ಶಬರಿಮಲೆಗೆ ಕರ್ನಾಟಕದಿಂದ ವಿಶೇಷ ರೈಲು..!

By Kannadaprabha NewsFirst Published Nov 16, 2022, 12:00 AM IST
Highlights

ಬೆಳಗಾವಿ, ಹುಬ್ಬಳ್ಳಿಯಿಂದ 2 ರೈಲುಗಳು, ಬೆಂಗಳೂರು ಮೂಲಕ ಸಂಚಾರ, ರಾಜ್ಯದ ಅನೇಕ ನಿಲ್ದಾಣಗಳಲ್ಲಿ ನಿಲುಗಡೆ

ಬೆಂಗಳೂರು(ನ.16):  ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದಿಂದ ಕೊಲ್ಲಂ ನಡುವೆ ವಿಶೇಷ ರೈಲು ಸಂಚಾರ ಸೇವೆಯನ್ನು ನೈಋುತ್ಯ ರೈಲ್ವೆ ಆರಂಭಿಸಿದೆ. ಬೆಳಗಾವಿ-ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 07357/07358) ನ.20 ರಂದು ಬೆಳಿಗ್ಗೆ 11.30 ಗಂಟೆಗೆ ಬೆಳಗಾವಿಯಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ನ.21 ರಂದು ಕೊಲ್ಲಂನಿಂದ ಸಂಜೆ 5.10 ಕ್ಕೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ. ನಂತರ ಡಿಸೆಂಬರ್‌ 4 ರಿಂದ ಜನವರಿ 15 ರವರೆಗೆ ಮೇಲ್ಕಂಡ ಸಮಯದಂತೆಯೇ ಪ್ರತಿ ಭಾನುವಾರ ಬೆಳಗಾವಿಯಿಂದ ಕೊಲ್ಲಂಗೆ, ಹಾಗೂ ಪ್ರತಿ ಸೋಮವಾರ ಕೊಲ್ಲಂನಿಂದ ಬೆಳಗಾವಿಗೆ ರೈಲು ಸಂಚರಿಸಲಿದೆ.

ಹುಬ್ಬಳ್ಳಿ-ಕೊಲ್ಲಂ-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 07359/07360) ನ.27 ರಂದು ಮಧ್ಯಾಹ್ನ 2.40ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 3.15 ಕ್ಕೆ ಕೊಲ್ಲಂ ತಲುಪಲಿದೆ. ನ.28 ರಂದು ಕೊಲ್ಲಂನಿಂದ ಸಾಯಂಕಾಲ 5.10 ಕ್ಕೆ ಹೊರಟು ಮರುದಿನ ರಾತ್ರಿ 8 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ತಲುಪಲಿದೆ. ಈ ರೈಲು ಒಂದು ಟ್ರಿಪ್‌ ಮಾತ್ರ ಸಂಚಾರ ನಡೆಸಲಿದೆ.

ಮೊಟ್ಟೆ, ಮಾಂಸವಿಲ್ಲದ ಆಹಾರ, ಇದು ದೇಶದ ಮೊದಲ ಸಸ್ಯಾಹಾರಿ ರೈಲು!

ಈ ವಿಶೇಷ ರೈಲುಗಳು ಎರಡೂ ಮಾರ್ಗದಲ್ಲಿ ಖಾನಾಪುರ, ಲೋಂಡಾ, ಧಾರವಾಡ, ಎಸ್‌.ಎಸ್‌.ಎಸ್‌ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್‌, ತಿರುಪ್ಪೂರು, ಪೊದನೂರು, ಪಾಲಕ್ಕಾಡ್‌, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್‌, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್‌, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೊಟ್ಟ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ಐಆರ್‌ಸಿಟಿಸಿಯಲ್ಲಿ ಬುಕ್ಕಿಂಗ್‌ ಲಭ್ಯವಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
 

click me!