Pramod Muthalik ಹಿಂದೂ ಸಂಘಟನೆಗಳಿಗೆ ಕಿರಿಕಿರಿ ನೀಡಿದರೆ ಬಿಜೆಪಿಗೆ ಅನಾಹುತ!

By Suvarna News  |  First Published Apr 15, 2022, 11:37 PM IST

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಬಂಧಗಳನ್ನು ಅನುಭವಿಸಬೇಕಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ಅದನ್ನು ಎದುರಿಸಲು ನಮ್ಮಲ್ಲಿ ಜೋಶ್ ಬರುತ್ತಿತ್ತು, ಎದುರಿಸಲು ಆನಂದ ಅನ್ನಿಸುತ್ತಿತ್ತು. ಆದರೆ ಬಿಜೆಪಿ ವರ್ತನೆಯಿಂದ ನೋವು, ಸಿಟ್ಟು ತಂದಿದೆ. ಹಿಂದೂ ಸಂಘಟನೆಗಳಿಗೆ ಕೊಡುವ ಕಿರಿಕಿರಿ ನಾಳೆ ನಿಮಗೆ ತೊಂದರೆ ಆಗಲಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಏ.15): ಹಿಂದೂ ಸಂಘಟನೆಗಳಿಂದಲೇ (hindu organisations) ನೀವು ಗದ್ದುಗೆ ಏರಿ ರಾಜ್ಯಭಾರ ಮಾಡುತ್ತಿದ್ದೀರಿ ಎನ್ನುವುದನ್ನು ಮರೆಯಬೇಡಿ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Sri Rama Sene Chief Pramod Muthalik) ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ತಾವು ಉಡುಪಿ ಜಿಲ್ಲೆ (Udupi District) ಪ್ರವೇಶಿಸುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದನ್ನು ಖಂಡಿಸಿ ಅವರು ಮಾತನಾಡಿದರು. ಹಿಂದೂ ಸಂಘಟನೆಗಳಿಗೆ ನೀವು ಬಲ ತುಂಬಿದರೆ ನಿಮಗೆ ಬೇಕಾದಷ್ಟು ಸೀಟು ಗೆಲ್ಲಿಸಿಕೊಡುವ ತಾಕತ್ತು ನಮಗಿದೆ ಎಂದು ಮುತಾಲಿಕ್ ಸವಾಲು ಒಡ್ಡಿದರು.

ಕುಂದಾಪುರ (Kundapur) ತಾಲೂಕಿನ ಗಂಗೊಳ್ಳಿಯಲ್ಲಿ (Gangolli) ನಡೆಯಬೇಕಾಗಿದ್ದ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಮುತಾಲಿಕ್ ಭಾಗವಹಿಸಬೇಕಾಗಿತ್ತು. ಆದರೆ ಗಂಗೊಳ್ಳಿ ಕೋಮುಸೂಕ್ಷ್ಮ ಪ್ರದೇಶ ಎಂಬ ಕಾರಣಕ್ಕೆ ಅವರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸತತ ನಿರ್ಬಂಧಗಳನ್ನು ಎದುರಿಸುತ್ತಿರುವ ಮುತಾಲಿಕ್, ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. 

Tap to resize

Latest Videos

ಗಂಗೊಳ್ಳಿಯಲ್ಲಿ ಮೀನುಗಾರ ಮಹಿಳೆಯರಿಗೆ (Fisherwomen) ಮುಸಲ್ಮಾನರು ವ್ಯಾಪಾರ ನಿಷೇಧ ಮಾಡಿದ ಘಟನೆಯ ಮೂಲಕ, ರಾಜ್ಯದಾದ್ಯಂತ ಹಿಂದೂ ಜಾಗೃತಿಯಾಗಿದೆ, ಮುಸ್ಲಿಮರು ಹಿಂದೂ ಮೀನುಗಾರರಿಗೆ ನಿರ್ಬಂಧ ಹೇರಿದ್ದರಿಂದ ರಾಜ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ. ರಾಜ್ಯ ಮತ್ತು ದೇಶದ ಹಿಂದುಗಳು ಇಂದು ಜಾಗೃತರಾಗಿದ್ದಾರೆ, ಗಂಗೊಳ್ಳಿ ಹಿಂದೂ ಸಂಘಟನೆಗೆ ಧನ್ಯವಾದ ಹೇಳುತ್ತೇನೆ ಎಂದರು.

ಮುಸ್ಲೀಮರ ಬಾಹುಳ್ಯ ಇರುವ ಜಾಗ ಸೂಕ್ಷ್ಮ ಪ್ರದೇಶವೇ?: ಇದು ದೊಡ್ಡ ಗಂಡಾಂತರ ಆಗುವ ಬೆಳವಣಿಗೆ, ಹಿಂದೂಗಳ ಶಕ್ತಿ ಇರುವ ಪ್ರದೇಶಗಳು ಶಾಂತ ಪ್ರದೇಶಗಳು ಆಗಿರುತ್ತದೆ. ಸರಕಾರ ತನ್ನ  ಮುಸಲ್ಮಾನ ಮಾನಸಿಕತೆ ತಿದ್ದಿಕೊಳ್ಳಬೇಕು ಎಂದರು. ಬಿಜೆಪಿಯವರ ಈ ನಿಲುವು ಖಂಡಿಸುತ್ತೇನೆ, ನನ್ನ ಹಿಂದುತ್ವದ ಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಆದರೆ ನನ್ನನ್ನು ಕಳೆದ ಆರು ವರ್ಷದಿಂದ ಗೋವಾ ರಾಜ್ಯ ಬ್ಯಾನ್ ಮಾಡಿದೆ. ಇದೀಗ ಕೋಲಾರ ಜಿಲ್ಲೆ, ಉಡುಪಿ ಜಿಲ್ಲೆ ಬ್ಯಾನ್ ಮಾಡಿದೆ. ಮೇಲಿಂದ ಮೇಲೆ ಈ ರೀತಿಯ ಬಿಜೆಪಿ ವರ್ತನೆ ಸರಿಯಲ್ಲ ಎಂದು ಗುಡುಗಿದರು

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಬಂಧಗಳನ್ನು ಅನುಭವಿಸಬೇಕಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ಅದನ್ನು ಎದುರಿಸಲು ನಮ್ಮಲ್ಲಿ ಜೋಶ್ ಬರುತ್ತಿತ್ತು, ಎದುರಿಸಲು ಆನಂದ ಅನ್ನಿಸುತ್ತಿತ್ತು. ಆದರೆ ಬಿಜೆಪಿ ವರ್ತನೆಯಿಂದ ನೋವು, ಸಿಟ್ಟು ತಂದಿದೆ. ಹಿಂದೂ ಸಂಘಟನೆಗಳಿಗೆ ಕೊಡುವ ಕಿರಿಕಿರಿ ನಾಳೆ ನಿಮಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು ಕಾಂಗ್ರೆಸ್ ನಿಲುವು ಒಂದೇ ಆಗಿತ್ತು, ಅಂದು ಪ್ರವೀಣ್ ತೊಗಾಡಿಯಾ ಅವರಿಗೆ ಶೃಂಗೇರಿಗೆ ನಿರ್ಬಂಧ ಹಾಕಿದಾಗ ಬಿಜೆಪಿ ಅದನ್ನು ಘಟ್ಟಿ ದನಿಯಲ್ಲಿ ವಿರೋಧಿಸಿತ್ತು. ತೊಗಾಡಿಯಾ ಶೃಂಗೇರಿ ಪ್ರವೇಶಕ್ಕೆ ನಿರ್ಬಂಧವಾದಾಗ ಈಶ್ವರಪ್ಪ ಶೃಂಗೇರಿ ಪಾಕಿಸ್ತಾನದಲ್ಲಿ ಇದೆಯಾ ಎಂದು ಗುಡುಗಿದ್ದರು ಆದರೆ ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ಕಾಂಗ್ರೆಸಿನ ಮಾನಸಿಕತೆಯನ್ನು ಬಿಜೆಪಿಯವರು ಮೆರೆಯುತ್ತಿದ್ದಾರೆ ಎಂದರು ಧಾರವಾಡದಲ್ಲಿ ದೇವಾಲಯದ ಮುಂದೆ ಇದ್ದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಒಡೆದದ್ದಕ್ಕೆ ಹಿಂದೂಗಳ ಮೇಲೆ ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ, ಈ ಮಾನಸಿಕತೆ ಸರಿಯಲ್ಲ ಹಿಂದು ಸಂಘಟನೆಗಳನ್ಬು ಶಿಕ್ಷಿಸುವುದು ಸರಿಯಿಲ್ಲ. ಬಿಜೆಪಿ ತನ್ನ ನಡವಳಿಕೆ, ನೀತಿ ತಿದ್ದಿಕೊಳ್ಳಬೇಕು ಇಲ್ಲದಿದ್ದಲ್ಲಿ ಅನಾಹುತ ಆಗುತ್ತದೆ ಎಂದರು.

ಫುಲ್ ಹೆಲ್ತ್ ಚೆಕಪ್ ಮಾಡಿಕೊಂಡ ಮುತಾಲಿಕ್: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಆರಂಭದಲ್ಲಿ ಉಡುಪಿ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು ನಂತರ ಆರೋಗ್ಯದ ತಪಾಸಣೆ ಮತ್ತು ಮಠ-ಮಂದಿರಗಳ ಭೇಟಿ ಗೆ ಅವಕಾಶ ಮಾಡಿ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದಾರೆ ಹೀಗಾಗಿ ನಾನು ಡಿಸಿ ಎಸ್ಪಿ ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಆದರ್ಶ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ ವೈದ್ಯರು ತಪಾಸಣೆ ಮಾಡಿ ಕೆಲವು ಚಿಕಿತ್ಸೆಗಳನ್ನು ಹೇಳಿದ್ದಾರೆ.ವಯೋಸಹಜ ಕೆಲ ಸಮಸ್ಯೆಗಳು ಇದೆ ಸಂಪೂರ್ಣವಾಗಿ ಆರೋಗ್ಯತಪಾಸಣೆ ಮಾಡುತ್ತೇನೆ ಚಿಕಿತ್ಸೆಗಳು ಇದ್ದರೆ ಬೆಂಗಳೂರು ಅಥವಾ ಧಾರವಾಡದಲ್ಲಿ ಅಥವಾ ಉಡುಪಿಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇನೆ ಎಂದರು.

ಸದ್ದಿಲ್ಲದೇ ಶ್ರೀರಾಮ ಶೋಭಾಯಾತ್ರೆಯಲ್ಲಿ ಮುತಾಲಿಕ್ ಪ್ರತ್ಯಕ್ಷ, ಪೊಲೀಸ್ರು ತಬ್ಬಿಬ್ಬು

ಈಶ್ವರಪ್ಪ ಭವಿಷ್ಯ ಕಾನೂನು ನಿರ್ಧರಿಸುತ್ತದೆ : ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ, ಅವರನ್ನು ಬಂಧನ ಮಾಡುವುದು ಸರಕಾರ ಮತ್ತು ಕಾನೂನಿಗೆ ಬಿಟ್ಟ ವಿಚಾರ, ಭ್ರಷ್ಟಾಚಾರರಿಂದ ಅಭಿವೃದ್ಧಿ ಗೆ ತೊಂದರೆ ಆಗುತ್ತಿದೆ. ಭ್ರಷ್ಟಾಚಾರದ ವಿಚಾರದಲ್ಲಿ ಎಲ್ಲಾ ಪಕ್ಷಗಳು ಗಂಭೀರ ಚಿಂತನೆ ಮಾಡಬೇಕು. ಈಶ್ವರಪ್ಪರದ್ದು ಒಂದು ಉದಾಹರಣೆ  ಭ್ರಷ್ಟಾಚಾರದ ಬಗ್ಗೆ ದೇಶವೇ ಚಿಂತನೆ ಮಾಡಬೇಕು .ಇಲ್ಲವಾದಲ್ಲಿ ಭ್ರಷ್ಟಾಚಾರ ಇಡೀ ದೇಶವನ್ನು ನುಂಗಿ ಹಾಕುತ್ತದೆ ಎಂದರು.

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ರಾಜ್ಯಾದ್ಯಂತ ಆಂದೋಲನಕ್ಕೆ ಶ್ರೀರಾಮಸೇನೆ ನಿರ್ಧಾರ

ಬ್ಯಾನ್ ಪಿಎಫ್ ಐ  ಅಭಿಯಾನ: ದುಷ್ಟ, ಸಮಾಜಘಾತುಕ ಪಿಎಫ್ ಐ ಬ್ಯಾನ್ ಮಾಡಬೇಕು,  ಮೇ ಮೊದಲ ವಾರದಿಂದ ಬ್ಯಾನ್ ಪಿಎಫ್ ಐ ಅಭಿಯಾನ ರಾಜ್ಯದ ಪ್ರತಿ ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಶ್ರೀರಾಮ್ ಸೇನೆ ಅಭಿಯಾನವನ್ನು ನಡೆಸಲಿದೆ. ಸರ್ಕಾರದ ನಿಲುವು ಬದಲಾಗುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದರು.

click me!