ಪಾವಗಡ: ಆ್ಯಂಬುಲೆನ್ಸ್‌ ಸಿಗದ್ದಕ್ಕೆ ಬೈಕ್‌ನಲ್ಲಿ ಶವ ಸಾಗಿಸಿದ ಮಕ್ಕಳು!

By Kannadaprabha News  |  First Published Sep 19, 2024, 12:48 PM IST

 ಎಷ್ಟೇ ಪರದಾಟ ನಡೆಸಿದರೂ ಶವ ಸಾಗಿ ಸಲು ಆ್ಯಂಬುಲೆನ್ಸ್ ಹಾಗೂ ಯಾವುದೇ ವಾಹನ ಸಿಗದ ಕಾರಣ ಮಕ್ಕಳು ತಮ್ಮ ದ್ವಿಚಕ್ರ ವಾಹನದಲ್ಲಿಯೇ ಮೃತಪಟ್ಟಿರುವ ವೃದ್ಧ ತಂದೆಯ ಮೃತದೇಹವನ್ನು ಕರೆದೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ.


ಪಾವಗಡ (ಸೆ.19):  ಎಷ್ಟೇ ಪರದಾಟ ನಡೆಸಿದರೂ ಶವ ಸಾಗಿ ಸಲು ಆ್ಯಂಬುಲೆನ್ಸ್ ಹಾಗೂ ಯಾವುದೇ ವಾಹನ ಸಿಗದ ಕಾರಣ ಮಕ್ಕಳು ತಮ್ಮ ದ್ವಿಚಕ್ರ ವಾಹನದಲ್ಲಿಯೇ ಮೃತಪಟ್ಟಿರುವ ವೃದ್ಧ ತಂದೆಯ ಮೃತದೇಹವನ್ನು ಕರೆದೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕಿನ ದಳವಾಯಿಹಳ್ಳಿ ಗ್ರಾಮದ ವೃದ್ಧ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರನ್ನು ಕಳೆದ ಮಂಗಳವಾರ ತಾಲೂಕಿನ ವೈ.ಎನ್ ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ತಂದೆ. ಆದರೆ ಸ್ವಗ್ರಾಮಕ್ಕೆ ಶವ ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ಗಾಗಿ ಪರದಾಡಿದ್ದ ಮಕ್ಕಳು. ಯಾವುದೇ ವಾಹನ ಆಂಬುಲೆನ್ಸ್ ಸಿಗದ ಕಾರಣ ಕೊನೆಗೆ ವಿಧಿಯಿಲ್ಲದೇ ಮೃತದೇಹವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸ್ವಗ್ರಾಮ ದಳವಾಯಿಗೆ ಹೋಗಿದ್ದ ಮಕ್ಕಳು. 

Tap to resize

Latest Videos

undefined

ಎದೆನೋವು ಎಂದರೂ ಗದರಿಸಿ ಕೂರಿಸಿದ ಶಿಕ್ಷಕ. ತರಗತಿಯಲ್ಲೇ ವಿದ್ಯಾರ್ಥಿ ಸಾವು!

ಘಟನೆ ಬಗ್ಗೆ ಮಾಹಿತಿ ತಿಳಿದು ಪ್ರತಿಕ್ರಿಯಿಸಿ ಪಾವಗಡ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ಕಿರಣ್, ಸರ್ಕಾರದ ಅನುಮತಿ ಇಲ್ಲದ ಕಾರಣ ಶವ ಸಾಗಿರಸಲು ಸರ್ಕಾರಿ ಆಂಬುಲೆನ್ಸ್ ಕಳಿಸಲು ಸಾಧ್ಯವಾಗಲಿಲ್ಲ. ರೋಗಿಗಳನ್ನು ಕರೆ ತರಲು ಮಾತ್ರ ಆ್ಯಂಬುಲೆನ್ಸ್ ಕಳುಹಿಸಲಾಗುತ್ತದೆ. ಯಾರಾದರೂ ಮೃತರಾದರೆ ಅವರ ಮನೆಯವರು ತಮ್ಮ ಸ್ವಂತ ಖರ್ಚಿನಲ್ಲಿ ಬೇರೆ ವಾಹನ ಮಾಡಿಕೊಂಡು ತಮ ಗ್ರಾಮಗಳಿಗೆ ಶವ ಸಾಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

click me!