Drugs Racket in Karnataka: 'ಡ್ರಗ್ಸ್‌ ಪೆಡ್ಲರ್‌ಗಳ ಎನ್‌ಕೌಂಟರ್‌ ಮಾಡಿ'

By Girish Goudar  |  First Published Mar 8, 2022, 9:21 AM IST

*  ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟ ಹೆಚ್ಚಳದ ಬಗ್ಗೆ ಕಳವಳ
*  ಗೂಂಡಾ ಕಾಯ್ದೆಯಂತಹ ಕಠಿಣ ಕ್ರಮಕ್ಕೆ ಆಗ್ರಹ
*  ಸಾರ್ವಜನಿಕರ ಸಹಕಾರವೂ ಅಗತ್ಯ
 


ಬೆಂಗಳೂರು(ಮಾ.08): ಮಾದಕ ವ್ಯಸನಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು, ಡ್ರಗ್ಸ್‌ ಪೆಡ್ಲರ್‌ಗಳನ್ನು(Drugs Peddlers) ಎನ್‌ಕೌಂಟರ್‌(Encounter) ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು, ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಪಕ್ಷಾತೀತವಾಗಿ ಸಲಹೆ ನೀಡಿದ ಸದಸ್ಯರು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್‌ ಮಾರಾಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಕಠಿಣ ಕ್ರಮದ ಮೂಲಕ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ನಿಯಮ 330ರ ಅಡಿ ರಾಜ್ಯಾದ್ಯಂತ(Karnataka) ಅದರಲ್ಲೂ, ಬೆಂಗಳೂರಿನಲ್ಲಿ(Bengaluru) ಹೆಚ್ಚುತ್ತಿರುವ ಗಾಂಜಾ(Marijuana) ಮತ್ತು ಡ್ರಗ್ಸ್‌ ಮಾರಾಟದಿಂದ ಕಾಲೇಜು ವಿದ್ಯಾರ್ಥಿಗಳು(Students) ಮತ್ತು ಸಾರ್ವಜನಿಕರು ಮಾದಕ ವ್ಯಸನಿಗಳಾಗುತ್ತಿರುವ ಕುರಿತು ಸುಮಾರು ಎರಡು ಗಂಟೆ ಕಾಲ ಸದನದಲ್ಲಿ ಚರ್ಚೆ ನಡೆಯಿತು.

Tap to resize

Latest Videos

Drugs Racket in Bengaluru: ಯುವ ಜೋಡಿ ಸೇರಿ ಮೂವರ ಬಂಧನ: 7.76 ಕೋಟಿ ರು. ಡ್ರಗ್ಸ್‌ ವಶ

ಬಿಜೆಪಿಯ(BJP) ಶಶೀಲ್‌ ಜಿ.ನಮೋಶಿ ಮಾತನಾಡಿ, ಪಂಜಾಬ್‌(Punjab) ಬಿಟ್ಟರೆ ಅತ್ಯಂತ ಹೆಚ್ಚು ಡ್ರಗ್ಸ್‌ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒ ನೇತೃತ್ವದಲ್ಲಿ ತಂಡ ಹಾಗೂ ಬೆಂಗಳೂರಿನ ಶಾಲೆ, ಕಾಲೇಜುಗಳಲ್ಲಿ ತನಿಖಾ ತಂಡಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ(Congress) ಎಸ್‌.ರವಿ ಮಾತನಾಡಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಗಾಂಜಾ, ಡ್ರಗ್ಸ್‌ ಹೆಚ್ಚುತ್ತಿದೆ. ಕೇಂದ್ರದ ಎನ್‌ಸಿಬಿ(Drug Control Agency) ಮಾದರಿಯಲ್ಲಿ ರಾಜ್ಯದಲ್ಲಿ ಎಸ್‌ಸಿಬಿಯನ್ನು ರಚಿಸಬೇಕು. ಪ್ರಮುಖವಾಗಿ ಡ್ರಗ್‌ ಮಾರಾಟ ಮಾಡುವವರ ವಿರುದ್ಧ ಕಾನೂನು ಅತ್ಯಂತ ಸರಳವಾಗಿದೆ, ಹಾಗಾಗಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಒಬ್ಬರಿಗೂ ಶಿಕ್ಷೆ ಆಗ್ತಿಲ್ಲ:

ಬಿಜೆಪಿ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, ಬೆಂಗಳೂರಿನಲ್ಲಿ ಎಲ್ಲ ಕಡೆ ಡ್ರಗ್ಸ್‌ ಸಿಗುತ್ತಿದೆ. ಪೊಲೀಸ್‌(Police) ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಬಂಧನಕ್ಕೊಳಗಾದವರಲ್ಲಿ 100ರಲ್ಲಿ ಇಬ್ಬರಿಗೂ ಶಿಕ್ಷೆಯಾಗುತ್ತಿಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದರು.

ಕಾಂಗ್ರೆಸ್‌ ಸದಸ್ಯ ಸಲೀಂ ಅಹಮದ್‌ ಮಾತನಾಡಿ, ಸರ್ಕಾರ ಡ್ರಗ್ಸ್‌ ಪೆಡ್ಲರ್‌ಗಳನ್ನು ಎನ್‌ಕೌಂಟರ್‌ ಮಾಡುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರ ಸಹಕಾರವೂ ಅಗತ್ಯ:

ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮಾತನಾಡಿ, 2019ರಲ್ಲಿ 1661 ಇದ್ದ ಪ್ರಕರಣಗಳು 2021ರಲ್ಲಿ 5785ಕ್ಕೆ ಹೆಚ್ಚಿದ್ದು, ಪೊಲೀಸ್‌ ಇಲಾಖೆ ಶ್ರಮವಹಿಸುತ್ತಿದೆ. ಇದಕ್ಕೆ ಬೆಂಬಲಿಸುವ ಪೊಲೀಸರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಕೂಡಾ 1908 ಸಹಾಯವಾಣಿ ಕರೆ ತಿಳಿಸಬೇಕು. ಒಂದಕ್ಕಿಂತ ಹೆಚ್ಚು ಭಾರಿ ಬಾರಿ ಸಿಕ್ಕಿಬೀಳುವ ಪೆಡ್ಲರ್‌ಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Bengaluru Drug Racket: ಚಕ್ಕುಲಿ-ನಿಪ್ಪಟ್ಟು ಮಾರೋದು ಬಿಟ್ಟು ಗಾಂಜಾ ದಂಧೆಗೆ ಇಳಿದ ಇಬ್ಬರ ಸೆರೆ!

ನೈತಿಕ ಶಿಕ್ಷಣ ಆರಂಭಿಸಿ

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಮಾದಕ ವ್ಯಸನ ಹೈಸ್ಕೂಲ್‌ ಮಟ್ಟದಲ್ಲಿ ಆರಂಭವಾಗಲು ನೈತಿಕ ಶಿಕ್ಷಣ(Moral Education) ಕೊರತೆ ಕಾರಣವಾಗಿದೆ. ಕಡ್ಡಾಯವಾಗಿ ಪಠ್ಯದಲ್ಲಿ ನೈತಿಕ ಶಿಕ್ಷಣ ಸೇರ್ಪಡೆ ಮಾಡಬೇಕು. ವಿಶೇಷ ಶಿಬಿರಗಳನ್ನು ಶಾಲೆ, ಕಾಲೇಜುಗಳಲ್ಲಿ ನಡೆಸಬೇಕು. ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಮಾದಕ ವ್ಯಸನ ಪ್ರವೇಶಿಸದಂತೆ ತಡೆಗಟ್ಟುತ್ತೇನೆ ಎಂದು ನಿರ್ಧರಿಸಬೇಕು,ಜತೆಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕು, ವಿಶೇಷ ಕಾಯ್ದೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ಬೆಂಗಳೂರು: ಹೊರರಾಜ್ಯದಿಂದ ನಗರಕ್ಕೆ ಗಾಂಜಾ(Marijuana) ತಂದು ಮಾರಾಟ ಮಾಡುತ್ತಿದ್ದ ಮೂವರು ಅಂತರ್‌ ರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಾಣಸವಾಡಿ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಫೆ.14 ರಂದು ನಡೆದಿತ್ತು.

ತ್ರಿಪುರ ರಾಜ್ಯದ ಖಮ​ರುಲ್ಲ ಇಸ್ಲಾಂ(27), ಸಾಹಿದ್‌ ಮಿಯಾ​(40) ಮತ್ತು ಖುರ್ಷಿದ್‌ ಮಿಯಾ​(21) ಬಂಧಿ​ತರು(Arrest). ಆರೋ​ಪಿ​ಗ​ಳಿಂದ(Accused) ಆರು ಲಕ್ಷ ರು. ಮೌಲ್ಯದ 19.5 ಕೆ.ಜಿ. ತೂಕದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಭಾನುವಾರ ಸಂಜೆ ಬಾಣ​ಸ​ವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಗಾಂಜಾ ಮಾರಾ​ಟಕ್ಕೆ ಮುಂದಾ​ಗಿ​ದ್ದರು. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ಬಂಧಿ​ಸ​ಲಾ​ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
 

click me!