ಎತ್ತುಗಳು ಸಿಗದ್ದಕ್ಕೆ ಪತ್ನಿ, ಮೊಮ್ಮಕ್ಕಳ ಕೊರಳಿಗೆ ನೊಗ ಕಟ್ಟಿ ಯಡೆಕುಂಟೆ ಹೊಡೆದ ರೈತ!

By Ravi JanekalFirst Published Aug 13, 2023, 4:14 PM IST
Highlights

ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ರೈತ ಕಾರ್ಮಿಕರ ಅಲಭ್ಯತೆ ಹೆಚ್ಚಾಗಿದ್ದು, ತಾಲೂಕಿನ ಕವಲೆತ್ತು ಗ್ರಾಮದ ರೈತರೊಬ್ಬರು ಹೊಲದಲ್ಲಿ ಯಡೆಕುಂಟೆ ಹೊಡೆಯಲು ಪತ್ನಿ ಹಾಗೂ ಮೊಮ್ಮಕ್ಕಳನ್ನು ಬಳಸಿಕೊಂಡಿದ್ದಾರೆ.

ರಾಣಿಬೆನ್ನೂರು (ಆ.13) :  ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ರೈತ ಕಾರ್ಮಿಕರ ಅಲಭ್ಯತೆ ಹೆಚ್ಚಾಗಿದ್ದು, ತಾಲೂಕಿನ ಕವಲೆತ್ತು ಗ್ರಾಮದ ರೈತರೊಬ್ಬರು ಹೊಲದಲ್ಲಿ ಯಡೆಕುಂಟೆ ಹೊಡೆಯಲು ಪತ್ನಿ ಹಾಗೂ ಮೊಮ್ಮಕ್ಕಳನ್ನು ಬಳಸಿಕೊಂಡಿದ್ದಾರೆ.

ಗ್ರಾಮದ ರೈತ ಶೇಖಪ್ಪ ಹಲಗೇರಿ ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಎಡೆಕುಂಟೆ ಹೊಡೆಯಲು ಎತ್ತುಗಳು ದೊರಕದ ಕಾರಣ ಅನಿವಾರ್ಯವಾಗಿ ಪತ್ನಿ ಮಂಜಮ್ಮ, ಮೊಮ್ಮಕ್ಕಳಾದ ಭುವನ್‌ ಮತ್ತು ಕಾರ್ತಿಕ್‌ ನೆರವು ಪಡೆದಿದ್ದಾರೆ. ಎತ್ತುಗಳ ಜಾಗದಲ್ಲಿ ಮೊಮ್ಮಕ್ಕಳು ನೊಗವನ್ನು ಎಳೆಯುತ್ತಿದ್ದಾರೆ.

ಗ್ಯಾರಂಟಿ ಜಾರಿಯಿಂದ ಕರ್ನಾಟಕದ ಜಿಡಿಪಿ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಕೃಷಿ ಕಾರ್ಮಿಕರುಗಳಿಗೆ ಕೆಲಸವಿಲ್ಲದೆ ನಿರುದ್ಯೋಗಕ್ಕೆ ಕಾರಣವಾಯಿತು. ಬೇರೆ ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗಿ ಕಟ್ಟಡ ಕಾರ್ಮಿಕರಾಗಿ ಬದಲಾಗಿದ್ದಾರೆ. 

ಇನ್ನೂ ಬಹಳಷ್ಟು ಬಡ ರೈತರಿಗೆ ಕೃಷಿ ಮಾಡಲು ತಂತ್ರಜ್ಞಾನ ಬಳಕೆ ಮಾಡುವಷ್ಟು ಆರ್ಥಿಕವಾಗಿ ಸದೃಢರಲ್ಲದ ಕಾರಣ ಈಗಲೂ ಉಳುಮೆ ಮಾಡಲು ಎತ್ತುಗಳನ್ನೇ ಅವಲಂಬಿಸಿದ್ದಾರೆ ಆದರೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಕೆಸರು ಗದ್ದೆ ಮಾಡಿಕೊಳ್ಳುವುದರಿಂದ ಹಿಡಿದು ಕೊಯ್ಲು ಮಾಡಿ ಭತ್ತ ಮನೆಗೆ ತರುವವರೆಗೆ ಪ್ರತಿಯೊಂದು ಕೆಲಸಕ್ಕೂ ಕೂಲಿ ಕಾರ್ಮಿಕರು ಬೇಕೇ ಬೇಕು. ಆದರೆ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.

ಬಾಗಲಕೋಟೆ: ತೇರದಾಳದಲ್ಲಿ ಮತ್ತೆ ಮೊಸಳೆ ಮರಿಗಳು ಪ್ರತ್ಯಕ್ಷ, ಆತಂಕದಲ್ಲಿ ರೈತರು

ಕಳೆದ ದಶಕದಲ್ಲಿ, ಭಾರತದ ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಅದರ ಹೊರತಾಗಿಯೂ ಕಾರ್ಮಿಕರ ಲಭ್ಯತೆಯಲ್ಲಿ ತೀವ್ರ ಕುಸಿತವನ್ನು ಅನುಭವಿಸುತ್ತಿದೆ.

click me!