ಸಿಡಿದೆದ್ದ ಐಟಿ ಉದ್ಯೋಗಿಗಳು, ರಾಷ್ಷ್ರಮಟ್ಟದಲ್ಲಿ ಸದ್ದು ಮಾಡ್ತಿದೆ ಬೆಂಗಳೂರು ಮಟ್ರೋ ಸುದ್ದಿ!

By Gowthami K  |  First Published Oct 6, 2023, 12:15 PM IST

ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ‌ ಮಾರ್ಗ ಆರಂಭಕ್ಕೆ BMRCLಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇದೀಗ ಈ ವಿಚಾರ ರಾಷ್ಷ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.  ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದಾರೆ.


ಬೆಂಗಳೂರು (ಅ.6): ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ‌ ಮಾರ್ಗ ಆರಂಭಕ್ಕೆ BMRCLಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇದೀಗ ಈ ವಿಚಾರ ರಾಷ್ಷ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.  ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದು, ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಆರಂಭಕ್ಕೆ ಎಕ್ಸ್ ನಲ್ಲಿ(ಟ್ವಿಟರ್) ಅಭಿಯಾನ ಆರಂಭಿಸಿದ್ದಾರೆ #StartPurpleLineOperations ಎಂದು ಹ್ಯಾಷ್ ಟ್ಯಾಗ್ ಹಾಕಿ ಕ್ಯಾಂಪೇನ್  ಮಾಡಿದ್ದು, ಸಾವಿರಾರು  ಜನರಿಂದ ಟ್ವೀಟ್ ಮಾಡಿ ಬಿಎಂಆರ್ ಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳ ಬೇಜಾಬ್ದಾರಿ ವಿರುದ್ಧ ಟ್ವೀಟ್ ಮಾಡಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಸಿಎಂ, ಡಿಸಿಎಂ, ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಶೀಘ್ರ ಮೆಟ್ರೋ ಆರಂಭಿಸುವಂತೆ ಆಗ್ರಹಿಸಿದ್ದಾರೆ. ಟ್ರಾಫಿಕ್ ಜಾಮ್ ವಿಡಿಯೋ, ಫೋಟೋ, ಜೊತೆಗೆ ಸ್ಕೈವಾಕ್ ಮೇಲೆ ಜನರೇ ತುಂಬಿರುವ ವಿಡಿಯೋ ಹಾಕಿ ಕಿಡಿ ಕಾರಿದ್ದಾರೆ.

Tap to resize

Latest Videos

undefined

ನಮ್ಮ ಮೆಟ್ರೋದಲ್ಲಿ ಆಹಾರ ಸೇವಿಸಿದವನಿಗೆ ಬಿಸಿ ಮುಟ್ಟಿಸಿದ ಬಿಎಂಆರ್‌ಸಿಎಲ್‌, 500 ರೂ ದಂಡ

ಹೀಗಾಗಿ ಬಿಎಂಆರ್ ಸಿಎಲ್ ನಿರ್ಲಕ್ಷ್ಯದಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಆಗುತ್ತಿದೆ. ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಯಾಕೆ ವಿಳಂಬ? ಎಂಬ ಪ್ರಶ್ನೆ ಎದ್ದಿದೆ.  ಈ ಲೈನ್‌ನ ಎಲ್ಲಾ ಕೆಲಸ‌ ಮುಗಿದಿದ್ದರೂ ಬಿಎಂಆರ್ ಸಿಎಲ್ ಉದ್ಘಾಟನೆ‌ ದಿನಾಂಕ‌ ಮುಂದೂಡುತ್ತಿದೆ. ಈ ಬಗ್ಗೆ ಕೇಳಿದರೆ ದಿನಾಂಕ ಫಿಕ್ಸ್‌ ಆಗಿಲ್ಲ ಹೇಳ್ತೇವೆ ಎಂದಷ್ಟೇ ಬಿಎಂಆರ್ ಸಿಎಲ್ ಅಧಿಕಾರಿಗಳು   ಉತ್ತರ ನೀಡ್ತಿದ್ದಾರೆ

ಸೆ. 21ಕ್ಕೆ ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆದಿದೆ. ಕೆ.ಆರ್.ಪುರ-ಬೈಯಪ್ಪನಹಳ್ಳಿ ವಾಣಿಜ್ಯ ಸೇವೆ ಆರಂಭಿಸಲು ಗ್ರೀನ್ ಸಿಗ್ನಲ್ ಕೂಡ ನೀಡಲಾಗಿದೆ. ಕಳೆದ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆ.ಆರ್.ಪುರದಿಂದ ವೈಟ್ ಫಿಲ್ಡ್ ಮೆಟ್ರೋಗೆ ಚಾಲನೆ ನೀಡಿದ್ದರು.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕನ ಜೊತೆ ಬಾಲಿವುಡ್‌ ನಟಿಯ ಫೈಟ್‌, ವಿಡಿಯೋ ವೈರಲ್‌!

ಕಾಮಗಾರಿ ಪೂರ್ಣವಾಗಿಲ್ಲ ಅಂತ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಮಾರ್ಗ ಉದ್ಘಾಟಿಸಿರಲಿಲ್ಲ. ಹೀಗಾಗಿ ಮೆಟ್ರೋ ಲಿಂಕ್ ಇಲ್ಲದೆ ಬೈಯಪ್ಪನಹಳ್ಳಿಯಲ್ಲಿ ಇಳಿದು‌ ಬಸ್ ಮೂಲಕ ತೆರಳಿ ಕೆ.ಆರ್.ಪುರಕ್ಕೆ ಜನ ಹೋಗ್ತಿದ್ದಾರೆ.

ಬರೊಬ್ಬರಿ 6 ತಿಂಗಳ‌ ಆದರೂ ಕೇವಲ 2 ಕಿಲೋ ಮೀಟರ್‌ ಉದ್ದದ ಕೆ.ಆರ್. ಪುರ- ಬೈಯಪ್ಪನಹಳ್ಳಿ ಸಂಚಾರ ಮಾತ್ರ ಇನ್ನೂ ಆರಂಭಿಸಿಲ್ಲ. ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗಕ್ಕೆ ಲಿಂಕ್‌ ಇಲ್ಲದೇ ಇರುವ ಕಾರಣ ಕೆಂಗೇರಿಯಿಂದ  ವೈಟ್‌ಫೀಲ್ಡ್‌ವರೆಗೆ ಸಂಚಾರಕ್ಕೆ ನಿತ್ಯ ಜನ ಪರದಾಡುತ್ತಿದ್ದಾರೆ. ಹೀಗಾಗಿ ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಕಷ್ಟ ಪಡುತ್ತಿದ್ದ ಉದ್ಯೋಗಿಗಳಿಗೆ ಪದೇ ಪದೇ ಬ್ಯಾಡ್‌ ನ್ಯೂಸ್ ಇತ್ತು

ವೈಟ್‌ ಫೀಲ್ಡ್‌ ಕಡೆಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಜನ ಬಸ್‌ನಲ್ಲಿ ಸಾಗುತ್ತಿದ್ದಾರೆ. ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಪ್ರಯಾಣಿಸಬೇಕು. ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆ. ನಿತ್ಯ ಇಡೀ ರಸ್ತೆ ಜಾಮ್ ಆಗಿ ನೊಂದಿರುವ ಐಟಿ‌ ಉದ್ಯೋಗಿಗಳು ಈಗ ಅಭಿಯಾನ ಆರಂಭಿಸಿದ್ದಾರೆ. ಆಗಸ್ಟ್ ಮೂರನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ ಬಿಎಂಆರ್ಸಿಎಲ್ ಹೇಳಿತ್ತು. ಆದರೆ ಆರಂಭ ಮಾತ್ರ ಆಗಲೇ ಇಲ್ಲ.

click me!