ಸರ್ಕಾರಿ ನೌಕರರಿಗೆ ಕೊರೋನಾ ಬಂದರೆ ವಿಶೇಷ ರಜೆ

By Kannadaprabha News  |  First Published Sep 25, 2020, 11:48 AM IST

ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ| ರಾಜ್ಯ ಸರ್ಕಾರದಿಂದ ಪರಿಷ್ಕೃತ ಆದೇಶ| 


ಬೆಂಗಳೂರು(ಸೆ.25): ಕೊರೋನಾ ವೈರಸ್‌ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. 

ಈ ಹಿಂದೆ (ಜು.22ರಂದು) ಹೊರಡಿಸಿದ್ದ ಆದೇಶದಲ್ಲಿ ಸರ್ಕಾರಿ ನೌಕರರು ವಾಸಿಸುವ ಸ್ಥಳವನ್ನು ಕಂಟೈನ್ಮೆಂಟ್‌ ವಲಯವೆಂದು ಘೋಷಿಸಿದಲ್ಲಿ ಅಥವಾ ಸರ್ಕಾರಿ ನೌಕರರ ಕುಟುಂಬದ ಯಾವುದೇ ಸದಸ್ಯರು ಕರೋನಾ ಸೋಂಕಿಗೆ ಒಳಗಾಗಿ ನೌಕರರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆ ಅವರು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ಕರ್ತವ್ಯ ನಿರ್ವಹಣೆಗೆ ಕಚೇರಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಆದೇಶಿಸಲಾಗಿತ್ತು.

Latest Videos

undefined

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

ಆದರೆ, ಈ ಆದೇಶದಲ್ಲಿ ಸ್ವತಃ ನೌಕರನೇ ಸೋಂಕಿಗೆ ಒಳಗಾಗಿದ್ದರೆ ಅವರಿಗೂ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೇಳಿದ ಸ್ಪಷ್ಟನೆಗೆ ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿಯವರು ಉತ್ತರ ನೀಡಿದ್ದು, ಸೋಂಕಿತರಿಗೂ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
 

click me!