ಬೆಳಗ್ಗೆ ನಮಾಜ್‌ಗೆ ಅನುಕೂಲವಾಗುವಂತೆ SSLC ವೇಳಾಪಟ್ಟಿ ಬದಲಿಸಿದ ಶಿಕ್ಷಣ ಇಲಾಖೆ: ಮುಸ್ಲಿಂ ತುಷ್ಟೀಕರಣ ಬಗ್ಗೆ ಗಂಭೀರ ಆರೋಪ!

By Ravi JanekalFirst Published Feb 4, 2024, 10:04 PM IST
Highlights

SSLC ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮುಸ್ಲಿಂ ತುಷ್ಟೀಕರಣದ ಆರೋಪ ಕೇಳಿಬಂದಿದೆ. ರಾಜ್ಯಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆಯು ಮುಸ್ಲಿಮರಿಗೆ ಬೆಳಗ್ಗೆ ನಮಾಜ್‌  ಮಾಡಲು ಅನುಕೂಲವಾಗುವಂತೆ ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿಯಲ್ಲಿ ತಯಾರಿಸಿದ್ದಾರೆಂದು ಹಿಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಫೆ.4): SSLC ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮುಸ್ಲಿಂ ತುಷ್ಟೀಕರಣದ ಆರೋಪ ಕೇಳಿಬಂದಿದೆ. ರಾಜ್ಯಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆಯು ಮುಸ್ಲಿಮರಿಗೆ ಬೆಳಗ್ಗೆ ನಮಾಜ್‌  ಮಾಡಲು ಅನುಕೂಲವಾಗುವಂತೆ ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿಯಲ್ಲಿ ತಯಾರಿಸಿದ್ದಾರೆಂದು ಹಿಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ ಸಂಬಂಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.

ಫೆಬ್ರವರಿ 26ರಿಂದ ಮಾರ್ಚ್ 3ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಅದರಲ್ಲಿ ಎಲ್ಲಾ ವಿಷಯದ ಪರೀಕ್ಷೆ ಬೆಳಗ್ಗೆ 10.15ಕ್ಕೆ ನಡೆದರೆ ಶುಕ್ರವಾರ ನಡೆಯಲಿರುವ ವಿಜ್ಞಾನ ಪರೀಕ್ಷೆ ಮಾತ್ರ ಮಧ್ಯಾಹ್ನ 2 ಗಂಟೆಗೆ ನಿಗದಿಮಾಡಿದೆ. ಉಳಿದ ಎಲ್ಲ ಪರೀಕ್ಷೆಗಳು ಬೆಳಗ್ಗೆ ಇದ್ದರೆ ಶುಕ್ರವಾರದ ಪರೀಕ್ಷೆ ಮಧ್ಯಾಹ್ನವಿದೆ. ಈ ಬದಲಾವಣೆಯೇ ಇದೀಗ ವಿವಾದಕ್ಕೆ ಕಾರಣವಾಗಿದೆ.. ಬೆಳಗ್ಗ ನಮಾಜ್‌ಗೆ ಅನುಕೂಲ ಮಾಡಿಕೊಡಲು ಉದ್ದೇಶದಿಂದಲೇ ರಾಜ್ಯಸರ್ಕಾರದ ನಿರ್ದೇಶನದಂತೆ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ ಎಂದು ಹಿಂದೂ ಮುಖಂಡರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಿಂದ ಬರೀ ವಿವಾದ ಮಾಡಿದ್ದೆ ಆಯ್ತು: ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಕಿಡಿ

ಪರೀಕ್ಷೆ ಮಂಡಳಿ ಹೇಳೋದೇನು?

ಮಾರ್ಚ್ 1ರಂದು ಪಿಯುಸಿ ಮುಖ್ಯ ಪರೀಕ್ಷೆ ನಡೆಯಲಿದ್ದು, ಅದೇ ದಿನ 01-03-2024 ರ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ ಇದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 1ರಂದು ಎಸ್ಎಸ್ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗಿದೆ. ಯಾವುದೇ ನಮಾಜ್‌ಗೆ ಅನುಕೂಲ ಹಾಗೂ ಧರ್ಮದ ತುಷ್ಠೀಕರಣ ಇಲ್ಲ ಎಂದು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವಿವಾದಕ್ಕೆ ತಿರುಗಿರುವ ಹಿನ್ನೆಲೆ ಈ ಬಗ್ಗೆ ನಾಳೆ ಇಲಾಖೆಯಿಂದ ಅಧಿಕೃತ ಸ್ಪಷ್ಟಿಕರಣ ನೀಡುವ ಸಾಧ್ಯತೆಯಿದೆ.

100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಮನವಿ!

click me!