
ಬಳ್ಳಾರಿ ಮೂಲದ ಯೂಟ್ಯೂಬರ್ ಎನ್ನುವ ವ್ಯಕ್ತಿ ಯೂಟ್ಯೂಬ್‌ನಲ್ಲಿ ಸೌಜನ್ಯ ಕೇಸ್ ವಿಚಾರದೊಂದಿಗೆ ಧರ್ಮಸ್ಥಳ, ವೀರೇಂದ್ರ ಹೆಗ್ಗಡೆಯವರ ಬಗ್ಗೆ ಮಾತನಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಜಸ್ಟೀಸ್ ಫಾರ್ ಸೌಜನ್ಯ ಎನ್ನುವ ಹ್ಯಾಶ್‌ಟ್ಯಾಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳ ನಡುವೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ವಿರುದ್ಧ ಹಿಂದೂಗಳನ್ನೇ ಎತ್ತಿಕಟ್ಟುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಅಂದಿನ ಕೇಸ್ ಬಗ್ಗೆ ಸಾರ್ವಜನಿಕರಲ್ಲಿ ಇರುವ ಆಕ್ರೋಶ ಸಹನೀಯವಾದದ್ದೇ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಈಗಾಗಲೇ ಅತ್ಯಂತ ಸ್ಪಷ್ಟವಾಗಿ ತೀರ್ಪು ಬರೆದುಬಿಟ್ಟಿದೆ. ಯಾವುದೇ ಕಾರಣಕ್ಕೂ ಸೌಜನ್ಯ ಕೇಸ್‌ನ ಮರು ತನಿಖೆ ಸಾಧ್ಯವಿಲ್ಲ ಎಂದು ಕಳೆದ ವರ್ಷ ಸೆ.13 ರಂದು ನೀಡಿದ ತೀರ್ಪಿನಲ್ಲಿಯೇ ತಿಳಿಸಿದೆ.
ಅಷ್ಟಕ್ಕೂ ಹೈಕೋರ್ಟ್‌ಗಾಗಿ ದೇಶದ ಯಾವುದೇ ಕೋರ್ಟ್‌ಗಾಗಿ ಈ ಪ್ರಕರಣ ಮುಚ್ಚಿಹಾಕಬೇಕು ಅನ್ನೋ ಉದ್ದೇಶವಿಲ್ಲ. ಅಲ್ಲೊಂದು ರೇಪ್ & ಮರ್ಡರ್ ಕೇಸ್ ನಡೆದಿತ್ತು ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ವಿಚಾರದಲ್ಲಿ ಮೂಲವಾಗಿ ದೂಷಣೆ ಮಾಡಬೇಕಾಗಿರೋದು ಅಂದಿನ ತನಿಖಾ ತಂಡದ ಬಗ್ಗೆ.
ತನಿಖಾ ತಂಡದ ವೈಫಲ್ಯದಿಂದ ಅತೀ ಮುಖ್ಯವಾದ ಕೇಸ್‌ವೊಂದು ಹಳ್ಳ ಹಿಡಿದಿರುವುದು ಇದು ಮೊದಲೇನಲ್ಲ. ಸೌಜನ್ಯ ಕೇಸ್ ನಡೆಯೋಕು ನಾಲ್ಕು ವರ್ಷಗಳ ಮುನ್ನ ಇಡೀ ದೇಶದ ತಲ್ಲಣಕ್ಕೆ ಕಾರಣವಾಗಿದ್ದ ಆರುಷಿ ಡಬಲ್ ಮರ್ಡರ್ ಕೇಸ್‌ನಲ್ಲಿ ಆಗಿರೋದು ಕೂಡ ಇದೆ. ಯಾವುದೇ ಕೇಸ್‌ನಲ್ಲಿಯೇ ಆಗಲಿ, ಅದರ ಇತ್ಯರ್ಥ ಏನು ಬೇಕಾದರೂ ಆಗಲಿ, ಆದರೆ ಕ್ರೈಮ್ ಸ್ಪಾಟ್‌ನಲ್ಲಿ ಆಗಿರೋದು ಏನು ಅನ್ನೋದನ್ನ ಒಂಚೂರು ಹಿಂಜರಿಕೆ ಇಲ್ಲದೆ ಮಾಡಬೇಕಾಗಿರುವುದು ತನಿಖಾ ತಂಡ. ಇದಕ್ಕಾಗಿ ಅವರಿಗೆ ಸಮಯ ಇರೋದು ಕೇವಲ 24 ಗಂಟೆ. ಯಾವುದೇ ಕ್ರೈಮ್‌ನಲ್ಲಿ ಆಗುವ ಎಲ್ಲಾ ಘಟನೆಗಳಲ್ಲಿ ಮೊದಲ 24 ಗಂಟೆಯಲ್ಲಿ ಏನು ಆಗಿರುತ್ತದೆ ಅನ್ನೋದೇ ಮುಖ್ಯ ಅಂಶ.
ಆ ನಂತರದಲ್ಲಿ ಕೇಸ್ ಹೀಗಾಗಿತ್ತು, ಹಾಗಾಗಿತ್ತು ಅನ್ನೋದು ಊಹಾಪೋಹವಾಗುತ್ತದೆ ಹೊರತು, ಕೋರ್ಟ್‌ನಲ್ಲಿ ಶಿಕ್ಷೆ ನೀಡೋದಕ್ಕೆ ಸಾಧ್ಯವಾಗೋದಿಲ್ಲ. ಸೌಜನ್ಯ ಕೇಸ್‌ನಲ್ಲೂ ಮರು ತನಿಖೆಯಾಗಿ ಈಗ ಇನ್ನೊಬ್ಬ ವ್ಯಕ್ತಿ ತಪ್ಪಿತಸ್ಥ ಎಂದರೂ ಆತ ಹಣವಂತನಾಗಿದ್ದಲ್ಲಿ ಸುಲಭವಾಗಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳಿವೆ.
ಸೌಜನ್ಯ ಪ್ರಕರಣದ ಬಗ್ಗೆ ಹೆಚ್ಚುತ್ತಿರುವ ಆಕ್ರೋಶದ ನಡುವರ, ಸೆಪ್ಟೆಂಬರ್ 2024 ರಲ್ಲಿ ಮರುತನಿಖೆಯ ವಿಷಯದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶ ಇದು. 'ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೊದಲ 24 ಗಂಟೆಗಳು ಬಹಳ ನಿರ್ಣಾಯಕ. ಆದರೆ, ಈ ಪ್ರಕರಣದಲ್ಲಿ ಎಲ್ಲವೂ ರಾಜಿಯಾದಂತೆ ಕಂಡಿದೆ. ತನಿಖೆ ಹಳ್ಳಿ ತಪ್ಪಿರುವುದು ಗೊತ್ತಾಗಿದೆ' ಎಂದಿತ್ತು.
ಸೌಜನ್ಯ ಕೇಸ್ ವಿಡಿಯೋ ಮಾಡಿದ್ದ ಯುಟ್ಯೂಬರ್ Dhootha ಸಮೀರ್ ಬಂಧನಕ್ಕೆ ಯತ್ನ; ಪೊಲೀಸರಿಂದ ನೋಟಿಸ್
ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ 13 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ನ್ಯಾಯವನ್ನು ನಿರೀಕ್ಷೆ ಮಾಡಬಹುದೇ ಎನ್ನುವುದೇ ಅನುಮಾನ. ಇದರ ನಡುವೆ ಧರ್ಮಸ್ಥಳದ ಬಗ್ಗೆ ಸಿಟ್ಟುಹೊಂದಿರುವ ಸ್ವಾರ್ಥಿಗಳು ಈ ಸೂಕ್ಷ್ಮ ಪ್ರಕರಣದ ಬಗ್ಗೆ ತಮ್ಮದೇ ಆದ ನಿರೂಪಣೆ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ನಿಜವಾಗಿಯೂ ಈ ಪ್ರಕರಣದಲ್ಲಿ ದೂಷಣೆ ಮಾಡಬೇಕಾಗಿರುವುದು ಅಂದಿನ ತನಿಖಾಧಿಕಾರಿಗಳ ತಂಡವನ್ನು ಹಾಗೂ ತನಿಖಾಧಿಕಾರಿಗಳನ್ನ ನಿಯಂತ್ರಿಸಿದ ವ್ಯಕ್ತಿಗಳ ಬಗ್ಗೆ ಮಾತ್ರ.
ಧರ್ಮಸ್ಥಳ ಮಂಜುನಾಥ ದರ್ಶನ ಪಡೆದ ತರುಣ್- ಸೋನಲ್; ದೇವಸ್ಥಾನಕ್ಕೂ ಮ್ಯಾಚಿಂಗ್ ಯಾಕೆ ಎಂದ ನೆಟ್ಟಿಗರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ