ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.
ಬೆಂಗಳೂರು (ಜೂ. 20): ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.
ಜೂನ್ 21 ರ ಬೆಳಿಗ್ಗೆ 10.12 ರಿಂದ 1.30 ರವರೆಗೆ ಸೂರ್ಯ ಗ್ರಹಣ ಜರುಗಲಿದೆ. ಈ ಹಿನ್ನಲೆಯಲ್ಲಿ ಬಹುತೇಕ ದೇವಾಲಯಗಳು ಶನಿವಾರ ಸಂಜೆಯಿಂದಲೇ ಬಾಗಿಲು ಮುಚ್ಚಲಿದೆ.
ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗ್ರಹಣ ಶಾಂತಿ ಮಾಡಲಾಗುತ್ತದೆ. ದೇವಸ್ಥಾನದ ಅರ್ಚಕರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!
undefined
ಕೋಲಾರದ ಕುರುಡುಮಲೆ ವಿನಾಯಕ ಸ್ವಾಮಿ ದೇಗುಲ ಬಂದ್ ಆಗಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ವಿಧಿ ವಿಧಾನಗಳು ನಡೆಯಲಿವೆ.
ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ 5 ರಿಂದ 9 ರವರೆಗೆ ಸೂರ್ಯಶಾಂತಿ ಹೋಮ ಮಾಡಲಾಗುತ್ತದೆ. 9 ರಿಂದ 2 ರವರೆಗೆ ದೇವಸ್ಥಾನ ಮುಚ್ಚಲಾಗಿರುತ್ತದೆ.
ವಿಶ್ವ ವಿಖ್ಯಾತ ಕೋಟಿ ಲಿಂಗೇಶ್ವರ ದೇವಾಲಯ ಬಂದ್ ಆಗಲಿದೆ. ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದಿಲ್ಲ.