ್ನು ತಡೆಗಟ್ಟಬಹುದು. ನಾರಾಯಣಪುರದ ಬಸವಸಾಗರ ಹಾಗೂ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸರಿಯಾಗಿ ನೀರು ಹರಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಕೆಬಿಜೆಎನ್‌ಎಲ್ ಕಾಲುವೆಯ 365 ಗೇಟ್‌ಗಳನ್ನು ಕಂಟ್ರೋಲ್ ರೂಂ ಮುಖಾಂತರವೇ ನಿಯಂತ್ರಿಸುತ್ತಿದ್ದು, ನೀರು ಸಮ ಪ್ರಮಾಣದಲ್ಲಿ ಜಮೀನುಗಳಿಗೆ ಹರಿಸಬಹುದಾಗಿದೆ ಎಂದರು. ರಾಜ್ಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ಇತರರಿದ್ದರು.
undefined
ಡ್ಯಾಂ ಕಟ್ಟಲು ದೇಶದಲ್ಲಿ ಜಾಗವಿಲ್ಲ: ಜಲ ಸಚಿವ!
Mekedatu ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧ: ಮೇಕೆದಾಟು ವಿವಾದ ಬಗೆಹರಿಸುವ ಸಂಬಂಧ ನ್ಯಾಯಾಲಯದ ಹೊರಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸೌಹಾರ್ದಯುತ ಮಾತುಕತೆಗೆ ಇಚ್ಛಿಸಿದರೆ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದ್ದಾರೆ. ‘ಜಲಜೀವನ್ ಮಿಷನ್’(Jal Jeevan Mission)ಅಡಿ ಜನರಿಗೆ ಆದ್ಯತೆಯ ಮೇರೆಗೆ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಭಾರತ್ (Swachh Bharat Mission) ಯೋಜನೆಯಡಿ ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಕೇಂದ್ರ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಯೋಜನೆ ಸಂಬಂಧ ಆರು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ತೆಲಂಗಾಣ, ಕೇರಳ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪ ಜತೆ ಪ್ರಾದೇಶಿಕ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಆರು ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಜಲಜೀವನ ಮಿಷನ್ ಅಡಿ 20,487.58 ಕೋಟಿ ರು. ಮತ್ತು ಸ್ವಚ್ಛ ಭಾರತ್ ಮಿಷನ್ ಆಡಿ 1,355.13 ಕೋಟಿ ರು. ಅನುದಾನವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಅಲ್ಲದೇ, ಆರು ರಾಜ್ಯಗಳಿಗೆ 7,798 ಕೋಟಿ ರು. ನಿರ್ಬಂಧಿತ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
'ಎಲೆ ನೋಡಿ ರಾಹುಲ್-ಪ್ರಿಯಾಂಕಾ ಬೆಳೆ ಹೇಳಿದ್ರೆ ರಾಜಕೀಯ ನಿವೃತ್ತಿ'
2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳು ಸಾವಿರ ಕೋಟಿ ರು.ಗಳನ್ನು ಕುಡಿಯುವ ನೀರಿನ ಯೋಜನೆಗಳಿಗೆ ನೀಡಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕ. ಬಡವ, ಶ್ರೀಮಂತ ನಡುವಿನ ಬೇಲಿಯನ್ನು ತೆಗೆದು ರಾಜ್ಯಗಳು ಪ್ರತಿ ಮನೆಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಒದಗಿಸಿದರೆ ಇಡೀ ದೇಶವೇ ಪ್ರಶಂಸೆಗೊಳಗಾಗುತ್ತದೆ. ಜಲಜೀವನ್ ಮಿಷನ್ ಅಡಿ ಈವರೆಗೆ ಶೇ.47ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದರು.
ನೀರು ನಿರ್ವಹಣೆಗೆ ಸಮುದಾಯ ಭಾಗವಹಿಸುವಿಕೆ ಮುಖ್ಯ. ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶದಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಇದ್ದು, ಅದನ್ನು ಪರಿಹರಿಸಬೇಕು. ಅಲ್ಲದೇ, ಕರ್ನಾಟಕದಲ್ಲಿಯೂ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು. ಕೇಂದ್ರ ಇದಕ್ಕೆ ಎಲ್ಲಾ ರೀತಿಯ ಅನುದಾನ ಒದಗಿಸಲಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಭಾರತ 2014ರಲ್ಲಿ ಶೇ.39ರಷ್ಟುಸಾಧನೆ ಮಾಡಿದ್ದು, 2019ರಲ್ಲಿ ಶೇ.100ರಷ್ಟುಸಾಧನೆ ಮಾಡಲಾಗಿದೆ. ಈ ಯೋಜನೆಯಡಿ ದೇಶದಲ್ಲಿ 10.28 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ರಾಜ್ಯಗಳು ಬಯಲು ಶೌಚಾಲಯ ಮುಕ್ತವೆಂದು ಘೋಷಿಸಿವೆ. ಇದರ ಎರಡನೇ ಹಂತದಲ್ಲಿ ಗ್ರಾಮ ಪಂಚಾಯಿತಿಗಳ ಎಲ್ಲಾ ರೀತಿಯ ತ್ಯಾಜ್ಯಗಳ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.