ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣದ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನಾಪತ್ತೆಯಾಗಿದ್ದಾರೆ. ಚಾಮುಂಡಿಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ರೂಪಾ ವಿರುದ್ಧ ಸೀರೆ ಕಳ್ಳತನದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧವೇ ಪ್ರತಿದೂರು ದಾಖಲಾಗಿದೆ.
ಮೈಸೂರು (17): ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಭಾವಮೈದ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ನಾಲ್ವರ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣದ ದೂರು ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ನಾಪತ್ತೆ ಆಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.
ಹೌದು, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನಾಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸ್ನೇಹಮಯಿಕೃಷ್ಣ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ದೂರುದಾರ ಆಗಿರುವ ಸ್ನೇಹಮಯಿ ಕೃಷ್ಣ ಅವರು, ಇದೀಗ ಚಾಮುಂಡಿಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ರೂಪ ವಿರುದ್ಧ ಸೀರೆ ಕಳ್ಳತನ ಆರೋಪವನ್ನೂ ಮಾಡಿದ್ದರು. ಆದರೆ, ಈ ದೂರು ಸ್ನೇಹಮಯಿ ಕೃಷ್ಣ ಅವರ ವಿರುದ್ಧವೇ ತಿರುಗಿ ಬಿದ್ದಿದೆ. ದೂರು ಕೊಟ್ಟ ಸ್ನೇಹಮಯಿ ಕೃಷ್ಣ ವಿರುದ್ಧವೇ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಅವರು ಪ್ರತಿದೂರು ನೀಡಿದ್ದಾರೆ. ಹೀಗಾಗಿ, ಮೈಸೂರು ಪೊಲೀಸರು ಸ್ನೇಹಮಯಿ ಕೃಷ್ಣಗಾಗಿ ಹುಡಕಾಟ ನಡೆಸುತ್ತಿದ್ದಾರೆ.
undefined
ಸ್ನೇಹಮಯಿ ಕೃಷ್ಣ ಡಿಸೆಂಬರ್ 12 ರಂದು ಕೆಆರ್.ಪೊಲೀಸ್ ಠಾಣೆಯಲ್ಲಿ ಚಾಮುಂಡಿಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ರೂಪ ವಿರುದ್ಧ ಸೀರೆ ಕಳ್ಳತನ ಆರೋಪ ಮಾಡಿ ದೂರು ನೀಡಿದ್ದರು. ಇದಾದ ಬಳಿಕ ಡಿಸೆಂಬರ್ 14 ರಂದು ಸ್ನೇಹಮಯಿ ಕೃಷ್ಣ ವಿರುದ್ಧ ರೂಪಾ ಅವರು ಕೆ.ಆರ್.ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದರು. ಕರ್ತವ್ಯಕ್ಕೆ ಅಡ್ಡಿ ಮಾಡಿಲಾಗಿದೆ ಎಂದು ದೂರು ದಾಖಲು ಮಾಡಿದ್ದರು. ಇದೀಗ ಕೆ.ಆರ್.ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಸ್ನೇಹಮಯಿ ಕೃಷ್ಣ ಕಾಣೆಯಾಗಿದ್ದಾರೆ. ಬಂಧನದ ಬೀತಿಯಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಳ್ಳತನದ ಬಗ್ಗೆ ಠಾಣೆ ಗೆ ದೂರು ತಂದೆ ವ್ಯಕ್ತಿಗೇ ಬಂಧನದ ಬೀತಿ ಎದುರಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದ್ವೇಷ ಸಾಧಿಸುತ್ತಿದಿಯಾ ರಾಜ್ಯ ಸರ್ಕಾರ ಎಂಬ ಅನುಮಾನ ಎದುರಾಗಿದೆ. ಚಾಮುಂಡೇಶ್ವರಿ ದೇವಿ ಸೀರೆ ಕಳ್ಳತನ ದೂರು ಕೊಟ್ಟವರ ಮೇಲೆ ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಪೊಲೀಸರ ಸಮ್ಮುಖದಲ್ಲಿ ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ ಕಚೇರಿಗೆ ತೆರಳಿದ್ದ ಸ್ನೇಹಮಯಿ ಕೃಷ್ಣ ಅವರು ಸೀರೆ ಕಳ್ಳತನ ಬಗ್ಗೆ ಕೆಆರ್.ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಈ ವೇಳೆ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ದೂರು ಕೊಟ್ಟ ನಂತರ ಠಾಣೆಯಿಂದ ಪ್ರಾಧಿಕಾರದ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಆಗ ಪೊಲೀಸರು ಕರೆದುಕೊಂಡು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: Breaking: ಕನ್ನಡದ ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ
ಪೊಲೀಸರು ಸ್ನೇಹಮಯಿ ಕೃಷ್ಣನನ್ನು ಕಾರ್ಯದರ್ಶಿ ಕಚೇರಿಗೆ ಕರೆದುಕೊಂಡು ಹೋಗಿದ್ದರೂ, ಅದರನ್ನು ಮುಚ್ಚಿಟ್ಟು ಸ್ನೇಹಮಯಿ ಕೃಷ್ಣ ಬಂದು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ದೂರು ಕೊಟ್ಟಿದ್ದಾರೆ. ಇದೇ ರೀತಿ ಪೊಲೀಸರು ಕೂಡ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಅಂದರೆ ಈ ದೂರಿನಲ್ಲಿ ಪೊಲೀಸರು ಜೊತೆ ಹೋಗಿರುವ ವಿಚಾರವನ್ನ ಮುಚ್ಚಿಡಲಾಗಿದೆ. ಎಫ್.ಐ.ಆರ್ ಸಾರಂಶದಲ್ಲಿ ಪೊಲೀಸರು ತಾವು ಸ್ನೇಹಮಯಿ ಕೃಷ್ಣನೊಂದಿಗೆ ಹೋಗಿದ್ದ ಅಂಶವನ್ನು ತೆಗೆದುಹಾಕಿದ್ದಾರೆ. ಪೊಲೀಸರ ಈ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸ್ನೇಹಮಯಿ ಕೃಷ್ಣಸೀರೆ ಕಳ್ಳತನ ವಿಚಾರವಾಗಿ ತನಿಖೆ ಮಾಡಿ ಎಂದು ವೀಡಿಯೋ ಸಮೇತ ದೂರು ನೀಡಿದ್ದರು. ಡಿಸೆಂಬರ್ 12 ರಂದು ಕೆಆರ್.ಪೊಲೀಸ್ ಠಾಣೆಗೆ ನೀಡಿದ್ದ ದೂರು. ಆದರೆ, ಸ್ನೇಹಮಯಿ ನೀಡಿದ್ದ ದೂರಿಗೆ ಎಫ್.ಐ.ಆರ್. ದಾಖಲಿಸಿರಲಿಲ್ಲ. ಸದ್ಯಕ್ಕೆ ಇದೀಗ ಸ್ನೇಹಮಯಿ ಕೃಷ್ಣ ಬಂಧನ ಭೀತಿಯಲ್ಲಿದ್ದಾರೆ. ಸದ್ಯ ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಅಧಿಕಾರಿಗಳ ಮೂಲಕ ಸ್ನೇಹಮಯಿಕೃಷ್ಣ ವಿರಿದ್ಧ ಸೇಡು ತೀರಿಸಿಕೊಳ್ಳುತ್ತಿದಿಯಾ ರಾಜ್ಯ ಸರ್ಕಾರ? ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕ್ಯೂಆರ್ ಕೋಡ್ ಸ್ಕ್ಯಾನ್ ಫ್ರಾಡ್: ಪೊಲೀಸಪ್ಪನಿಗೇ ₹2.3 ಲಕ್ಷ ಪಂಗನಾಮ ಹಾಕಿದ ಸೈಬರ್ ವಂಚಕರು!