ರಾಷ್ಟ್ರಪತಿ ಹಾಗೂ ಸಿಎಂ ಪದಕ ಪಡೆದಿದ್ದ ಐಪಿಎಸ್ ಅಧಿಕಾರಿ ಪ್ರತಾಪ್‌ರೆಡ್ಡಿ ಸ್ವಯಂ ನಿವೃತ್ತಿ

By Sathish Kumar KHFirst Published Feb 20, 2024, 8:58 PM IST
Highlights

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಪದಕ ಪಡೆದಿದ್ದ ಕೂಲ್ ಐಪಿಎಸ್ ಆಫೀಸರ್ ಪ್ರತಾಪ್‌ ರೆಡ್ಡಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಬೆಂಗಳೂರು (ಫೆ.20): ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಾ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಂದ ಪೊಲೀಸ್ ಪದಕವನ್ನು ಪಡೆದಿದ್ದ ಕೂಲ್ ಐಪಿಎಸ್‌ ಆಫೀಸರ್ ಎಂದು ಖ್ಯಾತಿಯಾಗಿದ್ದ ಪ್ರತಾಪ್‌ ರೆಡ್ಡಿ ಅವರು ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯೇ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದು ತಮ್ನನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಹಾಲಿ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ (DGP) ಕಾರ್ಯ ನಿರ್ವಹಿಸುತ್ತಿದ್ದ ಪ್ರತಾಪ್​ ರೆಡ್ಡಿಯವರ ನಿವೃತ್ತಿಗೆ ಇನ್ನು ಕೇವಲ 2 ತಿಂಗಳು ಸೇವೆ ಮಾತ್ರ ಬಾಕಿಯಿತ್ತು. ಆದರೆ, ಸರ್ಕಾರದ ನಿವೃತ್ತಿಗೂ ಮುನ್ನವೇ ಅವರು, ತಮ್ಮ ವೈಯಕ್ತಿಕ ಕಾರಣವನ್ನು ನೀಡಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು; ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆಲುವು

ರಾಜ್ಯದ ಹಿರಿಯ ಐಪಿಎಸ್​ ಅಧಿಕಾರಿಯಾಗಿರುವ ಹೆಚ್​ ಪ್ರತಾಪ್​ ರೆಡ್ಡಿ  ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ. ಬಿ.ಟೆಕ್​ ಪದವೀಧರರಾಗಿದ್ದರೂ, ಐಪಿಎಸ್‌ ಪಾಸಾಗಿ 1991ರಲ್ಲಿ ಕರ್ನಾಟಕ ಕೆಡರ್​ ಅಧಿಕಾರಿಯಾಗಿ ಹಾಸನ ಜಿಲ್ಲೆಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವೃತ್ತಿ ಆರಂಭಿಸಿದರು. ನಂತರ, ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಡ್ರೈವರ್ ರಹಿತ ರೈಲು: ಹೆಬ್ಬಗೋಡಿಯಲ್ಲಿ ಅನ್‌ಲೋಡಿಂಗ್!

ಪ್ರತಾಪ್‌ ರೆಡ್ಡಿ ಅವರು ಬ್ಯಾಂಕಿಂಗ್​ ಮತ್ತು ಸೈಬರ್​ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಮೂಲಕ ರಾಷ್ಟ್ರ ಮಟ್ಟದಲ್ಲಿ ಖ್ಯಾತವಾಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್​ ರೆಡ್ಡಿ ಅವರನ್ನು ಕಮಲ್​ ಪಂತ ಅವರ ಬಳಿಕ 37ನೇ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂ ನಿವೃತ್ತಿಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಅಂಗೀಕರಿಸಿದ ಸರ್ಕಾರ 2023ರ ಏ.30 ರಂದು ಸೇವೆಯಿಂದ ನಿವೃತ್ತಿ ಆಗುವಂತೆ ಸರ್ಕಾರ ಆದೇಶ ಹೊರಡಿಸಿದೆ.

click me!