ಕಮಿಷನರ್ ವಾರ್ನ್ ಮಾಡಿದ್ರೂ ಗೂಂಡಾಗಿರಿ ಮುಂದುವರಿಸಿರೋ ಕೆಲವು ಆಟೋ ಡ್ರೈವರ್ಸ್!

Published : Aug 14, 2023, 12:47 PM ISTUpdated : Aug 14, 2023, 12:55 PM IST
ಕಮಿಷನರ್ ವಾರ್ನ್ ಮಾಡಿದ್ರೂ ಗೂಂಡಾಗಿರಿ ಮುಂದುವರಿಸಿರೋ ಕೆಲವು ಆಟೋ ಡ್ರೈವರ್ಸ್!

ಸಾರಾಂಶ

ಚಾಲನೆಯಲ್ಲಿದ್ದ ಕಾರಿಗೆ ಆಟೋ ಟಚ್‌ ಮಾಡಿ ಚಾಲಕನೋರ್ವ ಸುಲಿಗೆಗೆ ಯತ್ನಿಸಿದ ಘಟನೆ  ನಗರದ ಕೂಡ್ಲುಗೇಟ್ ಬಳಿ ನಡೆದಿದೆ. ಸೋಷಿಯಲ್ ಮೀಡಿಯಾ ಮೂಲಕ ಕಮಿಷನರ್ ವಾರ್ನ್ ಮಾಡಿದ್ರೂ ಗೂಂಡಾಗಿರಿ ಮುಂದುವರಿಸಿರೋ ಕೆಲವು ಆಟೋಚಾಲಕರು. 

ಬೆಂಗಳೂರು (ಆ.14) ಚಾಲನೆಯಲ್ಲಿದ್ದ ಕಾರಿಗೆ ಆಟೋ ಟಚ್‌ ಮಾಡಿ ಚಾಲಕನೋರ್ವ ಸುಲಿಗೆಗೆ ಯತ್ನಿಸಿದ ಘಟನೆ  ನಗರದ ಕೂಡ್ಲುಗೇಟ್ ಬಳಿ ನಡೆದಿದೆ. ಸೋಷಿಯಲ್ ಮೀಡಿಯಾ ಮೂಲಕ ಕಮಿಷನರ್ ವಾರ್ನ್ ಮಾಡಿದ್ರೂ ಗೂಂಡಾಗಿರಿ ಮುಂದುವರಿಸಿರೋ ಕೆಲವು ಆಟೋಚಾಲಕರು. ಕಮಿಷನರ್ ವಾರ್ನ್ ಮಾಡಿದ 24ಗಂಟೆಯಲ್ಲೇ ಮರುಕಳಿಸಿದ ರೋಡ್ ರೇಜ್ ಪ್ರಕರಣ. ಎಷ್ಟೇ ವಾರ್ನ್ ಮಾಡಿದ್ರೂ ಬುದ್ಧಿ ಕಲಿಯದ ಕಿಡಿಗೇಡಿಗಳು.

ಆಟೋ ಚಾಲಕನಿಂದ ತೊಂದರೆಗೊಳಗಾದ ವ್ಯಕ್ತಿ ಟ್ವೀಟ್ ಮಾಡಿ ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹಲವು ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ಇದ್ದೇನೆ. ಆಗಿನಿಂದಲೂ ಗಮನಿಸಿದ ಹಾಗೆ ಕೆಲ ಆಟೋದವ್ರ ಗೂಂಡಾಗಿರಿ ಮಾಡೋದು ನೋಡ್ತಾ ಇದ್ದೇನೆ. ಅಮಾಯಕರೊಂದಿಗೆ ಕಿರಿಕ್ ತೆಗೆದು ಹಣ ವಸೂಲಿ ಮಾಡುತ್ತಿದ್ದಾರೆ. ಗೂಂಡಾ ಪ್ರವೃತ್ತಿ ನಡೆಯುತ್ತಿದ್ದರೂ ಅಂತವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾನೆ.

Bengaluru crime: ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂದು ಟೆಕ್ಕಿ ಮೇಲೆ ಗೂಂಡಾಗಿರಿ, ಆರೋಪಿಗಳು ಅರೆಸ್ಟ್

ರಸ್ತೆಯಲ್ಲಿ ಗೂಂಡಾಗಿರಿ ನಡೆಸಿದರೆ ರೌಡಿಪಟ್ಟಿತೆರೆಯಿರಿ: ದಯಾನಂದ್‌

ಕ್ಷುಲ್ಲಕ ಕಾರಣಗಳಿಗೆ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿಜನರ ಮೇಲೆ ದುಂಡಾವರ್ತನೆ ತೋರುವ ಹಾಗೂ ಜನರಿಗೆ ಬೆದರಿಸಿ ಸುಲಿಗೆ ಮಾಡುವವರ ಕಿಡಿಗೇಡಿಗಳ ವಿರುದ್ಧ ರೌಡಿಪಟ್ಟಿತೆರೆಯುವಂತೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ವರ್ತೂರು ಹಾಗೂ ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ದಾರಿ ಬಿಡದ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿಸಾಫ್‌್ಟವೇರ್‌ ಉದ್ಯೋಗಿಗಳ ಮೇಲೆ ಪುಂಡರು ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು, ರಸ್ತೆಯಲ್ಲಿ ಪುಂಡಾಟಿಕೆ ನಡೆಸುವ ಹಾಗೂ ಜನರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಶನಿವಾರ ಟ್ವೀಟ್‌ ಮಾಡಿದ್ದಾರೆ.

ರೌಡಿಗಳ ಮೇಲೆ ನಿಗಾ:

ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ರೌಡಿ ಗುಂಪುಗಳ ನಡುವೆ ಬಡಿದಾಟವಾಗಿ ರಕ್ತಪಾತವಾದರೆ ಸಹಿಸುವುದಿಲ್ಲ ಎಂದು ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಆಯುಕ್ತ ದಯಾನಂದ್‌ ತಾಕೀತು ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಜಾಮೀನು ಪಡೆದು ಹೊರಬಂದ ರೌಡಿ ಸಿದ್ದಾಪುರದ ಮಹೇಶ್‌ನನ್ನು ಕೆಲವೇ ನಿಮಿಷಗಳಲ್ಲಿ ಜೈಲಿನ ಸಮೀಪವೇ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಲ್ಲದೆ ಡಿ.ಜೆ.ಹಳ್ಳಿ ಸಮೀಪ ಮಡಿವಾಳದ ರೌಡಿ ಕಪಿಲ್‌ನನ್ನು ಎದುರಾಳಿಗಳು ಕೊಂದಿದ್ದರು. ರೌಡಿಗಳ ಸರಣಿ ಹತ್ಯೆ ಹಿನ್ನೆಲೆಯಲ್ಲಿ ತಮ್ಮ ಕಚೇರಿಯ ಸಭಾಂಗಣದಲ್ಲಿ ಶನಿವಾರ ಇನ್‌ಸ್ಪೆಕ್ಟರ್‌ಗಳು ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳ ಸಭೆಯನ್ನು ಆಯುಕ್ತರು ನಡೆಸಿದರು.

Bengaluru crime: ತಪಾಸಣೆಗೆ ತಡೆದ ಪೊಲೀಸರ ಮೇಲೇ ಮಚ್ಚು ಬೀಸಿದ ಕಳ್ಳ!

ರೌಡಿಗಳ ವಿರುದ್ಧ ದಾಖಲಾಗಿರುವ ಹಳೇ ಪ್ರಕರಣಗಳನ್ನು ಪರಿಶೀಲಿಸಿದ ಆಯುಕ್ತರು, ಹಳೇ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ನ್ಯಾಯಾಲಯವು ರೌಡಿಗಳ ವಿರುದ್ಧ ಜಾರಿಗೊಳಿಸಿರುವ ಜಾಮೀನು ರಹಿತ ವಾರೆಂಟ್‌ಗಳ ಆಧರಿಸಿ ಕಾರ್ಯರೂಪಕ್ಕಿಳಿಸಬೇಕು. ಅಲ್ಲದೆ ರೌಡಿಗಳ ಅಡ್ಡೆಗಳು ಹಾಗೂ ಅವರ ಆರ್ಥಿಕ ವಹಿವಾಟಿನ ಬಗ್ಗೆ ಮಾಹಿತಿ ಪಡೆದು ನಿಗಾವಹಿಸಬೇಕು. ರೌಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುವಂತೆ ದಯಾನಂದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್