ಔರಾದ್ಕರ್‌ ವರದಿ ಜಾರಿ, ಪೊಲೀಸರಿಗೆ 10000 ಮನೆ

By Kannadaprabha News  |  First Published Sep 26, 2021, 10:05 AM IST
  • ಪೊಲೀಸ್‌ ಇಲಾಖೆ ಸುಧಾರಣೆಗೆ ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿ ಅನುಷ್ಠಾನಕ್ಕೆ ಹೊಸ ಕಾಯ್ದೆ
  • ಪೊಲೀಸರಿಗೆ 10 ಸಾವಿರ ಮನೆಗಳ ನಿರ್ಮಾಣ ಹಾಗೂ ಪೊಲೀಸ್‌ ಸಿಬ್ಬಂದಿ ಕೊರತೆ ನಿವಾರಣೆಗೆ ಕ್ರಮ

 ಬೆಂಗಳೂರು (ಸೆ.26):  ಪೊಲೀಸ್‌ ಇಲಾಖೆ ಸುಧಾರಣೆಗೆ (Police Reforms) ಹಿರಿಯ ಐಪಿಎಸ್‌ (ips) ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿ (Auradkar Report) ಅನುಷ್ಠಾನಕ್ಕೆ ಹೊಸ ಕಾಯ್ದೆ, ಪೊಲೀಸರಿಗೆ 10 ಸಾವಿರ ಮನೆಗಳ ನಿರ್ಮಾಣ ಹಾಗೂ ಪೊಲೀಸ್‌ ಸಿಬ್ಬಂದಿ ಕೊರತೆ ನಿವಾರಣೆಗೆ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ  ಆರಗ ಜ್ಞಾನೇಂದ್ರ (Araga Jnanendra, ) ಭರವಸೆ ನೀಡಿದರು.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ (suvarnanews) ಶನಿವಾರ ನಡೆದ ‘ಹಲೋ ಮಿನಿಸ್ಟರ್‌’ (Hello Minister) ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ರಾಜ್ಯ ಪೊಲೀಸ್‌ ಪಡೆ ಬಲವರ್ಧನೆಗೆ ಸರ್ಕಾರ (Govt) ಬದ್ಧವಾಗಿದೆ. ಈ ಹಿಂದೆ ಯಾವುದೇ ಸರ್ಕಾರ ನೀಡದಷ್ಟುಅನುದಾವನ್ನು ಎರಡು ವರ್ಷಗಳಿಂದ ಇಲಾಖೆಗೆ ಬಿಜೆಪಿ ಸರ್ಕಾರ ನೀಡಿದೆ ಎಂದರು.

Tap to resize

Latest Videos

ಹಲೋ ಮಿನಿಸ್ಟರ್: ಕ್ಷೇತ್ರದ ಸಮಸ್ಯೆ ಬಗೆಹರಿಸುವುದಾಗಿ ಗೃಹ ಸಚಿವರ ಭರವಸೆ

ನನ್ನ ಮೇಲೆ ನಂಬಿಕೆ ಇಟ್ಟು ಗೃಹ ಸಚಿವ ಸ್ಥಾನವನ್ನು ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿಗಳು ನೀಡಿದ್ದಾರೆ. ಈಗಿರುವ 1.5 ವರ್ಷಗಳ ಅವಧಿಯಲ್ಲಿ ಇಲಾಖೆಯ ಇತಿಹಾಸದಲ್ಲಿ ನನ್ನ ಹೆಸರು ಉಳಿಸುವಂತಹ ಕೆಲಸವನ್ನು ಮಾಡಬೇಕೆಂಬ ಅಚಲ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಔರಾದ್ಕರ್‌ ವರದಿಗೆ ಹೊಸ ನಿಯಮ:

ಪೊಲೀಸ್‌ ಇಲಾಖೆಯ ಸುಧಾರಣೆಗೆ ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಹೊಸ ಕಾಯ್ದೆ ರೂಪಿಸುವ ವಿಚಾರವಾಗಿ ಮುಖ್ಯಮಂತ್ರಿಗಳು (chief Minister) ಹಾಗೂ ಅಧಿಕಾರಿಗಳ ಜತೆ ಸಮಾಲೋಚಿಸಿ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದು ಗೃಹ ಸಚಿವ ಭರವಸೆ ನೀಡಿದರು.

ನಿವೃತ್ತ ಪೊಲೀಸ್‌ ಅಧಿಕಾರಿ ರಹೀಂ ಅವರ ಕರೆಗೆ ಪ್ರತಿಕ್ರಿಯಿಸಿದ ಸಚಿವರು, ಔರಾದ್ಕರ್‌ ವರದಿ ವಿಚಾರದಲ್ಲಿ ಹೊಸದಾಗಿ ಇಲಾಖೆಗೆ ಸೇರ್ಪಡೆಯಾಗುವವರಿಗೆ ಭತ್ಯೆ ಹಾಗೂ ವೇತನ ಪರಿಷ್ಕರಣೆಯಲ್ಲಿ ಅನುಕೂಲವಾಗುತ್ತಿದೆ. ನಿವೃತ್ತರಿಗೂ ಸಹ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಹಲೋ ಮಿನಿಸ್ಟರ್: ಸಾರ್ವಜನಿಕರ ದೂರುಗಳಿಗೆ ಆರಗ ಜ್ಞಾನೇಂದ್ರ ನೇರ ಉತ್ತರ

ಇದೇ ವೇಳೆ ಸಚಿವರಿಗೆ ಕರೆ ಮಾಡಿದ ನಿವೃತ್ತ ಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರು, ಪೊಲೀಸ್‌ ಸುಧಾರಣೆಗೆ ಬಹಳ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಅದರ ಅನುಷ್ಠಾನ ವಿಚಾರದಲ್ಲಿ ಹೊಸ ನಿಯಮವಾಳಿ ರೂಪಿಸುವುದು ಅಗತ್ಯವಿದೆ ಎಂದರು.

ವಸತಿ, ಠಾಣೆ ನಿರ್ಮಾಣಕ್ಕೆ ಕ್ರಮ:

ರಾಜ್ಯದಲ್ಲಿ ಪೊಲೀಸ್‌ ಗೃಹ ಯೋಜನೆಯಲ್ಲಿ 10 ಸಾವಿರ ಮನೆಗಳ ನಿರ್ಮಾಣ ಹಾಗೂ 100 ಹೊಸ ಪೊಲೀಸ್‌ ಠಾಣೆಗಳ (station) ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಹಂತ ಹಂತವಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ನೂತನ ಠಾಣೆಗಳ ಸ್ಥಾಪನೆಗೆ ಭಾನುವಾರ ಮುಖ್ಯಮಂತ್ರಿಯವರ ಜತೆ ಗದ್ದುಲಿ ಪೂಜೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮನೆಗೆ ಬನ್ನಿ ಎಂದು ಪತ್ನಿ, ಮಕ್ಕಳ ಬೇಡಿಕೆ!

ಸಚಿವರಾದ ಬಳಿಕ ಪತಿ ಬೆಂಗಳೂರಿನಲ್ಲೇ (Bengaluru) ಹೆಚ್ಚು ಇರುತ್ತಾರೆ. ವಾರಕ್ಕೊಮ್ಮೆ ಮನೆಗೆ ಬರೋದು ಅವರಿಗೆ ಕಷ್ಟವಾಗುತ್ತಿದೆ. ನಾವು ಅವರನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇವೆ ಎಂದು ಗೃಹ ಸಚಿವರ ಪತ್ನಿ ಪ್ರಫುಲ್ಲ ಹೇಳಿದರು. ಇದಕ್ಕೆ ಸಚಿವ ಪುತ್ರಿ ಅನನ್ಯ ಹಾಗೂ ಸೊಸೆ ಸಹ ದನಿಗೂಡಿಸಿದರು. ತಮ್ಮ ಕುಟುಂಬದವರ ಬೇಸರ ನುಡಿಗೆ ಸ್ಪಂದಿಸಿದ ಸಚಿವರು, ಹೊಸ ಹೊಣೆಗಾರಿಕೆ ಕಾರಣಕ್ಕೆ ರಾಜ್ಯ ಸುತ್ತಾಟ ಇರುತ್ತದೆ. ಇದರಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಟೋಯಿಂಗ್‌ ವ್ಯವಸ್ಥೆ ಸುಧಾರಣೆ

ಟೋಯಿಂಗ್‌ ಸೇರಿದಂತೆ ಸಂಚಾರ ವ್ಯವಸ್ಥೆ ವಿರುದ್ಧ ಹೆಚ್ಚಿನ ಜನರು ದೂರು ಸಲ್ಲಿಸಿದರು. ಈ ಕರೆಗಳಿಗೆ ಸ್ಪಂದಿಸಿದ ಸಚಿವರು, ಬೆಂಗಳೂರಿನಲ್ಲಿ ಟೋಯಿಂಗ್‌ ಸಿಬ್ಬಂದಿ ರೌಡಿಗಳಂತೆ ವರ್ತಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜನರಿಂದ ಬಲವಂತವಾಗಿ ದಂಡ ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದರು.

click me!