ಮ್ಮಪ್ಪನಿಗೆ 6 ಜನ ಮಕ್ಕಳಿದ್ದರೂ ನಾನೊಬ್ಬನೇ ಓದಿದೆ. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸು, ಪಿಯುಸಿ ಸೆಕೆಂಡ್ ಕ್ಲಾಸು. ಆದ್ದರಿಂದಲೇ ನನಗೆ ಮೆಡಿಕಲ್ ಸೀಟು ಸಿಗಲಿಲ್ಲ.
ಮೈಸೂರು (ಅ.16): ನಮ್ಮಪ್ಪನಿಗೆ 6 ಜನ ಮಕ್ಕಳಿದ್ದರೂ ನಾನೊಬ್ಬನೇ ಓದಿದೆ. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸು, ಪಿಯುಸಿ ಸೆಕೆಂಡ್ ಕ್ಲಾಸು. ಆದ್ದರಿಂದಲೇ ನನಗೆ ಮೆಡಿಕಲ್ ಸೀಟು ಸಿಗದೇ ಬಿಎಸ್‌ಸಿ ಮಾಡಬೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಯುವರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸ್ ಪಾಸ್ ಮಾಡಿದೆ. ಇದರಿಂದ ನಮ್ಮಪ್ಪನಿಗೆ ನನ್ನನ್ನು ಡಾಕ್ಟರ್ ಮಾಡಬೇಕು ಅಂತ ಆಸೆ ಇತ್ತು. ನಾನು ಯುವರಾಜ ಕಾಲೇಜಿನಲ್ಲಿ ಪಿಯುಸಿ ಓದಿದೆ. ಆದರೆ, ಪಿಯುಸಿ ಸೆಕೆಂಡ್ ಕ್ಲಾಸು ಪಾಸಾಯ್ತು. ಸೆಕೆಂಡ್ ಕ್ಲಾಸ್ ಪಾಸ್ ಆಗಿದ್ದರಿಂದ ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ನಮ್ಮೂರಿನ ಹೊಂಬಯ್ಯನ ಮಗ ನಾರಾಯಣಗೌಡ ಅನ್ನುವವನಿಗೆ ಮೆಡಿಕಲ್ ಸೀಟ್ ಸಿಕ್ಕಿಬಿಟ್ಟಿತ್ತು. ಹೀಗಾಗಿ, ಇದೇ ಯುವರಾಜ ಕಾಲೇಜಿನಲ್ಲಿ ಸಸ್ಯಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಪದವಿ ಮಾಡಿದೆ ಎಂದು ತಿಳಿಸಿದರು.
undefined
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್, ವಿದ್ಯುತ್ ಸಮಸ್ಯೆ ಅಧಿಕೃತವಾಗಿ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ!
ಇನ್ನು ಪದವಿ ಮುಗಿದ ನಂತರ ಬಾಟನಿ ಮಾಸ್ಟರ್ ಡಿಗ್ರಿ ಮಾಡಬೇಕು ಅಂದುಕೊಂಡಿದ್ದೆನು. ಆದರೆ ನನಗೆ ಬಾಟನಿ ಸೀಟ್ ಸಿಕ್ಕಿರಲಿಲ್ಲ. ಬೆಂಗಳೂರಿಗೆ ಹೋಗಿ ಎಚ್‌ಒಡಿ ಭೇಟಿ ಮಾಡಿ ಸೀಟ್ ಕೊಡಿ ಅಂತ ಗೋಗರೆದಿದ್ದೆ. ಆದಾಯ ಪ್ರಮಾಣ ಪತ್ರದಲ್ಲಿ 1,200 ರೂ. ಒಳಗಿನ ಆದಾಯ ಪ್ರಮಾಣ ಪತ್ರ ತೆಗೆದುಕೊಂಡು ಬಾ ಅಂತ ಹೇಳಿದ್ದರು. ಆದ್ರೆ ಒಬ್ಬ 4500 ರೂ. ಅಂತ ಬರೆದುಕೊಟ್ಟನು. ಇನ್ನೆಲ್ಲಿ ಸೀಟ್ ಸಿಗುತ್ತದೆ. ನಾನು 5 ವರ್ಷ ಯುವರಾಜ ಕಾಲೇಜಿನ ವಿದ್ಯಾರ್ಥಿ ಆಗಿದ್ದೆನು. ನಂಜುಂಡಯ್ಯ ನನ್ನ ಕ್ಲಾಸ್‌ಮೆಟ್ ಆಗಿದ್ದನು. ನನ್ನ ಸಹಪಾಠಿಗಳು ಅನೇಕರು ಇಲ್ಲಿಗೆ ಬಂದಿದ್ದೀರಿ ಎಂದರು.
ಇನ್ನು ವಿಜ್ಞಾನ ಓದಿ ವೈಜ್ಞಾನಿಕವಾಗಿ ಯೋಚನೆ ಮಾಡದಿರುವುದೇ ದುರಂತವಾಗಿದೆ ಎಂದ ಸಿಎಂ ಸಿದ್ದರಾಮಯ್ಯ ಮಾತಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್‌ರಾಜು ಅದೆಲ್ಲವೂ ಹಣೆಬರಹ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ದೇವರು ಬಂದು ಹಣೆ ಬರಹ ಬರೆದಿದ್ದಾನಾ? ಯಾರು ಬಂದ ಅವಕಾಶಗಳನ್ನು ಬಳಸಿಕೊಳ್ಳುತ್ತಾರೋ ಅವರು ಮುಂದೆ ಬರುತ್ತಾರೆ. ನಮ್ಮ ಅಪ್ಪನಿಗೆ 6 ಜನ ಮಕ್ಕಳು. ನಾನು ಒಬ್ಬನೇ ಓದಿದವನು. ನನ್ನೊಬ್ಬನಿಗೆ ಓದು, ಉಳಿದವರನ್ನು ಉಳುಮೆ ಮಾಡು ಅಂತ ಬರೆದಿದ್ದಾನಾ? ಎಲ್ಲಿ ತೋರಿಸಪ್ಪ..? ಹಣೆಬರಹ ಎನ್ನುವುದನ್ನು ಯಾರೋ ಹೇಳಿಕೊಟ್ಟಿರೊದು. ಅದನ್ನ ನಾವು ಸುಮ್ಮನೆ ಬ್ಲೈಂಡ್ ಆಗಿ ಫಾಲೋ ಮಾಡುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.
Breaking : ಕೆಎಸ್‌ಆರ್‌ಟಿಸಿ ಬಸ್ ಟಾಟಾ ಸುಮೋ ಡಿಕ್ಕಿ, ಐವರ ದುರ್ಮರಣ: ಮಠಕ್ಕೆ ಹೊರಟವರು ಮಸಣ ಸೇರಿದರು!
ನಾನು ಬಿಎಸ್ಸಿ ಆದ ನಂತರ ಒಂದು ವರ್ಷ ನಾನು ಮನೆಯಲ್ಲಿದ್ದೆನು. ಎಂಎಸ್ಸಿ ಸಿಗಲಿಲ್ಲ ಅಂತ ಓದಿನ ಸಹವಾಸವೇ ಬೇಡ ಅಂತ ವ್ಯವಸಾಯ ಮಾಡಲು ಹೋಗಿದ್ದನು. ಅಲ್ಲಿ ನಾನು ಸ್ವತಃ ವ್ಯವಸಾಯ ಮಾಡುತ್ತಿದ್ದೆನು. ಕಡೆಗೆ ಪಕ್ಕದ ಜಮೀನಿನವರ ಜೊತೆ ಹೊಡೆದಾಡಿಕೊಂಡು ವ್ಯವಸಾಯದ ಸಹವಾಸ ಬಿಟ್ಟು ಬಂದೆ. ಕೊನೆಗೆ ಕಾನೂನು ಪದವಿ ಮಾಡಲು ತೀರ್ನಾಮ ಮಾಡಿದೆ. ಅದಕ್ಕೆ ನಮ್ಮಪ್ಪ ಒಪ್ಪದಿದ್ದಾಗ ನನ್ನ ಪಾಲು ಕೊಟ್ಟುಬಿಡು ಅಂತ ಕೇಳಿದ್ದೆನು. ಶಾರದಾ ವಿಲಾಸ್ ಕಾಲೇಜಿನಲ್ಲಿ ಓದುವಾಗ ಫ್ರೊ.ನಂಜುಂಡಸ್ವಾಮಿ ಪರಿಚಯ ಆಯ್ತು. ಅವರ ಮೂಲಕ ರಾಜಕೀಯ ಚರ್ಚೆಗಳು ಶುರುವಾದವು. ಅವರು ಸಿಗದಿದ್ದರೆ ನಾನು ರಾಜಕೀಯಕ್ಕೂ ಬರುತ್ತಿರಲಿಲ್ಲ, ಸಿಎಂ ಕೂಡ ಆಗುತ್ತಿರಲಿಲ್ಲ. ಈಗೆ ನಾವುಗಳು ಬದುಕಲ್ಲಿ ಬಂದ ಅವಕಾಶ ಬಳಸಿಕೊಳ್ಳಬೇಕು ಎಂದು ಹೇಳಿದರು.