ಸಾಮಾಜಿಕ ಜಾಲತಾಣದಲ್ಲಿ ಊರು ಅಂದ್ಮೇಲೆ ಹೊಲೆಗೇರಿ ಇರುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಉಪೇಂದ್ರನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ಆ.13): ಸ್ಯಾಂಡಲ್‌ವುಟ್ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಹೇಳಿದ 'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಎಂಬ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಜಾತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ನಟ ಉಪೇಂದ್ರನ ವಿರುದ್ಧ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ನಟ ಉಪೇಂದ್ರ ಅವರ ಹೇಳಿಕೆಯ ಕುರಿತು ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದದಾರೆ. ಸಾಮಾಜಿಕ ಜಾಲತಾಣದ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವಾಗ 'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಪದ ಬಳಸಿದ್ದರು. ಇದಾದ ನಂತರ, ಅವರೇ ಅಪ್ಲೋಡ್ ಮಾಡಿದ್ದ ವೀಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು. ಆದರೂ, ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಭೌತಿಕವಾಗಿ ರಾಮನಗರ ಸೇರಿ ವಿವಿಧೆಡೆ ಪ್ರತಿಭಟನೆ ಕೂಡ ಮಾಡಲಾಗಿದೆ.
'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ
ದಲಿತ ಸಮುದಾಯದ ಜಾತಿ ಭಾವನೆಗೆ ಧಕ್ಕೆ: ಉಪೇಂದ್ರ ಮಾತನಾಡಿರುವ ಮಾತಿನಿಂದ ದಲಿತ ಸಮಾಜದಲ್ಲಿನ ಜಾತಿ ಭಾವನೆಗೆ ಘಾಸಿ ಉಂಟಾಗಿದೆ. ಆದ್ದರಿಂದ ಉಪೇಂದರ ಅವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸಮತಾ ಸೈನಿಕ ದಳದ ಮುಖಂಡರು ಪತ್ರಮುಖೇನ ಸಾಮಾಜ ಕಲ್ಯಾಣ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಇನ್ನು ವಿಡಿಯೋ ಕ್ಲಿಪ್ ಅನ್ನು ನೋಡಲಾಗಿ, ಮನವಿ ಪತ್ರದಲ್ಲಿ ಸತ್ಯಾಂಶ ಇದ್ದುದರಿಂದ ಅವರ ಮೇಲೆ ದೂರು ದಾಖಲಿಸಲಾಗಿದೆ. ಸಾರ್ವಜನಿಕ ಜೀವನದಲ್ಲಿ ನಟನಾಗಿರುವ ಉಪೇಂದ್ರ ಅವರು ರಾಜ್ಯಕ್ಕೆ ಮಾದರಿಯಾಗಬೇಕಿತ್ತು. ಆದರೆ, ಈಗ ಅವರ ಹೇಳಿಕೆಯನ್ನು ಕೆಲವರು ಅನುಕರಣೆ ಮಾಡಿದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಜಾತಿನಿಂದನೆ ಆರೋಪದಡಿ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.
ಉಪೇಂದ್ರನಿಗೆ ಕಂಡಲ್ಲಿ ಮಸಿ ಬಳಿಯುವುದಾಗಿ ಎಚ್ಚರಿಕೆ ಕೊಟ್ಟ ಪ್ರತಿಭಟನಾಕಾರರು: ಇನ್ನು ನಟ ಉಪೇಂದ್ರ ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ ಎಂದು ಹೇಳಿಕೆ ನೀಡಿ ದಲಿತರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಪ್ರತಿಭಟನೆ ನಟ ಉಪೇಂದ್ರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮತಾ ಸೈನಿಕ ದಳ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಹಾಗೂ ದಲಿತ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಉಪೇಂದ್ರ ಅವರು ತಮ್ಮ ಹೇಳಿಕೆ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಂಡಲ್ಲಿ ಮಸಿ ಬಳಿಯುವುದಾಗಿ ಉಪೇಂದ್ರನಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಅವರ ಚಲನಚಿತ್ರಗಳಿಗೂ ಘೆರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
Bharjari Bachelors ಫ್ಯಾಮಿಲಿ ರೌಂಡ್: ಬ್ಯಾಚುಲರ್‌ಗಳ ಅಪ್ಪ- ಅಮ್ಮ ಹೇಗಿದ್ದಾರೆ ಗೊತ್ತಾ? ಇಲ್ಲಿ ನೋಡಿ..
ಉಪೇಂದ್ರ ಮಾತನಾಡಿದ ವೀಡಿಯೋದಲ್ಲೇನಿದೆ?
"ಇನ್ನೋಸೆಂಟ್ ಹೃದಯಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ. ಇನ್ನೋಸೆಂಟ್ ಅಂದರೆ ಮುಗ್ಧತೆ ಇದೆಯಲ್ಲಾ ಅದೇ ಸತ್ಯದ ಮನಸ್ಸು. ಇನ್ನೋಸೆಂಟ್ ಮನಸ್ಸುಗಳು ಇಲ್ಲಿ ಜಾಯಿನ್ ಆಗಲಿ ಮಾತನಾಡಲಿ, ಹೇಳುವುದಕ್ಕೆ ಇಷ್ಟಪಡ್ತೀನಿ. ಅವರಿಂದ ನಮಗೆ ತುಂಬಾ ಬೆನಿಫಿಟ್ ಇದೆ, ಸಜೆಷನ್ ಕೂಡ ಉತ್ತಮವಾಗಿರುತ್ತದೆ. ಏನೋ ಒಂದು ಕೇರ್‌ಲೆಸ್ ಆಗಿ ಏನೋ ಒಂದು ಸಜೆಸ್ಟ್ ಮಾಡೋಣ, ಕೇರ್‌ಲೆಸ್‌ಆಗಿ ಅವಹೇಳನ ಮಾಡುವುದಾಗಲಿ, ಏನೋ ನಾವು ಮಾತನಾಡಬೇಕು ಟೈಮ್ ಇದೆ ಎಂದು ಬಾಯಿಗೆ ಬಂದಂತೆ ಕಮೆಂಟ್ ಮಾಡೋಣ ಎನ್ನುವವರೂ ಇದ್ದಾರೆ. ಅಂತಹವರನ್ನ ಬಿಡಿ, ಅವರನ್ನು ಏನೂ ಮಾಡೋಕೆ ಆಗಲ್ಲ. "ಊರು ಎಂದಮೇಲೆ ಹೊಲೆಗೇರಿ ಇರುತ್ತೆ", ಆ ತರಹ ಇಂಥವರೂ ಇರುತ್ತಾರೆ ಜಗತ್ತಲ್ಲಿ ಏನೂ ಮಾಡೋಕಾಗಲ್ಲ. ಅವರನ್ನೆಲ್ಲಾ ಬಿಟ್ಟಾಕೋಣ ಅದನ್ನು ಓದೋದು ಬೇಡ ನಾವು. ಸ್ವಲ್ಪ ನಾವು ಹೇಳ್ತಿರೋದು ಇಂಥ ಒಂದು ಪ್ಯೂರ್ ಜನರನ್ನ ಪ್ರೀತಿಸೋವಂಥದ್ದು, ಜನರನ್ನು ಪ್ರೀತಿಸುವುದೇ ಜನಾರ್ಧನನ ಪೂಜೆ ಎನ್ನುತ್ತಾರೆ. ಜನರನ್ನು ಪ್ರೀತಿಸುವುದೇ ದೇಶಪ್ರೇಮ ಎನ್ನುತ್ತಾರೆ' ಎಂದು ಮಾತನಾಡಿದ್ದಾರೆ.