ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: 2ನೇ ಹಂತದ ತನಿಖೆ ಆರಂಭ

By Kannadaprabha News  |  First Published May 26, 2022, 11:27 AM IST

*  ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಇನ್ನಷ್ಟು ಅಧಿಕಾರಿ, ಮಧ್ಯವರ್ತಿ, ಅಭ್ಯರ್ಥಿಗಳ ಬಂಧನ ಸಂಭವ?
*  ಕಿಂಗ್‌ಪಿಎನ್‌ ರುದ್ರಗೌಡನನ್ನ ಮತ್ತೆ ವಶಕ್ಕೆ ಪಡೆದ ಸಿಐಡಿ ತಂಡ
*  ಬಾಡಿ ವಾರಂಟಲ್ಲಿ ಬೆಂಗಳೂರಲ್ಲಿದ್ದ ಪಾಟೀಲ್‌ ಕಲಬುರಗಿಗೆ ಮರಳುತ್ತಿದ್ದಂತೆಯೇ 7 ದಿನ ಸಿಐಡಿ ವಶಕ್ಕೆ
 


ಕಲಬುರಗಿ(ಮೇ.26):  ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕುರಿತಂತೆ ಕಲಬುರಗಿಯಲ್ಲಿ ಸಿಐಡಿ ತನಿಖೆಯ 2ನೇ ಇನ್ನಿಂಗ್ಸ್‌ ಶುರುವಾಗಿದೆ. ಪಿಎಸ್‌ಐ ಪರೀಕ್ಷೆ ಅಕ್ರಮದ ಮೂಲವಾಗಿದ್ದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿನಗಳ ತನಿಖೆ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ವಾರಕಾಲ ದಾಖಲೆಗಳನ್ನು ಸಿದ್ಧಪಡಿಸಲು ತನ್ನ ವಿಚಾರಣೆಗೆ ತುಸು ವಿರಾಮ ನೀಡಿದಂತಿದ್ದ ಸಿಐಡಿ ಅಧಿಕಾರಿಗಳ ತಂಡ ಇದೀಗ ಕಿಂಗ್‌ಪಿನ್‌ ಆರ್‌ಡಿ ಪಾಟೀಲನನ್ನ ಮತ್ತೆ ವಶಕ್ಕೆ ಪಡೆಯುವ ಮೂಲಕ ವಿಚಾರಣೆ ಚುರುಕುಗೊಳಿಸಿದ್ದಾರೆ.

ಇಲ್ಲಿನ ಹೈಕಶಿ ಸಂಸ್ಥೆ ಒಡೆತನದ ಎಂಎಸ್‌ಐ ಕಾಲೇಜಿನ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಹೈಟೆಕ್‌ ಬ್ಲೂಟೂತ್‌ ಬಳಸಿ ನಡೆದಂತಹ ಪರೀಕ್ಷಾ ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ತಂಡ ಆರ್‌ಡಿ ಪಾಟೀಲನನ್ನ ಮತ್ತೆ ವಶಕ್ಕೆ ಪಡೆಯುವ ಮೂಲಕ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.

Tap to resize

Latest Videos

PSI Recruitment Scam: ಅಭ್ಯರ್ಥಿಗಳಿಂದಲೂ ಒಎಂಆರ್‌ ತಿದ್ದಿಸಿದ್ದ ದಿವ್ಯಾ ಹಾಗರಗಿ..!

ಕಲಬುರಗಿಗೆ ಬರುತ್ತಿದ್ದಂತೆಯೇ ಸಿಐಡಿ ವಶಕ್ಕೆ:

ಈತನನ್ನು ಮೊದಲ ಹಂತದಲ್ಲಿ 15 ದಿನಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದ ಸಿಐಡಿ ಕಸ್ಟಡಿ ಅವಧಿಯ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಲ್ಲಿಂದ ಬೆಂಗಳೂರಿನ ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು ಬಾಡಿ ವಾರಂಟ್‌ ಮೇಲೆ ಆರ್‌ಡಿ ಪಾಟೀಲನನ್ನು ತಮ್ಮ ವಶಕ್ಕೆ ಪಡೆದು ಕಳೆದ ಡಿಸೆಂಬರ್‌ 2021 ರಲ್ಲಿ ನಡೆದ ಪಿಡಬ್ಲೂಡಿ ಪರೀಕ್ಷೆ ಅಕ್ರಮದಲ್ಲಿ ಈತನ ಪಾತ್ರದ ಕುರಿತಂತೆ ತನಿಖೆಗೆ ಕರೆದೊಯ್ದಿದ್ದರು.

ಬೆಂಗಳೂರಲ್ಲಿ 10 ದಿನಗಳ ತೀವ್ರ ವಿಚಾರಣೆಯ ನಂತರ ಸೋಮವಾರವಷ್ಟೇ ಕಲಬುರಗಿಗೆ ಮರಳಿದ್ದ ಆರ್‌ ಡಿ ಪಾಟೀಲ್‌ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಾಯಾಂಗ ಬಂಧನದಲ್ಲಿ ಮುಂದುವರಿದ ಮಾರನೆ ದಿನವೇ ಸಿಐಡಿ ಮತ್ತೆ ವಶಕ್ಕೆ ಪಡೆದಿದೆ. ಜ್ಞಾನಗಂಗಾ ಶಾಲೆಯ ಪರೀಕ್ಷಾ ಕೇಂದ್ರದ ಅಕ್ರಮಗಳ ವಿಚಾರಣೆ ಒಂದು ಹಂತಕ್ಕೆ ಬಂದಿದ್ದು, ಇದೀಗ ನಗರದÜ ಎಂಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಏನೆಲ್ಲಾ ನಡೆದಿದೆ ಎಂಬುದರ ತನಿಖೆಗೆ ಸಿಐಡಿ ತಂಡ ಸಂಕಲ್ಪ ಮಾಡಿರೊದರಿಂದ ಮತ್ತೊಂದು ಸುತ್ತು ಈತನ ಹಿಂದೆ ಬಿದ್ದಿದೆ.

ಇದೇ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ಆರ್‌ ಡಿ ಪಾಟೀಲನ ವಿಚಾರಣೆಗೆ ಮುಂದಾಗಿ ಸಲ್ಲಿಸಿದ್ದ ಕೋರಿಕೆ ಅಜಿಯನ್ನು ಮನ್ನಿಸಿರುವ ನ್ಯಾಯಾಲಯ ಆರ್‌ಡಿ ಪಾಟೀಲನನ್ನು ಮತ್ತೆ 7 ದಿನಕಾಲ (ಮೇ. 30) ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಎಂಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದ ಅಕ್ರಮಗಳ ತನಿಖೆ:

ಎಂಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಹಗರಣ ನಡೆದಿರೋದರ ಕುರಿತಂತೆ ಕಲಬುರಗಿ ನಗರದ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ್ತಸಿಐಡಿ ತಂಡ ಅಭ್ಯರ್ಥಿ ಪರಭು, ಈತನ ತಂದೆ ಶರಣಪ್ಪ, ಮಧ್ಯವರ್ತಿ, ಆಡಿಟರ್‌ ಚಂದ್ರಕಾಂತ ಕುಲಕರ್ಣಿ ಹಾಗೂ ಆರ್‌ಡಿ ಪಾಟೀಲ್‌ ವಿರುದ್ಧ ಪ್ರಕರಣ ದಾಖಲಿಸಿತ್ತು. ಆರ್‌ ಡಿ ಪಾಟೀಲ್‌ ಹೊರತು ಪಡಿಸಿ ಉಳಿದವರೆæಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿರೋದನ್ನ ಇಲ್ಲಿ ಸ್ಮರಿಸಬಹುದಾಗಿದೆ.

PSI Recruitment Scam ಪೇದೆ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ 1.5 ಕೋಟಿ ಜಪ್ತಿ!

ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೂ ಮುನ್ನಾ ದಿನವೇ ಅಭ್ಯರ್ಥಿ ಪ್ರಭು ಬ್ಲೂಟೂತ್‌ ಹೂವಿನ ಕುಂಡದಲ್ಲಿಟ್ಟು ಬಂದು ಮಾರನೇ ದಿನ ಅದರ ನೆರವಿಂದ ಪರೀಕ್ಷೆ ಬರೆದು ಪಾಸಾಗಿದ್ದ. ಈ ಅಕ್ರಮದಲ್ಲಿ ಈತ ಆರ್‌ಡಿ ಪಾಟೀಲ್‌ಗೆ 40 ಲಕ್ಷ ರುಪಾಯಿ ಸಂದಾಯ ಮಾಡಿದ್ದನೆಂಬುದು ವಿಚಾರಣೆಯಲ್ಲಿ ಅಭ್ಯರ್ಥಿ, ಆತನ ತಂದೆ ಶರಣಪ್ಪ, ಮಧ್ಯವರ್ತಿ ಚಂದ್ರಕಾಂತ ಕುಲಕರ್ಣಿ ಒಪ್ಪಿಕೊಂಡಿರೋದನ್ನ ಸ್ಮರಿಸಬಹುದಾಗಿದೆ. ಈ ಪರೀಕ್ಷಾ ಕೇಂದ್ರದ ವಿಚಾರಣೆ ಈಗ ಶುರುವಾಗಿರೋದರಿಂದ ಇನ್ನೇನೇನು ವಿಚಾರಗಳು ಇಲ್ಲಿಂದ ಹೊರಬರುತ್ತವೆಯೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್‌, ಶಂಕರಗೌಡ ಪಾಟೀಲ್‌ ನೇತೃತ್ವದಲ್ಲಿ 2 ನೇ ಇನ್ನಿಂಗ್‌್ಸ ಎಂದು ಹೇಳಲಾಗಿವು ಪಿಎಸ್‌ಐ ಹಗರಣದ ಹೊಸ ಪರೀಕ್ಷಾ ಕೇಂದ್ರ ಸುತ್ತಮುತ್ತ ತನಿಖೆ ಚುರುಕುಗೊಂಡಿದೆ. ಬ್ಲೂಟೂತ್‌ ಕಿಂಗ್ಪಿನ್‌ ಆರ್‌ ಡಿ ಪಾಟೀಲ್ನನ್ನು ಮೇ 30ರವರೆಗೆ ಕಸ್ಟಡಿಗೆ ಪಡೆದು ಕಲಬುರಗಿ ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಪರೀಕ್ಷೆ ಅಕ್ರಮದಲ್ಲಿ ಇನ್ನಷ್ಟು ಅಧಿಕಾರಿಗಳು, ಮಧ್ಯವರ್ತಿಗಳು, ಅಭ್ಯರ್ಥಿಗಳ ಬಂಧನದ ಸಂಭವಗಳಿವೆ ಎಂದು ಹೇಳಲಾಗುತ್ತಿದೆ.
 

click me!