
ಬೆಂಗಳೂರು(ಆ.18): ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ವಿತರಿಸಲಾದ 1.50 ಲಕ್ಷ ರಘುಪತಿ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಬಳಸಲಾಗಿತ್ತು. ಇದೀಗ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಅಖಂಡ ಜ್ಯೋತಿಗೂ ನಮ್ಮ ರಾಜ್ಯದ ನಂದಿನಿ ತುಪ್ಪ ಕಳುಹಿಕೊಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಕಳೆದ ವರ್ಷ ಪಟನಾದ ಮಹಾವೀರ ಮಂದಿರ ಟ್ರಸ್ಟ್, ಹನುಮಾನ್ ದೇವಾಲಯಕ್ಕೆ ಲಡ್ಡು ತಯಾರಿಸಲು ಸುಮಾರು 35 ಸಾವಿರ ಕೆಜಿ ನಂದಿನಿ ತುಪ್ಪವನ್ನು ಕೆಎಂಎಫ್‌ನಿಂದ ಖರೀದಿಸಿದೆ. ಅದೇ ತುಪ್ಪವನ್ನು ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ಪ್ರಸಾದ (ರಾಮ ಜನ್ಮ ಭೂಮಿ ಪೂಜಾ ಪ್ರಸಾದಂ) ತಯಾರಿಸಲು ಬಳಕೆ ಮಾಡಿದೆ.
ಸುದೀರ್ಘ ದಿನ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ; ಮತ್ತೊಂದು ದಾಖಲೆ ಬರೆದ ಮೋದಿ!...
ಇದೀಗ ಶ್ರೀ ಮಹಾವೀರ ಮಂದಿರ ಟ್ರಸ್ಟ್ ರಾಮ ಮಂದಿರ ನಿರ್ಮಾಣದ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಅಖಂಡ ಜ್ಯೋತಿ ವರ್ಷಾನುಗಟ್ಟಲೆ ನಂದಿ ಹೋಗದಂತೆ ನಿರಂತರವಾಗಿ ಬೆಳಗಲು ನಂದಿನಿ ತುಪ್ಪವನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪುನಃ ಎಂಟು ಮೆಟ್ರಿಕ್ ಟನ್( 8 ಸಾವಿರ ಕೆಜಿ) ನಂದಿನಿ ತುಪ್ಪವನ್ನು ಕೆಎಂಎಫ್ ಆಗಸ್ಟ್ ತಿಂಗಳಲ್ಲಿ ಕಳುಹಿಸಿ ಕೊಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಮಮಂದಿರ 1000 ವರ್ಷ ಆದರೂ ಗಟ್ಟಿಯಾಗಿರುತ್ತೆ!...
ವಿಶೇಷವೆಂದರೆ ಹನುಮಾನ್ ದೇವಾಲಯದ ಪ್ರಸಾದವೂ ಕೂಡ ನಂದಿನಿ ತುಪ್ಪದಿಂದಲೇ ತಯಾರಾಗುತ್ತಿದೆ. ಈ ದೇವಾಲಯದ ವ್ಯವಸ್ಥಾಪಕ ಶೇಷಾದ್ರಿ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನವರಾಗಿದ್ದಾರೆ. ಇವರು ಈ ಮೊದಲು ತಿರುಪತಿಯಲ್ಲಿ ಕೆಲಸ ಮಾಡುತ್ತಿದ್ದರು. ತಿರುಪತಿ ಲಡ್ಡು ಮಾಡಲು ನಂದಿನಿ ತುಪ್ಪ ಉಪಯೋಗಿಸುವುದರ ಬಗ್ಗೆ ಮಾಹಿತಿ ಇದ್ದ ಅವರು, ನಂದಿನಿ ತುಪ್ಪ ಬಳಸಲು ತೀರ್ಮಾನಿಸಿದ್ದು, ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ಪ್ರಸಾದಕ್ಕೂ ನಂದಿನಿ ತುಪ್ಪ ಬಳಸಿದ್ದರು. ಹಾಗೆಯೇ ಅಖಂಡ ಜ್ಯೋತಿಗೂ ನಂದಿನಿ ತುಪ್ಪವೇ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ