ಸಿದ್ಧಗಂಗಾ ಮಠದ ವಿದ್ಯಾರ್ಥಿಗೆ ಕೊರೋನಾ, 900 ಮಕ್ಕಳಲ್ಲಿ ಆತಂಕ!

By Suvarna NewsFirst Published Jun 20, 2020, 2:45 PM IST
Highlights

ಸಿದ್ಧಗಂಗಾ ಮಠದ ವಿದ್ಯಾರ್ಥಿಗೆ ಕೊರೋನಾ| SSLC ಪರೀಕ್ಷೆ ಹಿನ್ನೆಲೆ ಮನೆಯಿಂದ ಮಠಕ್ಕೆ ಮರಳಿದ್ದ ವಿದ್ಯಾರ್ಥಿ| ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಆತಂಕದಲ್ಲಿ 900 ವಿದ್ಯಾರ್ಥಿಗಳು

ತುಮಕೂರು(ಜೂ.20): SSLC ಪರೀಕ್ಷೆಗೆ ಮೂರು ದಿನವಿರುವಾಗಲೇ ಸಿದ್ಧಗಂಗಾ ಮಠದ ವಿದ್ಯಾರ್ಥಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ವಿದ್ಯಾರ್ಥಿಗೆ ಸೋಂಕಿರುವುದು ಖಚಿತವಾದ ಬೆನ್ನಲ್ಲೇ ಇಲ್ಲಿನ 900 ಮಂದಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಖ ನಿರ್ಮಾಣವಾಗಿದೆ. 

ಆಂಧ್ರ ಪಗ್ರದೇಶದ ಕರ್ನೂಲ್‌ನ ತನ್ನ ಮನೆಗೆ ತೆರಳಿದ್ದ ಈ ವಿದ್ಯಾರ್ಥಿ ಪರೀಕ್ಷೆ ಇರುವ ಹಿನ್ನೆಲೆ ಜೂನ್ 15 ರಂದು ಮರಳಿದ್ದ. ಕೊರೋನಾ ವೈರಸ್ ಹೆಚ್ಚು ವ್ಯಾಪಿಸುತ್ತಿರುವ ಪ್ರದೇಶಗಳಲ್ಲಿ ಕರ್ನೂಲ್ ಗುರುತಿಸಿಕೊಂಡಿದ್ದು, ವಿದ್ಯಾರ್ಥಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಈ ವರದಿ ಬಂದಿದ್ದು, ವಿದ್ಅರ್ಥಿಗೆ ಕೊರೋನಾ ಇರುವುದು ದೃಢವಾಗಿದೆ.

SSLC ಪರೀಕ್ಷೆ ಶುರುವಾಗಿಲ್ಲ, ಆಗಲೇ ರಿಸಲ್ಟ್ ಡೇಟ್ ಫಿಕ್ಸ್: ಇದು ಸೂಪರ್ ಫಾಸ್ಟ್

ಈ ಸುದ್ದಿ ಖಚಿತವಾಗುತ್ತಿದ್ದಂತೆಯೇ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಕೊರೋನಾ ಆಸ್ಪತ್ರೆಗೆ ದಾಖಲಿಸಿ, ಮತ್ತೊಮ್ಮೆ ಕೊರೋನಾ ಪರೀಕ್ಷೆ ನಡೆಸಲು ಸ್ಯಾಂಪಲ್ ಕಳುಹಿಸಿದೆ. ಈ ವಿದ್ಯಾರ್ಥಿಯಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ.

ಇನ್ನು ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಯ ರೂಂಮೇಟ್‌ ಆಗಿದ್ದ ಮೂವರು ವಿದ್ಯಾರ್ಥಿಗಳನ್ನು ತುಮಕೂರಿನ ಹಾಸ್ಟೆಲ್‌ ಒಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೊಳಡಿಸಲಾಗಿದೆ. 

ಇನ್ನು ಕಳೆದೊಂದು ವಾರದ ಹಿಂದೆ ಇಲ್ಲಿ ಕೇವಲ 150 ವಿದ್ಯಾರ್ಥಿಗಳಿದ್ದರು, ಇನ್ನುಳಿದ ವಿದ್ಯಾರ್ಥಿಗಳು ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ಮರಳಿದ್ದರು. ಎಲ್ಲರೂ ಪರಸ್ಪರ ಭೇಟಿಯಾಗಿದ್ದು, ಶೌಚಾಲಯವನ್ನೂ ಹಾಗೂ ಸ್ನಾನಗೃಹವನ್ನೂ ಬಳಸಿದ್ದರು. 

click me!