
ಬೆಂಗಳೂರು(ಮಾ.14): ಸಿಡಿ ಪ್ರಕರಣ ಸಂಬಂಧ ನನಗೆ ಬಂದ ಮಾಹಿತಿ ಮೇರೆಗೆ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ನನ್ನ ಹೋರಾಟವನ್ನೇ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಯಿತು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.
ಯುವತಿಗೆ ರಕ್ಷಣೆ ನೀಡಬೇಕು, ಆಕೆ ಭಯದ ವಾತಾವರಣದಲ್ಲಿದ್ದಾರೆ ಎಂದೇ ದೂರಿನಲ್ಲಿ ಪ್ರಸ್ತಾಪಿಸಿದ್ದೆ. ದೂರು ನೀಡಿದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಹೋರಾಟದ ಬಗ್ಗೆ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದವು. ಅಲ್ಲದೇ, ನನ್ನ ಹೋರಾಟವನ್ನೇ ತೇಜೋವಧೆ ಮಾಡುವ ಪ್ರಯತ್ನ ನಡೆದ ಕಾರಣ ದೂರನ್ನು ಹಿಂಪಡೆಯಬೇಕಾಯಿತು ಎಂದರು.
ರಾಸಲೀಲೆ ಸಿಡಿ ಕೇಸ್: ಪೊಲೀಸ್ ಠಾಣೆಗೆ ದಿನೇಶ್ ದಿಢೀರ್ ಹಾಜರ್..!
ಸಾಮಾಜಿಕ ಬದ್ಧತೆಯಿಂದ ಮತ್ತು ನನಗೆ ಬಂದ ಮಾಹಿತಿ ಮೇರೆಗೆ ಆಧಾರದ ಮೇಲೆ ದೂರು ನೀಡಿದೆ. ಯುವತಿಯ ಬಗ್ಗೆ ನನಗೆ ಎಳ್ಳಷ್ಟು ಚಿತ್ರಣ ಇರಲಿಲ್ಲ. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ