
ಹುಬ್ಬಳ್ಳಿ (ಆ.29): ಗೋಭಕ್ಷಕ ಸಮಾಜದಿಂದ ಬಂದಿರುವ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲು ಹೊರಟಿರುವುದು ಖಂಡನೀಯ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಜತೆಗೆ ಗೋವುಗಳನ್ನು ತಿನ್ನುವುದಿಲ್ಲ, ಮೂರ್ತಿ ಪೂಜೆ ಒಪ್ಪುತ್ತೇನೆ ಎಂದು ಸ್ಪಷ್ಟಪಡಿಸಿ ಉದ್ಘಾಟನೆ ಮಾಡಲಿ ನಾವೂ ಒಪ್ಪಿಕೊಳ್ಳುತ್ತೇವೆ ಎಂದರು. ಅಲ್ಲದೇ, ಚಾಮುಂಡಿ ಬೆಟ್ಟ ಯಾವಾಗಿದ್ದರೂ ಹಿಂದೂಗಳದ್ದೇ. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಾನು ಮುಷ್ತಾಕ್ ಅವರು ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ನಾಡದೇವತೆ, ನಾಡಹಬ್ಬದ ಚಾಲನೆಗೆ ಕರೆಯುತ್ತಿರುವುದು ಸರಿಯಲ್ಲ. ಹಿಂದೂಗಳ ಹಬ್ಬ. ಆದರೆ, ಬಾನು ಮುಷ್ತಾಕ್ ಅವರು ಪ್ರತಿನಿಧಿಸುವ ಸಮಾಜ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟಿಲ್ಲ. ಗೋವುಗಳನ್ನು ತಿನ್ನುತ್ತಾರೆ. ನಮ್ಮಲ್ಲಿ ಚಾಮುಂಡಿ ದೇವಿಗೆ ಅರಿಷಿಣ, ಕುಂಕುಮ ಹಚ್ಚಿ ಪೂಜೆ ಮಾಡುತ್ತೇವೆ. ಅದಾವುದನ್ನು ಅವರು ಮಾಡಲ್ಲ. ಅವರು ಗೋವುಗಳನ್ನು ತಿನ್ನುವುದಿಲ್ಲ. ಮೂರ್ತಿ ಪೂಜೆಯಲ್ಲಿ ನಂಬಿಕೆ ಇದೆ ಎಂಬುದನ್ನು ಸ್ಪಷ್ಟಪಡಿಸಲಿ. ಆಮೇಲೆ ಉದ್ಘಾಟನೆ ಮಾಡಲಿ. ಆಗ ನಾವು ಒಪ್ಪುತ್ತೇವೆ ಎಂದರು.
ಇನ್ನು ಚಾಮುಂಡಿ ಬೆಟ್ಟ ಹಿಂದೂಗಳಿಗಷ್ಟೇ ಸೇರಿದ್ದಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆಗೆ ತೀವ್ರ ಖಂಡನೀಯ. ಚಾಮುಂಡಿ ಬೆಟ್ಟ ಯಾವಾಗಿದ್ದರೂ ಹಿಂದೂಗಳದ್ದೆ. ಹೆಸರಲ್ಲೇ ನಮ್ಮ ದೇವಿಯ ಹೆಸರಿದೆ ಎಂದರು.
ಗಣೇಶನ ಹಬ್ಬಕ್ಕೆ ಬಗೆ ಬಗೆಯ ಕಂಡಿಷನ್ ಹಾಕುತ್ತಿರುವುದು ಸರಿಯಲ್ಲ. ಬೇರೆ ಸಮುದಾಯಗಳ ಹಬ್ಬಗಳಿಗೆ ಇಲ್ಲದ ಕಂಡಿಷನ್‌ಗಳು ಹಿಂದೂಗಳ ಹಬ್ಬಕ್ಕೆ ಏಕೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ