ಡಿ.26ರಂದು ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮಸೇನೆ ಪ್ಲಾನ್!

By Ravi Janekal  |  First Published Dec 22, 2023, 4:59 PM IST

ವಿವಾದಿತ ಸ್ಥಳ ದತ್ತಪೀಠ ಬಿಟ್ಟು ಮತ್ತೊಂದೆಡೆ ದತ್ತಜಯಂತಿಗೆ ಶ್ರೀರಾಮ ಸೇನೆ ಮುಂದಾಗಿದೆ. ಬಿಗಿ ಭದ್ರತೆಯಲ್ಲಿ ಬಜರಂಗದಳ, ವಿಶ್ವಹಿಂದುಪರಿಷತ್ ನೇತೃತ್ವದಲ್ಲಿ ಬಾಬಾ ಬುಡನ್ ಸ್ವಾಮಿ ನೇತೃತ್ವದಲ್ಲಿ ದತ್ತ ಜಯಂತಿ ನಡೆದಿರುವ ಬೆನ್ನಲ್ಲೇ ಇತ್ತ ಮತ್ತೊಂದು ವಿವಾದಿತ ಸ್ಥಳದಲ್ಲಿ ದತ್ತ ಜಯಂತಿ ಆಚರಿಸಲು ಸಿದ್ಧತೆ ನಡೆಸಿದೆ.


ಚಿಕ್ಕಮಗಳೂರು (ಡಿ.22): ವಿವಾದಿತ ಸ್ಥಳ ದತ್ತಪೀಠ ಬಿಟ್ಟು ಮತ್ತೊಂದೆಡೆ ದತ್ತಜಯಂತಿಗೆ ಶ್ರೀರಾಮ ಸೇನೆ ಮುಂದಾಗಿದೆ. ಬಿಗಿ ಭದ್ರತೆಯಲ್ಲಿ ಬಜರಂಗದಳ, ವಿಶ್ವಹಿಂದುಪರಿಷತ್ ನೇತೃತ್ವದಲ್ಲಿ ಬಾಬಾ ಬುಡನ್ ಸ್ವಾಮಿ ನೇತೃತ್ವದಲ್ಲಿ ದತ್ತ ಜಯಂತಿ ನಡೆದಿರುವ ಬೆನ್ನಲ್ಲೇ ಇತ್ತ ಮತ್ತೊಂದು ವಿವಾದಿತ ಸ್ಥಳದಲ್ಲಿ ದತ್ತ ಜಯಂತಿ ಆಚರಿಸಲು ಸಿದ್ಧತೆ ನಡೆಸಿದೆ.

ಡಿ.26ರಂದು ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಆಚರಣೆಗೆ ಶ್ರೀರಾಮ ಸೇನೆ (Sri Ram Sena) ಸಿದ್ಧತೆ ಮಾಡಿಕೊಂಡಿದೆ.ಮುಸ್ಲಿಂರ ಪವಿತ್ರ ಸ್ಥಳವಾಗಿರುವ ನಾಗೇನಹಳ್ಳಿ ದರ್ಗಾ. ಇದೇ ದರ್ಗಾದಲ್ಲಿ ಡಿ. 26ರಂದು ದತ್ತಜಯಂತಿ ಆಚರಣೆ ಮಾಡಲು ಶ್ರೀ ರಾಮಸೇನೆ ನಿರ್ಧಾರ. ಮುಸ್ಲಿಮರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡ್ತಾರೆ. ನಾವು ಅವರಂತೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡ್ತೇವೆ. ದತ್ತಪೀಠದಲ್ಲಿ ಉರುಸ್ ಆಗುವುದಾದ್ರೆ ನಾವು ನಾಗೇನಹಳ್ಳಿ ದರ್ಗಾದಲ್ಲಿ ಯಾಕೆ ಮಾಡಬರದು? ಎಂದು ಪ್ರಶ್ನೆ ಮಾಡಿರುವ ಶ್ರೀರಾಮಸೇನೆ. 

Latest Videos

undefined

 

ದತ್ತ ಜಯಂತಿ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ, ಭದ್ರತೆಗೆ 4000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಹೀಗಾಗಿ ಡಿ.26ರಂದು ನಾಗೇನಹಳ್ಳಿಯಲ್ಲಿ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ದತ್ತಜಯಂತಿ ಆಚರಣೆ ಮಾಡುವುದಾಗಿ ಶ್ರೀರಾಮ ಸೇನೆ ರಾಜ್ಯಾದ್ಯಕ್ಷ ಗಂಗಾಧರ್ ಕುಲಕರ್ಣಿ  ಘೋಷಣೆ ಮಾಡಿದ್ದಾರೆ.

ವೀಕೆಂಡ್, ಕ್ರಿಸ್‌ಮಸ್‌ ಪ್ಲಾನ್ ಮಾಡಿದವರಿಗೆ ನಿರಾಸೆ: 5 ದಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

click me!