Education quality: ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು -ಬಸವರಾಜ ಹೊರಟ್ಟಿ

Kannadaprabha News   | Kannada Prabha
Published : Mar 08, 2026, 09:48 AM IST
Basavaraj Horatti

ಸಾರಾಂಶ

Teachers' role in education quality ಗದಗದಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ, ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು ಎಂದರು. ಶೇ.100 ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಡೆದ ಶಾಲೆಗಳ ಸನ್ಮಾನದ ಕುರಿತು ತಿಳಿಯಿರಿ.

ಗದಗ (ಮಾ.8): ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಬೇಕಾದರೆ ಶಿಕ್ಷಕರಿಗೆ ಇಲಾಖೆ ಅಥವಾ ಸರ್ಕಾರ ಬೋಧನೆ ಬಿಟ್ಟರೆ ಯಾವುದೇ ಅನ್ಯ ಕೆಲಸಗಳನ್ನು ನೀಡಬಾರದು ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ. 100 ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ಸನ್ಮಾನ, ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಸಮಾಜದ ಶಿಲ್ಪಿಗಳು, ಆಧುನಿಕ ಸಮಾಜದ ವ್ಯವಸ್ಥೆಗೆ ತಕ್ಕಂತೆ ಮಕ್ಕಳಲ್ಲಿ ಜ್ಞಾನ ತುಂಬುವ ಕಾರ್ಯ ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಜ್ಞಾನವನ್ನು ಮಕ್ಕಳಿಗೆ ನೀಡಿ ಗುಣಾತ್ಮಕ ಫಲಿತಾಂಶ ಪಡೆಯುವಂತೆ ಪ್ರೇರಣಾದಾಯಕ ಕಲಿಕೆಯನ್ನು ಎಲ್ಲ ಗುರುಬಳಗ ಮಾಡುವುದರಿಂದ ಯಾವುದೇ ಸ್ಪರ್ಧೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ, ಬೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿದರು. ಪ್ರತಿಶತ 100 ಫಲಿತಾಂಶ ಪಡೆದ 76 ಶಾಲಾ ಮುಖ್ಯಶಿಕ್ಷಕರಿಗೆ ಸರ್ಕಾರದಿಂದ ನೀಡಿದ ಪ್ರಶಸ್ತಿ ಫಲಕ ಹಾಗೂ ತಲಾ ₹25,000 ಚೆಕ್‌ಗಳನ್ನು ನೀಡಿ ಗೌರವಿಸಲಾಯಿತು.

ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ, ಎಂ.ಕೆ. ಲಮಾಣಿ, ಎ.ಎಸ್. ಪಾಟೀಲ, ಈಶ್ವರ ನಾಯಕ, ಜಿ.ಆರ್. ಭಟ್, ಉಮೇಶ ಹಿರೇಮಠ, ರವಿ ದಂಡಿನ, ಡಾ. ಬಿ.ಜಿ. ಜವಳಿ, ಎಸ್.ಎಸ್. ಪಟ್ಟಣಶೆಟ್ಟರ, ಡಾ. ಶರಣು ಗೋಗೇರಿ, ಡಾ. ಬಸವರಾಜ ಬಳ್ಳಾರಿ, ವಿ.ವಿ. ನಡುವಿನಮನಿ, ಎಂ.ಎಚ್. ಕಂಬಳಿ, ಎ.ಎನ್. ಕಂಬೋಗಿ, ಶ್ರೀನಿವಾಸ ಹುಯಿಲಗೋಳ, ಬಿ.ಎಫ್. ಪೂಜಾರ, ರವೀಂದ್ರ ಶೆಟ್ಟೆಪ್ಪನವರ, ಗಂಗಾಧರ ಅಣ್ಣಿಗೇರಿ, ಎಚ್.ಬಿ. ರಡ್ಡೇರ, ಕನವಳ್ಳಿ, ಬಿ.ಡಿ. ಯರಗೊಪ್ಪ, ಬೂದಪ್ಪ ಅಂಗಡಿ, ನವೀನ ಬಸವರಡ್ಡಿ, ಡಿ.ಎನ್. ಮರಡ್ಡಿ, ಎಲ್.ಎಸ್. ಅರಳಿಹಳ್ಳಿ, ಎಚ್.ಟಿ. ಬಿಜ್ಜೂರ, ಬಿ.ಕೆ. ನಿಂಬನಗೌಡರ, ಆರ್.ವಿ. ಗೊಂಡಬಾಳ, ಝಡ್.ಎಂ. ಖಾಜಿ, ಬಿ.ಸಿ. ಗುಳೇದ ಹಾಗೂ ಜಿಲ್ಲಾ ಸಮಸ್ತ ಪ್ರೌಢಶಾಲಾ ಶಿಕ್ಷಕ ಬಳಗ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಲೇಜು ಕ್ಯಾಂಪಸ್‌ನಲ್ಲಿ ಕನ್ನಡ ಬೇಡ, ವಿದ್ಯಾರ್ಥಿಗಳು ಇಂಗ್ಲಿಷಿನಲ್ಲೇ ಮಾತಾಡಬೇಕು: ಸಚಿವ ಎಂಸಿ ಸುಧಾಕರ್
ಸಿಲಿಂಡ‌ರ್ ಬೆಲೆ ಹೆಚ್ಚಳ ಶರಣಾಗತಿಯ ಫಲ: ಮೋದಿ ಅವಧಿಯಲ್ಲಿ ದೇಶದ ಸಾಲ 218 ಲಕ್ಷ ಕೋಟಿ: ಸಿದ್ದರಾಮಯ್ಯ