ಸಾಲು- ಸಾಲು ರಜೆಗಳು ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭಕ್ತರ ದಂಡು ಹರಿದು ಬಂದಿದ್ದು, ಮಠದ ಕಾಣಿಕೆ ಹುಂಡಿಯಲ್ಲಿ ಕೇವಲ 22 ದಿನಗಳಲ್ಲಿ 2.35 ಕೋಟಿ ಸಂಗ್ರಹವಾಗಿದೆ. ಮಠದ ಸಿಬ್ಬಂದಿ ಮಂಗಳವಾರ ಹುಂಡಿಯನ್ನು ತೆರೆದು ಎಣಿಕೆ ಮಾಡಿದರು.
ರಾಯಚೂರು (ಆ.23): ಸಾಲು- ಸಾಲು ರಜೆಗಳು ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭಕ್ತರ ದಂಡು ಹರಿದು ಬಂದಿದ್ದು, ಮಠದ ಕಾಣಿಕೆ ಹುಂಡಿಯಲ್ಲಿ ಕೇವಲ 22 ದಿನಗಳಲ್ಲಿ 2.35 ಕೋಟಿ ಸಂಗ್ರಹವಾಗಿದೆ. ಮಠದ ಸಿಬ್ಬಂದಿ ಮಂಗಳವಾರ ಹುಂಡಿಯನ್ನು ತೆರೆದು ಎಣಿಕೆ ಮಾಡಿದರು. ರಾಯರ ಹುಂಡಿಯಲ್ಲಿ 2ಕೋಟಿ 35 ಲಕ್ಷ 62 ಸಾವಿರದ 719 ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಭಕ್ತರು ನೀಡಿದ ಕಾಣಿಕೆ ಶ್ರೀಮಠದ ಕಲ್ಯಾಣ ಕಾರ್ಯಕ್ಕಾಗಿ ಬಳಕೆ ಮಾಡಲು ತಿರ್ಮಾನಿಸಲಾಗಿದ್ದು, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿ ಮಠದಿಂದ ಮಾಹಿತಿ ತಿಳಿಸಿದೆ.
ಮಂತ್ರಾಲಯದಲ್ಲಿ 100 ಕೊಠಡಿಗಳ ವಸತಿಗೃಹ ಉದ್ಘಾಟನೆ: ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಹೊಸದಾಗಿ ನಿರ್ಮಿಸಿರುವ 100 ಕೊಠಡಿಗಳನ್ನೊಳಗೊಂಡ ‘ಶ್ರೀಮೂಲರಾಮ ನಿಲಯ ವಸತಿಗೃಹ’ ಸಂಕೀರ್ಣವನ್ನು ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು ಮಂಗಳವಾರ ಲೋಕಾರ್ಪಣೆಗೊಳಿಸಿದರು. ರಾಯರ ಭಕ್ತರಾದ ಸೋಮಶೇಖರ ಎಂಬವರು ಮಂತ್ರಾಲಯದಲ್ಲಿ 8 ಕೋಟಿ ರು. ವೆಚ್ಚದಲ್ಲಿ ಈ ನಿಲಯ ನಿರ್ಮಿಸಿದ್ದು, ರಾಯರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮಠಕ್ಕೆ ಆಗಮಿಸುವ ಭಕ್ತರಿಗೆ ವಸತಿಗಾಗಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆರಾಧನಾ ಪೂರ್ವದಲ್ಲಿ ಕಟ್ಟಡವನ್ನು ಉದ್ಘಾಟಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು. ಇದೇ ವೇಳೆ ಕಟ್ಟಡದ ದಾನಿಗಳಾದ ಸೋಮಶೇಖರ ಹಾಗೂ ಕುಟುಂಬದವರು ಗುರುವಂದನೆ ಸಲ್ಲಿಸಿದರು.
undefined
ಎನ್‌ಇಪಿ ರದ್ದು: ಡಿಕೆಶಿಗೆ 8 ಪ್ರಶ್ನೆ ಕೇಳಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ರಾಯರ ಆರಾಧನಾ ಮಹೋತ್ಸವಕ್ಕೆ ಕೌಂಟ್‌ಡೌನ್: ಗುರು ರಾಘವೇಂದ್ರ ಕೋಟ್ಯಂತರ ಭಕ್ತರ ಆರಾಧ ದೈವ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಹರಿದು ಬರ್ತಾರೆ. ಇನ್ನು ಆರಾಧನಾ ಮಹೋತ್ಸವಕ್ಕಂತೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಬಾರಿಯೂ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್‌ವವರೆಗೆ ರಾಯರ 352ನೇ ಆರಾಧನಾ ಮಹೋತ್ಸವ ನಡೆಯಲಿದೆ. ಏಳು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದಲ್ಲಿ ಮಠದಲ್ಲಿ ನಿತ್ಯವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಲಿದೆ. ಆದರೆ ಈ ಬಾರಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಪುಣ್ಯ ಸ್ನಾನದ್ದೇ ಟೆನ್ಷನ್.
ಖರ್ಗೆಗೆ ಕೆಲಸ ಮಾಡಲು ಬಿಡದ ಗಾಂಧಿ ಕುಟುಂಬ: ಸಂಸದ ಲೇಹರ್ ಟೀಕೆ
ಯಾಕಂದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಕಲ್ಲು ಬಂಡೆಗಳೇ ಕಾಣಿಸುತ್ತಿವೆ. ರಾಯರ ದರ್ಶನಕ್ಕೆ ಬರುವ ಭಕ್ತರು ಮೊದಲು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತ್ರ ರಾಯರ ದರ್ಶನ ಪಡೆಯೋದು ಪ್ರತೀತಿ. ಆದ್ರೆ ಮಂತ್ರಾಲಯದ ರಾಯರ ಮಠದ ಪಕ್ಕ ಹರಿಯುವ ತುಂಗಭದ್ರೆಯ ಒಡಲು ಈ ಬಾರಿ ಸಂಪೂರ್ಣ ಖಾಲಿಯಾಗಿದೆ. ಪುಣ್ಯಸ್ನಾನಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಮಠದ ಆಡಳಿತ ಮಂಡಳಿ ಭಕ್ತರಿಗೆ ಸಮಸ್ಯೆ ಆಗದಂತೆ ನದಿ ದಡದಲ್ಲಿ ಸ್ನಾನಘಟ್ಟಗಳನ್ನ ನಿರ್ಮಿಸಿದೆ. ಜೊತೆಗೆ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಅಂತ ಶ್ರೀಗಳು ತಿಳಿಸಿದ್ದಾರೆ.