ಜೆರೋಸಾ ಶಾಲೆ ಪ್ರಕರಣ: ಶ್ರೀರಾಮನ ನಿಂದನೆ ವಿರುದ್ಧ ಪ್ರತಿಭಟಿಸಿದ್ದ ಶಿಕ್ಷಕಿ ಕೆಲಸದಿಂದ ತೆಗೆದು ಹಾಕಿದ ಸಂಸ್ಥೆ!

By Kannadaprabha NewsFirst Published Feb 21, 2024, 6:17 AM IST
Highlights

ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸೇಂಟ್ ಜೆರೋಸಾ ಶಾಲೆಯ ವಿದ್ಯಾರ್ಥಿಯೊಬ್ಬರ ತಾಯಿ, ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ವಾರ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೋಷಕರಾದ ಕವಿತಾ ಪ್ರತಿಭಟನೆ ನಡೆಸಿದ್ದರು.

ಮಂಗಳೂರು (ಫೆ.21): ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸೇಂಟ್ ಜೆರೋಸಾ ಶಾಲೆಯ ವಿದ್ಯಾರ್ಥಿಯೊಬ್ಬರ ತಾಯಿ, ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ವಾರ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೋಷಕರಾದ ಕವಿತಾ ಪ್ರತಿಭಟನೆ ನಡೆಸಿದ್ದರು.

ಕವಿತಾ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿ ತನ್ನ ಸೇವೆ ಅಗತ್ಯವಿಲ್ಲ ಎಂದು ಹೇಳಿ ಫೆಬ್ರವರಿ 17 ರಂದು ಕೆಲಸದಿಂದ ತೆಗೆದುಹಾಕಿದೆ ಎಂದು ಕವಿತಾ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಶ್ರೀರಾಮನ ನಿಂದನೆ ವಿರುದ್ಧ ದ್ವನಿಯೆತ್ತಿದ್ದೇ ತಪ್ಪಾಯ್ತಾ? ದುಬೈ, ಕತಾರ್, ಸೌದಿಯಿಂದ ಪೋಷಕಿಗೆ ನಿರಂತರ ಬೆದರಿಕೆ ಕರೆ!

ಫೆಬ್ರವರಿ 10 ರಂದು, ಕವಿತಾ ಮತ್ತು ಸೇಂಟ್ ಜೆರೋಸಾ ಶಾಲೆಯ ವಿದ್ಯಾರ್ಥಿಗಳು, ಪೋಷಕರೊಂದಿಗೆ ವಿಎಚ್‌ಪಿ ಮತ್ತು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಡಿಡಿಪಿಐಗೆ ದೂರು ನೀಡಿದ್ದರು. ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಪ್ರಭಾ ಅವರು ಭಗವಾನ್ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಪ್ರಭಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಆದರೆ, ಕವಿತಾ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೂ ಜೆರೋಸಾ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಸ್ಕೂಲ್ ಕರೆಸ್ಪಾಂಡೆಂಟ್ ಫಾದರ್ ಸಿಪ್ರಿಯನ್ ಪಿಂಟೋ ಅವರು ಹೇಳಿದ್ದಾರೆ.

ಕವಿತಾ ಅವರನ್ನು ತಾತ್ಕಾಲಿಕವಾಗಿ ಖಾಲಿಯಾದ ಹುದ್ದೆಗೆ ನೇಮಕಗೊಂಡಿದ್ದರು ಮತ್ತು ಅವರ ನೇಮಕಾತಿಯ ಸಮಯದಲ್ಲಿ ಇದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ ಎಂದು ಅವರು TNIE ಗೆ ತಿಳಿಸಿದ್ದಾರೆ.

ಈ ಮಧ್ಯೆ, ಕವಿತಾ ಅವರು ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದು, ಜೆರೋಸಾ ಶಾಲೆಯ ವಿರುದ್ಧ ಮಾತನಾಡಿದ ಬಳಿಕ ವಿದೇಶದಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. "ಕೆಲವರು ನನ್ನ ವಿರುದ್ಧ ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ನನ್ನನ್ನು ನಿಂದಿಸುತ್ತಿದ್ದಾರೆ. ಆದ್ದರಿಂದ ನಾನು ಸೋಮವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಜೆರೋಸಾ ಶಾಲೆಯ ಶಿಕ್ಷಕಿ ಪ್ರಭಾ ಅವರು ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದ ಅನಾಮಧೇಯ ಮಹಿಳೆಯ ಆಡಿಯೋ ವೈರಲ್ ಆಗಿದೆ. ಇದೀಗ ಆಡಿಯೋದಲ್ಲಿರುವ ಮಹಿಳೆಯ ಧ್ವನಿ ಕವಿತಾ ಎಂದು ಆರೋಪಿಸಲಾಗಿದೆ ಮತ್ತು ಅವರ ಫೋನ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಶಾಲಾ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಪ್ರಕರಣ: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ!

ಏತನ್ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್ ತನಿಖೆಯ ಭಾಗವಾಗಿ ವಿಎಚ್‌ಪಿ ಮುಖಂಡರು, ಪೋಷಕರು ಮತ್ತು ಜೆರೋಸಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದಾರೆ.

click me!