ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್: ಪೊಲೀಸ್ ಮೊರೆ ಹೋದ ಹೆಲ್ತ್ ಮಿನಿಸ್ಟರ್

By Suvarna NewsFirst Published Mar 12, 2020, 3:52 PM IST
Highlights

ಕೊರೋನಾ ಮಹಾಮಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿಗಳು ಸುಳಿದಾಡುತ್ತಿವೆ. ಇನ್ನುಇದೇ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್‌ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ರಾಜ್ಯ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. ಏನಿದು ಪ್ರಕರಣ..?

ಬೆಂಗಳೂರು, (ಮಾ.12): ಕೊರೊನಾ ವೈರಸ್‌ ವಿಚಾರದಲ್ಲಿ ಶ್ರೀರಾಮುಲು ಟ್ವಿಟ್ಟರ್ ಅಕೌಂಟ್‌ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಟ್ವೀಟ್‌ ಕೆಲ ದಿನಗಳಿಂದ ಹರಿದಾಡುತ್ತಿದೆ.
 
ಕಿಡಿಗೇಡಿಗಳು ಮಾಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಅವಾಂತರ ಸೃಷ್ಟಿಸಿತ್ತು. ಇದರಿಂದ ಎಚ್ಚೆತ್ತ ಶ್ರೀರಾಮುಲು ಈ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದಾರೆ. 

ಕಲಬುರಗಿಯ ವೃದ್ಧನ ಸಾವಿಗೆ ಕರೋನಾ ಕಾರಣ ಅಲ್ಲ, ಮತ್ತಿನ್ಯಾರು?

ಗಂಜಲ ಕುಡಿಯುವುದರಿಂದ ಹಾಗೂ ಸಗಣಿಯನ್ನು ಮೈಗೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್‌ ಹರಡುವುದಿಲ್ಲ ಎಂದು ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್‌ ಮಾಡಲಾಗಿತ್ತು.

ಈ ಹಿನ್ನೆಯಲ್ಲಿ ಶ್ರೀರಾಮುಲು ಹೆಸರಲ್ಲಿ ನಕಲಿ ಟ್ವೀಟ್‌ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ರಾಜ್ಯ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. 

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿ ತಿಳಿಸಿರುವ ರಾಮುಲು, ಕೊರೊನಾ ವೈರಸ್‌ ತರಹದ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ಗೆ ಮನವಿ ಮಾಡಲಾಗಿದೆ. 

ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೆ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ತರಹದ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ (ಸುಳ್ಳು ಸುದ್ದಿ) ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅವರಿಗೆ ಮನವಿ ಮಾಡಲಾಗಿದೆ. ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೆ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಬೇಡಿ pic.twitter.com/5gnBpqFgfx

— B Sriramulu (@sriramulubjp)
click me!