* ವೈದ್ಯರು ಔಷಧದ ಬ್ರ್ಯಾಂಡ್ ಬದಲು ರಾಸಾಯನಿಕ ಹೆಸರು ಬರೆಯಲಿ
* ಪ್ರಧಾನಿ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸಲಹೆ
* ಸಾರ್ವಜನಿಕರು ಹೆಚ್ಚೆಚ್ಚು ಜನ ಔಷಧ ಬಳಸಬೇಕು
ಮೈಸೂರು(ಮಾ.08): ಮುಂದಿನ 6 ತಿಂಗಳಲ್ಲಿ ರಾಜ್ಯಾದ್ಯಂತ(Karnataka) 500 ಜನೌಷಧ ಕೇಂದ್ರಗಳನ್ನು( Jan Aushadhi Kendra) ತೆರೆಯುವ ಗುರಿ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್(K Sudhakar) ತಿಳಿಸಿದರು. ನಗರದ ಸದರ್ನರ್ ಸ್ಟಾರ್ ಹೊಟೇಲ್ ಸಭಾಂಗಣದಲ್ಲಿ ಜನೌಷಧಿ ದಿನದ ಅಂಗವಾಗಿ ಜನೌಷಧಿ ಫಲಾನುಭವಿಗಳು ಮತ್ತು ಜನೌಷಧಿ ಕೇಂದ್ರಗಳ ಮಾಲೀಕರೊಂದಿಗೆ ಪ್ರಧಾನಿ ಮೋದಿಯವರ(Narendra Modi) ವರ್ಚುವಲ್ ಸಂವಾದ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಜನೌಷಧಗಳು ಕಡಿಮೆ ದರ ಮಾತ್ರವಲ್ಲದೆ ಗುಣಮಟ್ಟದಲ್ಲೂ ಉತ್ತಮವಾಗಿವೆ. ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ಜನೌಷಧದ ಮೇಲೆ ವಿಶ್ವಾಸ ಇರಿಸಬೇಕು. ವೈದ್ಯರು ಹೆಚ್ಚು ಹಣ ನೀಡಿ ಔಷಧ(Medicine) ಕೊಳ್ಳಲು ಸಾಧ್ಯವಾಗದವರಿಗೆ ಬ್ರ್ಯಾಂಡ್ ಹೆಸರಿನ ಔಷಧ ಬರೆಯದೆ, ರಾಸಾಯನಿಕದ ಹೆಸರು ಬರೆಯುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು.
ಪ್ರಸ್ತುತ ದೇಶಾದ್ಯಂತ 9 ಸಾವಿರ ಜನೌಷಧ ಕೇಂದ್ರಗಳಿದ್ದು, ಕೇವಲ ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಉಪಕೇಂದ್ರಗಳಲ್ಲೂ ಇರಬೇಕು. ಇದಕ್ಕೆ ಖಾಸಗಿಯವರು ಮುಂದೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಜನೌಷಧ ಕೇಂದ್ರ ಆರಂಭಿಸಿ ಸಾರ್ವಜನಿಕರಿಗೆ ನೆರವಾಗಬೇಕು ಎಂದು ಅವರು ಹೇಳಿದರು.
ಜನೌಷಧಿ ಮಳಿಗೆಗಳಿಂದ ಬಡವರಿಗೆ ಹೆಚ್ಚು ಲಾಭ: ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ
ಜನ ಔಷಧಗಳು ಕಡಿಮೆ ದರ ಮಾತ್ರವಲ್ಲದೆ ಗುಣಮಟ್ಟದಲ್ಲೂ ಉತ್ತಮವಾಗಿವೆ. ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ಜನೌಷಧದ ಮೇಲೆ ವಿಶ್ವಾಸ ಇರಿಸಬೇಕು. ವೈದ್ಯರು(Doctor) ಹೆಚ್ಚು ಹಣ ನೀಡಿ ಔಷಧ ಕೊಳ್ಳಲು ಸಾಧ್ಯವಾಗದವರಿಗೆ ಬ್ರ್ಯಾಂಡ್ ಹೆಸರಿನ ಔಷಧ ಬರೆಯದೆ, ರಾಸಾಯನಿಕದ ಹೆಸರು ಬರೆಯುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು.
68 ವರ್ಷಗಳಲ್ಲಿ ಔಷಧ, ದರದ ಬಗ್ಗೆ ಯಾರಿಗೂ ಬರದ ಆಲೋಚನೆ ಪ್ರಧಾನಿ ಮೋದಿ ಅವರಿಗೆ ಬಂದಿದ್ದರ ಪರಿಣಾಮವೇ ಇಂದು ದೇಶದ(India) ಜನತೆ ಕಡಿಮೆ ದರದಲ್ಲಿ ಔಷಧ ಕೊಳ್ಳಲು ಸಾಧ್ಯವಾಗಿದೆ. ಬದ್ಧತೆ, ಸೂಕ್ಷ್ಮತೆ ಹೊಂದಿರುವ ಮೋದಿ ಅವರು ಸಾರ್ವಜನಿಕರಿಗೆ ಒಳಿತು ಮಾಡುವ ತಮ್ಮ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ ಎಂದರು.
ಔಷಧ ಪೂರೈಕೆ ಡಿಜಿಟಲೀಕರಣ:
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಮಾತನಾಡಿ(Bhagawanth Khuba), ಪ್ರಧಾನಿ ಮೋದಿ ಅವರು ಬಡವರು, ಮಧ್ಯಮ ವರ್ಗದವರ ಮೇಲೆ ಅಪಾರ ಕಾಳಜಿ ಹೊಂದಿದ್ದು, ಔಷಧ ಕೇಂದ್ರಗಳಲ್ಲಿ ಆಗುತ್ತಿದ್ದ ಸಾರ್ವಜನಿಕರ ಸುಲಿಗೆ ತಪ್ಪಿಸುವ ಸದುದ್ದೇಶದಿಂದ ದೇಶದ ಮೂಲೆ ಮೂಲೆಯಲ್ಲೂ ಜನೌಷಧ ಕೇಂದ್ರ ಆರಂಭಿಸಿದ್ದಾರೆ. ಈ ಕೇಂದ್ರದಲ್ಲಿನ ಔಷಧಗಳು ಗುಣಮಟ್ಟದಿಂದ ಕೂಡಿದ್ದು, ಔಷಧ ಪೂರೈಕೆಯನ್ನು ಸುಧಾರಣೆ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಔಷಧಗಳು ಮಾತ್ರವಲ್ಲದೆ 240 ಶಸ್ತ್ರ ಚಿಕಿತ್ಸಾ ಉಪಕರಣಗಳು ಸಿಗುತ್ತವೆ. ಹೀಗಾಗಿ, ಸಾರ್ವಜನಿಕರು ಹೆಚ್ಚೆಚ್ಚು ಜನ ಔಷಧ ಬಳಸಬೇಕು ಎಂದು ಹೇಳಿದರು. ಶಾಸಕ ಎಸ್.ಎ. ರಾಮದಾಸ್, ಶಾಸಕ ಎಲ್.ನಾಗೇಂದ್ರ ಇತರರು ಇದ್ದರು.
ಅಗ್ಗದ ದರಲ್ಲಿ ಕ್ಯಾನ್ಸರ್ ಔಷಧಿಗೆ ಚಿಂತನೆ: ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಎಲ್ಲ ಪ್ರಾದೇಶಿಕ ವಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು(Cancer Treatment Center) ಪ್ರಾರಂಭಿಸುತ್ತೇವೆ. ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.
Jan aushadhi kendra : ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಜನೌಷಧಿ ಮಳಿಗೆ
ಫೆ.04 ರಂದು ವಿಶ್ವ ಕ್ಯಾನ್ಸರ್ ದಿನದ(World Cancer Day) ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(Department of Health and Family Welfare) ವತಿಯಿಂದ ಒಂದು ವಾರದ ಕಾಲ ರಾಜ್ಯಾದ್ಯಂತ ನಡೆಯಲಿರುವ ಕ್ಯಾನ್ಸರ್ ಬಗ್ಗೆಗಿನ ಜನಜಾಗೃತಿ ಅಭಿಯಾನಕ್ಕೆ ಉತ್ತರಹಳ್ಳಿ ಬಿಬಿಎಂಪಿ(BBMP) ಪಿಯು ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದ್ದರು.
ಕ್ಯಾನ್ಸರ್ ಔಷಧಿಗಳ(Cancer Medicine) ದುಬಾರಿ ದರದ ಹೊರೆ ತಪ್ಪಿಸಲು ಕ್ಯಾನ್ಸರ್ ಔಷಧಿ ಉತ್ಪಾದಕರು ಹಾಗೂ ಕೇಂದ್ರ ಸರ್ಕಾರದ(Central Government) ಜೊತೆ ಮಾತುಕತೆ ನಡೆಸುತ್ತೇವೆ. ರಾಜ್ಯಾದ್ಯಂತ ಅಗ್ಗದ ದರದಲ್ಲಿ ಕ್ಯಾನ್ಸರ್ ಔಷಧಿ ನೀಡಲು ಒಂದು ಸಂಸ್ಥೆ ರೂಪಿಸಲಾಗುವುದು. ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಸದೃಢಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಭಾಗಿಯಾಗಿದ್ದರು.